ಖಾಲಿ ಇರುವ ಗೃಹ ರಕ್ಷಕರ ಸ್ಥಾನಗಳ ಭರ್ತಿಗೆ ಅರ್ಜಿ ಆಹ್ವಾನ

ಪೊಲೀಸ್ ಅಧೀಕ್ಷಕರು ಹಾಗೂ ಗೃಹ ರಕ್ಷಕ ದಳದ ಆಯ್ಕೆ ಸಮೀತಿಯ ಅಧ್ಯಕ್ಷಕರು, ಕೊಪ್ಪಳ ಇವರ ಆದೇಶದಂತೆ ಕೊಪ್ಪಳ ಜಿಲ್ಲೆಯ ವಿವಿಧ ನಗರ ಮತ್ತು ತಾಲ್ಲೂಕಾ ಘಟಕಗಳಲ್ಲಿ ಖಾಲಿ ಇರುವ 128 ಸ್ಥಾನಗಳಿಗೆ ಹೊಸದಾಗಿ ಗೃಹ ರಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Written by - Manjunath N | Last Updated : Feb 20, 2024, 05:56 PM IST
  • ಅರ್ಜಿ ಸಲ್ಲಿಸಲು 19 ರಿಂದ 40 ವರ್ಷ ಮತ್ತು ದೈಹಿಕವಾಗಿ ಸದೃಢರಾಗಿರಬೇಕು
  • 10ನೇ ತರಗತಿ ಉತ್ತಿರ್ಣರಾಗಿರಬೇಕು
  • ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರಬಾರದು
ಖಾಲಿ ಇರುವ ಗೃಹ ರಕ್ಷಕರ ಸ್ಥಾನಗಳ ಭರ್ತಿಗೆ ಅರ್ಜಿ ಆಹ್ವಾನ title=

ಕೊಪ್ಪಳ : ಪೊಲೀಸ್ ಅಧೀಕ್ಷಕರು ಹಾಗೂ ಗೃಹ ರಕ್ಷಕ ದಳದ ಆಯ್ಕೆ ಸಮೀತಿಯ ಅಧ್ಯಕ್ಷಕರು, ಕೊಪ್ಪಳ ಇವರ ಆದೇಶದಂತೆ ಕೊಪ್ಪಳ ಜಿಲ್ಲೆಯ ವಿವಿಧ ನಗರ ಮತ್ತು ತಾಲ್ಲೂಕಾ ಘಟಕಗಳಲ್ಲಿ ಖಾಲಿ ಇರುವ 128 ಸ್ಥಾನಗಳಿಗೆ ಹೊಸದಾಗಿ ಗೃಹ ರಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಕೊಪ್ಪಳ ಪುರುಷ ಘಟಕದಲ್ಲಿ 29, ಕೊಪ್ಪಳ ಮಹಿಳಾ ಘಟಕ 6, ಮುನಿರಬಾದ ಘಟಕ 11, ಅಳವಂಡಿ ಘಟಕ 6, ಕನಕಗಿರಿ ಘಟಕ 8, ಕಾರಟಗಿ ಘಟಕ 12, ಕುಷ್ಟಗಿ ಘಟಕ 10, ಹನುಮಸಾಗರ ಘಟಕ 15, ತಾವರಗೇರಾ ಘಟಕ 11, ಯಲಬುರ್ಗಾ ಘಟಕ 5, ಕುಕನೂರ ಘಟಕ 2, ಬೇವೂರ ಘಟಕ 13 ಸೇರಿದಂತೆ ಒಟ್ಟು 128 ಸ್ಥಾನಗಳು ಖಾಲಿಯಿದ್ದು, ಅರ್ಜಿ ಸಲ್ಲಿಸಲು 19 ರಿಂದ 40 ವರ್ಷ ಮತ್ತು ದೈಹಿಕವಾಗಿ ಸದೃಢರಾಗಿರಬೇಕು. 10ನೇ ತರಗತಿ ಉತ್ತಿರ್ಣರಾಗಿರಬೇಕು. ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರಬಾರದು ಮತ್ತು ಇಲಾಖೆಯ ಘಟಕಗಳಿಂದ 8 ಕಿ.ಮೀ. ಒಳಗಡೆ ಇರುವಂತವರಾಗಿರಬೇಕು.

ಇದನ್ನೂ ಓದಿ: ಬಿಜೆಪಿ ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು: ಸಿಎಂ ಸಿದ್ದರಾಮಯ್ಯ

ಅರ್ಜಿಗಳನ್ನು ಗೃಹ ರಕ್ಷಕ ದಳದ ವಿವಿಧ ಘಟಕಗಳ ಘಟಕಾಧಿಕಾರಿಗಳಾದ ಕೊಪ್ಪಳ ವೀರಣ್ಣ.ಕೆ.ಬಡಿಗೇರ ಮೊ.ಸಂ: 9972819116, ಮುನಿರಬಾದ ರಾಮಲಿಂಗಪ್ಪ ಮೊ.ಸಂ: 8722988721, ಅಳವಂಡಿ ಮಹೆಬೂಬ್ ಹುಸೇನ ಮೊ.ಸಂ: 8296321219 ಹಾಗೂ ಅಶೋಕ ಡಂಬಳ ಮೊ.ಸಂ: 9740822505, ಗಂಗಾವತಿ ಎಸ್. ಮಿರಾಸಾಬ ಮೊ.ಸಂ: 6360605588, 8123886216, ಕನಕಗಿರಿ ಗೋಪಾಲ ಶಾಸ್ತ್ರೀ ಮೊ.ಸಂ: 9449478740, ಕಾರಟಗಿ ಅಶೋಕ ಬಡಿಗೇರ ಮೊ.ಸಂ: 9620330141, ಕುಷ್ಟಗಿ ಶಿವಪ್ಪ ಚೂರಿ ಮೊ.ಸಂ: 9900667795, ಹನಮಸಾಗರ ಅಕ್ಬರ ಚೆಳಿಗೇರಿ ಮೊ.ಸಂ: 9880817048 ಹಾಗೂ ಹನಮಂತಪ್ಪ ಮಡಿವಾಳರ ಮೊ.ಸಂ: 9902721253, ತಾವರಗೇರಾ ರವಿಂದ್ರನಾಥ ಬಳಿಗೇರ ಮೊ.ಸಂ: 9845763688, ಯಲಬುರ್ಗಾ ಬಸವರಾಜ . ಟಿ. ಮೊ.ಸಂ: 9964146924, ಕುಕನೂರ ವೀರಣ್ಣ.ಕೆ.ಬಡಿಗೇರ ಮೊ.ಸಂ: 9972819116, ಬೇವೂರ ರಾಮಚಂದ್ರಪ್ಪ ಮೊ.ಸಂ: 9902104992, ಇವರಲ್ಲಿ ಫೆಬ್ರವರಿ 29ರ ರೊಳಗಾಗಿ ಕಚೇರಿ ವೇಳೆಯಲ್ಲಿ (ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯೊಳಗೆ) ಪಡೆಯಹುದಾಗಿದೆ.

ಗೃಹ ರಕ್ಷಕರಾಗಿ ನಿಷ್ಕಾಮ ಸೇವೆ ಸಲ್ಲಿಸ ಬಯಸುವ ಅಭ್ಯರ್ಥಿಗಳು ಅರ್ಜಿಗಳೊಂದಿಗೆ ಕಡ್ಡಾಯವಾಗಿ ಶಾಲಾ ವರ್ಗಾವಣೆ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರ, ಖಾಯಂ ವಿಳಾಸಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ, ಆಧಾರ ಕಾರ್ಡ್, ಇತ್ತೀಚಿನ ನಾಲ್ಕು ಪಾಸಪೊರ್ಟ ಅಳತೆಯ ಅರ್ಜಿದಾರರ ಭಾವಚಿತ್ರಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ಫೆ.29 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಇದು ಎನ್‌ಡಿಎ ಕೊನೆಯ ಚುನಾವಣೆ, ಮೋದಿ ಸರ್ಕಾರ ಅಂತ್ಯವಾಗುತ್ತೆ ಎಂದು ಭವಿಷ್ಯ ನುಡಿದ ಶಾಸಕ ಅಬ್ಬಯ್ಯಾ ಪ್ರಸಾದ್ 

ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಸಮಾದೇಷ್ಟರ ಕಚೇರಿ ಗೃಹ ರಕ್ಷಕ ದಳ, ಹೊಸಪೇಟ್ ರಸ್ತೆ, ಅಗ್ನಿ ಶಾಮಕ ಠಾಣೆಯ ಎಡಭಾಗ, ಕೊಪ್ಪಳ ಇಲ್ಲಿ ಅಥವಾ ದೂರವಾಣಿ ಸಂಖ್ಯೆ: 08539-225533 ಗೆ ಸಂಪರ್ಕಿಸಬಹುದಾಗಿದೆ ಎಂದು ಗೃಹ ರಕ್ಷಕ ದಳದ ಪ್ರಭಾರಿ ಜಿಲ್ಲಾ ಸಮಾದೇಷ್ಟರಾದ ಡಿ.ವೈ.ಎಸ್.ಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News