ಮಹಲ್ ಗಳ ನಿರ್ಮಾತೃ ಷಹಜಾನ್

    

Updated: Jan 22, 2018 , 03:38 PM IST
ಮಹಲ್ ಗಳ ನಿರ್ಮಾತೃ ಷಹಜಾನ್

ಶಹಜಾನ್ ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ತನ್ನದೆ ಆದ ವಿಶಿಷ್ಟ ಶೈಲಿಯ ಕಟ್ಟಡಗಳನ್ನು ನಿರ್ಮಿಸುವುದರ ಮೂಲಕ ತನ್ನ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾನೆ.ಇಂತಹ ಅಪ್ರತಿಮ ವ್ಯಕ್ತಿ ಇಂದಿಗೆ (ಜನವರಿ 22) ನಿಧನ ಹೊಂದಿ 352 ವರ್ಷಗಳು ಕಳೆದಿವೆ ಆ ನಿಟ್ಟಿನಲ್ಲಿ ಶಹಜಾನ್ ಕುರಿತ ಒಂದು ಸಣ್ಣ ಬರಹ ಇಲ್ಲಿದೆ ನೋಡಿ....

1592 ಜನವರಿ 5 ರಂದು ಇಂದಿನ ಲಾಹೋರ್ ನಲ್ಲಿ  ಜಹಾಂಗೀರ್ ಗೆ ಜನಿಸಿದ ನಾಲ್ಕು ಮಕ್ಕಳಲ್ಲಿ ಇವನ್ನು ಒಬ್ಬನಾಗಿದ್ದನು. ಶೆಹೆಝಾದ ಖುರ್ರಮ್' ಎಂಬ ಜನನ ನಾಮವಿದ್ದ ಇವನು ಮೊಘಲ್ ದೊರೆ ಜಹಾಂಗೀರ್ ನ ಮೂರನೇ ಮಗ. ಗದ್ದುಗೆಗಾಗಿ ತನ್ನ ಒಡಹುಟ್ಟಿದವರೊಡನೆ ಯುದ್ಧ ಮಾಡಿ ಅಧಿಕಾರ ವಶಪಡಿಸಿಕೊಂಡನು. ತಂದೆ ಜಹಾಂಗೀರ್ ನಿಧನದ ನಂತರ ಪಟ್ಟಾಭಿಷೇಕಕ್ಕೆ ಏರಿದನು. ಇವನ ಕಾಲದಲ್ಲಿ ಮೊಘಲರ ಕಲೆ, ಶಿಲ್ಪಕಲೆ ,ಸಾಹಿತ್ಯ ಉನ್ನತವನ್ನು ಹಂತಕ್ಕೆ ತಲುಪಿಸಿದನು. ಇದಕ್ಕೆ ಪ್ರತಿರೂಪವೆಂಬಂತೆ ತಾಜ್ ಮಹಲ್, ದೆಹಲಿಯ ಕೆಂಪುಕೋಟೆ, ಜಮ್ಮಾ ಮಸಿದ್, ಶಾಲಿಮಾರ್ ತೋಟಗಳು, ಲಾಹೋರ್ ಕೋಟೆ, ಇವು ಜಗತ್ತಿನ ಶ್ರೇಷ್ಠ ಶಿಲ್ಪಕಲೆಗಳಿಗೆ ನಿದರ್ಶನಗಳಾಗಿವೆ.ಶಹಜಾನ್ ತನ್ನ ಪ್ರೇಯಸಿಗಾಗಿ ಮುಮ್ತಾಜ್ ಮಹಲ್ ನ ಗೋರಿಯಾಗಿ ಮರ್ಬಲ್ಲಿನಲ್ಲಿ ತಾಜ್ ಮಹಲ್ ನ್ನು ಕಟ್ಟಿಸಿದನು.

ಆದರೆ ತನ್ನ ಜೀವನದ ಕೊನೆಯ ಐದು ವರ್ಷಗಳನ್ನು ಔರಂಗಜೇಬನ ಆಳ್ವಿಕೆಯಲ್ಲಿ ಸೆರೆಮನೆಯಲ್ಲಿ ಕಳೆದನು. ಶಹಜಾನನ್ನು ಔರಂಗಜೇಬನ ಆಜ್ಞೆಯಂತೆ ಆಗ್ರಾ ಕೋಟೆಯಲ್ಲಿ ಕೂಡಿಹಾಕಲಾಯಿತು. ಬಂಧನ ಅವನಿಗೆ ತನ್ನ ಪತ್ನಿಯ ಗೋರಿಯನ್ನು ನೋಡಲನುವಾಗುವಂತೆ ಮಾಡಲಾಗಿತ್ತೆಂದು ಇತಿಹಾಸಕಾರರು ತಿಳಿಸಿದ್ದಾರೆ. 22 ಜನವರಿ 1666 ರಂದು ತನ್ನ 74 ನೆಯ ವಯಸ್ಸಿನಲ್ಲಿ ಷಹಜಹಾನ ಆಗ್ರಾ ಕೋಟೆಯಲ್ಲಿ ಕೊನೆಯುಸಿರೆಳೆದನು. ಅವನ ಪ್ರೇಯಸಿ  ಮುಮ್ತಾಜ್ ಜೊತೆಗೇ ತಾಜ್ ಮಹಲ್ನಲ್ಲಿಯೇ ಸಮಾಧಿ ಮಾಡಲಾಯಿತು.