Anchor Anushree: ಸ್ಯಾಂಡಲ್​ವುಡ್​ಗೆ ರೀ ಎಂಟ್ರಿ ಕೊಟ್ಟ ಆ್ಯಂಕರ್ ಅನುಶ್ರೀ..!

ಹೊಸಬರ ತಂಡಕ್ಕೆ ಸಾಥ್‌ ನೀಡಿರುವ ನಟಿ ಅನುಶ್ರೀ ಅವರು, ‘ಸೈತಾನ್‌’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Written by - Malathesha M | Edited by - Puttaraj K Alur | Last Updated : Feb 21, 2022, 04:53 PM IST
  • ಬಿಗ್‌ ಸ್ಕ್ರೀನ್‌ನಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದ ಅನುಶ್ರೀ ಬೆಳ್ಳಿತೆರೆಗೆ ರಿಟರ್ನ್‌ ಆಗುತ್ತಿದ್ದಾರೆ
  • ಹೊಸಬರ ತಂಡಕ್ಕೆ ಸಾಥ್‌ ನೀಡಿರುವ ಅನುಶ್ರೀ ‘ಸೈತಾನ್‌’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ
  • ‘ದೇವಕಿ’, ‘ಮಮ್ಮಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಲೋಹಿತ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ
Anchor Anushree: ಸ್ಯಾಂಡಲ್​ವುಡ್​ಗೆ ರೀ ಎಂಟ್ರಿ ಕೊಟ್ಟ ಆ್ಯಂಕರ್ ಅನುಶ್ರೀ..! title=
ಬೆಳ್ಳಿತೆರೆಗೆ ಅನುಶ್ರೀ ರಿಟರ್ನ್‌ ಆಗುತ್ತಿದ್ದಾರೆ

ಬೆಂಗಳೂರು: ಈಗಾಗಲೇ ನಿರೂಪಣೆ ಮೂಲಕ ಲಕ್ಷಾಂತರ ಜನರ ಮನಗೆದ್ದಿರುವ ನಟಿ ಅನುಶ್ರೀ(Anchor Anushree) ಬಿಗ್‌ ಸ್ಕ್ರೀನ್‌ನಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದರು. ಆದರೆ ಇದೀಗ ಅನುಶ್ರೀ ಬೆಳ್ಳಿ ತೆರೆಗೆ ರಿಟರ್ನ್‌ ಆಗುತ್ತಿದ್ದು, ಅವರ ಅಭಿನಯದ ಹೊಸ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದೆ.

ಕಿರುತೆರೆಯಲ್ಲಿ ನಿರೂಪಣೆ ಮೂಲಕ ಛಾಪು ಮೂಡಿಸಿರುವ ಅನುಶ್ರೀ(Anushree) ಅಂದರೆ  ಪ್ರೇಕ್ಷಕರಿಗೆ ಅಚ್ಚು ಮೆಚ್ಚು. ಅದರಲ್ಲೂ ಅನುಶ್ರೀ ಆಂಕರಿಂಗ್‌ನಲ್ಲಿ ಮಾತನಾಡುವ ಶೈಲಿಗೆ ಎಲ್ಲರೂ ಫಿದಾ ಆಗುತ್ತಾರೆ. ಹೀಗೆ ತಮ್ಮ ನಿರೂಪಣೆ ಮೂಲಕವೇ ಎಲ್ಲರ ಮನ ಗೆದ್ದಿರುವ ಅನುಶ್ರೀ ಈ ಹಿಂದೆ ಸಿನಿಮಾ ಕ್ಷೇತ್ರದಲ್ಲೂ ಸೌಂಡ್‌ ಮಾಡಿದ್ದರು. ಆದರೆ ಸ್ವಲ್ಪದಿನಗಳ ಬ್ರೇಕ್‌ನ ಬಳಿಕ ಇದೀಗ ಮತ್ತೆ ಸಿನಿಮಾಗಾಗಿ ಅನುಶ್ರೀ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: BS Yediyurappa: ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ ಬಿ.ಎಸ್.ಯಡಿಯೂರಪ್ಪ

‘ಸೈತಾನ್‌’ನಲ್ಲಿ ಅನುಶ್ರೀ ಅಬ್ಬರ..!

ಹೊಸಬರ ತಂಡಕ್ಕೆ ಸಾಥ್‌ ನೀಡಿರುವ ಅನುಶ್ರೀ ಅವರು, ‘ಸೈತಾನ್‌’(Saitan Movie) ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿದ್ದು, ಇದೊಂದು ಹಾರರ್‌ ಸಿನಿಮಾ ಆಗಿದೆ. ಹಾಗೇ ಚಿತ್ರದ ಮೊದಲ ಹಂತದ ಶೂಟಿಂಗ್‌ ಕೂಡಾ ಕಂಪ್ಲೀಟ್‌ ಆಗಿದ್ದು, ಸೆಕೆಂಡ್‌ ಶೆಡ್ಯೂಲ್‌ನ ಪ್ಲಾನ್‌ ಮಾಡಿದೆಯಂತೆ ಚಿತ್ರ ತಂಡ. ‘ದೇವಕಿ’, ‘ಮಮ್ಮಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಲೋಹಿತ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಪ್ರಭಾಕರ್ ನಿರ್ದೇಶಕರಾಗಿ ಕ್ಯಾಪ್‌ ತೊಟ್ಟಿದ್ದಾರೆ.

ಕಥೆ ಕೇಳಿದ ಬಳಿಕ ಅನುಶ್ರೀ ಚಿತ್ರದ ಕಥೆ ಇಷ್ಟಪಟ್ಟು ಸಿನಿಮಾಗೆ ಒಪ್ಪಿಗೆ ಸೂಚಿಸಿದ್ದರಂತೆ. ಈ ಮೂಲಕ ದೊಡ್ಡ ಗ್ಯಾಪ್‌ ಬಳಿಕ ಮತ್ತೆ ಬೆಳ್ಳಿತೆರೆಗೆ ಬರ್ತಿದ್ದಾರೆ ಅನುಶ್ರೀ. ಒಟ್ಟಾರೆ ಕನ್ನಡ ಪ್ರೇಕ್ಷಕರಿಗೆ ಮತ್ತೊಂದು ಹಾರರ್‌ ಸಿನಿಮಾ(Horror Movie) ನೋಡುವ ಚಾನ್ಸ್‌ ಸದ್ಯದಲ್ಲೇ ಸಿಗಲಿದ್ದು, ಅನುಶ್ರೀ ಅವರನ್ನು ಮತ್ತೊಮ್ಮೆ ಬಿಗ್‌ ಸ್ಕ್ರೀನ್‌ನಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: 'ಹಂಟರ್'​ ಮೋಷನ್‌ ಪೋಸ್ಟರ್‌ ರಿಲೀಸ್: ಅಣ್ಣನ ಮಗನಿಗೆ ಉಪೇಂದ್ರ‌ ಸಾಥ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News