Indian Navy: ಭಾರತೀಯ ನೌಕಾಪಡೆಯಲ್ಲಿ ಬಂಪರ್ ಉದ್ಯೋಗಾವಕಾಶ

Indian Navy Vaccancy: ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ 254 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. 2024 ರನೇವಿ ಎಸ್‌ಎಸ್‌ಸಿ ಅಧಿಕಾರಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಬಯಸುವವರಿಗೆಯಾಗಿ ಇಲ್ಲಿದೆ ಮಹತ್ವದ ಮಾಹಿತಿ. 

Written by - Yashaswini V | Last Updated : Feb 21, 2024, 05:53 AM IST
  • ಕಿರು ಸೇವಾ ಆಯೋಗದ ಅಧಿಕಾರಿಗಳ ನೇಮಕಾತಿ 2024 ಗಾಗಿ ಅರ್ಜಿ ಆಹ್ವಾನ
  • ಕಿರು ಸೇವಾ ಆಯೋಗದ ಅಧಿಕಾರಿಗಳ ನೇಮಕಾತಿ 2024 ಮೂಲಕ ನೌಕಾಪಡೆಯಲ್ಲಿ ಒಟ್ಟು 254 ಅಧಿಕಾರಿಗಳ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.
  • ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ನೌಕಾಪಡೆಯ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.
Indian Navy: ಭಾರತೀಯ ನೌಕಾಪಡೆಯಲ್ಲಿ ಬಂಪರ್ ಉದ್ಯೋಗಾವಕಾಶ  title=

Vaccancy In Indian Navy: ನೀವು ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಕ್ಕಾಗಿ ನಿರೀಕ್ಷೆಯಲ್ಲಿದ್ದರೆ ನಿಮಗಾಗಿ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ. ಭಾರತೀಯ ನೌಕಾಪಡೆಯು ಲಭ್ಯವಿರುವ 254 ಹುದ್ದೆಗಳಿಗೆ ನೌಕಾಪಡೆಯ SSC ಅಧಿಕಾರಿ ನೇಮಕಾತಿ 2024 ಅನ್ನು ಬಿಡುಗಡೆ ಮಾಡಿದೆ . 2024 ರ ನೇವಿ ಎಸ್‌ಎಸ್‌ಸಿ ಅಧಿಕಾರಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು  ಬಯಸುವ ಆಸಕ್ತ ಅಭ್ಯರ್ಥಿಗಳಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ. 

ಭಾರತೀಯ ನೌಕಾಪಡೆಯು ಖಾಲಿ ಹುದ್ದೆಗಳಿಗೆ ಶಾರ್ಟ್ ಸರ್ವಿಸ್ ಕಮಿಷನ್ ಅಭ್ಯರ್ಥಿಗಳ ನೇಮಕಾತಿಗಾಗಿ ಪ್ರಕಟಣೆಯನ್ನು ಹೊರಡಿಸಿದೆ. ಕಿರು ಸೇವಾ ಆಯೋಗದ ಅಧಿಕಾರಿಗಳ ನೇಮಕಾತಿ 2024ರ ಮೂಲಕ ನೌಕಾಪಡೆಯಲ್ಲಿ ಒಟ್ಟು 254 ಅಧಿಕಾರಿಗಳ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://www.joinindiannavy.gov.in ನಲ್ಲಿ ಅರ್ಜಿ ಸಲ್ಲಿಸಬಹುದು. 

ಅರ್ಜಿ ಪ್ರಕ್ರಿಯೆ ಆರಂಭ ಮತ್ತು ಮುಕ್ತಾಯದ ದಿನಾಂಕ: 
ಬಿಡುಗಡೆಯಾಗಿರುವ ಅಧಿಸೂಚನೆಯ ಪ್ರಕಾರ, , ಜನವರಿ 2025 (ST 25) ಕೋರ್ಸ್‌ಗೆ ಅರ್ಜಿ ಪ್ರಕ್ರಿಯೆಯು ಫೆಬ್ರವರಿ 24 ರಿಂದ ಪ್ರಾರಂಭವಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 10, 2024 ಆಗಿರಲಿದೆ. 

ಇದನ್ನೂ ಓದಿ- ಭಾರತೀಯ ಸೇನೆಯಲ್ಲಿ ನರ್ಸಿಂಗ್ ಸಹಾಯಕ ಹುದ್ದೆಗಳಿಗೆ ನೇಮಕಾತಿ ಪ್ರಕಟ

ಭಾರತೀಯ ನೌಕಾಪಡೆಯ ಈ ಶಾಖೆಗಳು/ಕೇಡರ್‌ಗಳಲ್ಲಿ SSC ಅಧಿಕಾರಿಗಳ ನೇಮಕಾತಿ ನಡೆಯಲಿದೆ: 
* ಕಾರ್ಯನಿರ್ವಾಹಕ ಶಾಖೆ-
ಸಾಮಾನ್ಯ ಶಾಖೆ, ಪೈಲಟ್‌ಗಳು, ನೌಕಾ ವಾಯು ಕಾರ್ಯಾಚರಣೆ ಅಧಿಕಾರಿಗಳು, ಏರ್ ಟ್ರಾಫಿಕ್ ಕಂಟ್ರೋಲರ್‌ಗಳು, ಲಾಜಿಸ್ಟಿಕ್ಸ್, ನೇವಲ್ ಆರ್ಮಮೆಂಟ್ ಇನ್‌ಸ್ಪೆಕ್ಟರೇಟ್ (NAIC)
* ಶಿಕ್ಷಣ ಶಾಖೆ - ಶಿಕ್ಷಣ
* ತಾಂತ್ರಿಕ ಶಾಖೆ- ಎಂಜಿನಿಯರಿಂಗ್ ಶಾಖೆ (ಸಾಮಾನ್ಯ ಸೇವೆ), ಎಲೆಕ್ಟ್ರಿಕಲ್ ಶಾಖೆ (ಸಾಮಾನ್ಯ ಸೇವೆ), ನೌಕಾ ಕನ್ಸ್ಟ್ರಕ್ಟರ್

ವಿದ್ಯಾರ್ಹತೆ: 
ಸಾಮಾನ್ಯ ಸೇವೆ, ಪೈಲಟ್, ನೌಕಾ ಕಾರ್ಯಾಚರಣೆ ಅಧಿಕಾರಿ, ಏರ್ ಟ್ರಾಫಿಕ್ ಕಂಟ್ರೋಲರ್ ಶಾಖೆ/ಕೇಡರ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಶ್ವವಿದ್ಯಾಲಯದಲ್ಲಿ  ಕನಿಷ್ಠ 60% ಅಂಕಗಳೊಂದಿಗೆ ಎಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು. 

ಲಾಜಿಸ್ಟಿಕ್ಸ್‌ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬಿಇ ಅಥವಾ ಬಿಟೆಕ್ ಹೊರತುಪಡಿಸಿ ಕನಿಷ್ಠ 60% ಅಂಕಗಳೊಂದಿಗೆ ಎಂಬಿಎ ಪದವಿ ಪಡೆದಿರಬೇಕು. 

ಶಿಕ್ಷಣ ಶಾಖೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು M.Tech/MSc ಪದವಿಯನ್ನು ಹೊಂದಿರುವುದು ಅವಶ್ಯಕವಾಗಿದೆ. 

ನೆನಪಿಡಿ: ನೌಕಾ ಕಿರು ಸೇವಾ ಆಯೋಗದ ಅಧಿಕಾರಿಗಳ ನೇಮಕಾತಿ 2024 ಗಾಗಿ, ಅರ್ಜಿದಾರರು ಅವಿವಾಹಿತರಾಗಿರಬೇಕು.

ಇದನ್ನೂ ಓದಿ- ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳ ನೇರ ಸಂದರ್ಶನಕ್ಕಾಗಿ ಅರ್ಜಿ ಆಹ್ವಾನ

ವಯೋಮಿತಿ: 
ನೌಕಾಪಡೆಯ SSC ಅಧಿಕಾರಿ ನೇಮಕಾತಿಗೆ ಅಭ್ಯರ್ಥಿಗಳು 2 ಜನವರಿ 2000 ರಿಂದ 1 ಜುಲೈ 2005 ರ ನಡುವೆ ಜನಿಸಿದವರಾಗಿರಬೇಕು. 

ಆಯ್ಕೆ ವಿಧಾನ: 
ಅರ್ಹತಾ ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅರ್ಜಿದಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಎಸ್‌ಎಸ್‌ಬಿ ಸಂದರ್ಶನಕ್ಕೆ ಕರೆಯಲಾಗುವುದು. SSB ಸಂದರ್ಶನದಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅಂತಿಮ ಆಯ್ಕೆಯ ನಂತರ, ಅವರು ಸಬ್ ಲೆಫ್ಟಿನೆಂಟ್‌ಗಳಾಗಿ ತರಬೇತಿ ಪಡೆಯಬೇಕಾಗುತ್ತದೆ. ಇದರ ನಂತರ, ಎನ್‌ಎಐಸಿಯಲ್ಲಿ 3 ವರ್ಷ ಮತ್ತು ಇತರ ಶಾಖೆಗಳಲ್ಲಿ 2 ವರ್ಷಗಳ ಕಾಲ ಪ್ರೊಬೇಷನ್‌ನಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಇದಾದ ನಂತರ ಅವರನ್ನು ಖಾಯಂ ಆಗಿ ನಿಯೋಜಿಸಲಾಗುವುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News