'ಹಂಟರ್'​ ಮೋಷನ್‌ ಪೋಸ್ಟರ್‌ ರಿಲೀಸ್: ಅಣ್ಣನ ಮಗನಿಗೆ ಉಪೇಂದ್ರ‌ ಸಾಥ್!

Hunter: ಸೂಪರ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ 'ಹಂಟರ್'​ ಸಿನಿಮಾದ ಮೋಷನ್‌ ಪೋಸ್ಟರ್‌ ಇಂದು ರಿಲೀಸ್‌ ಆಗಿದ್ದು, ಕುತೂಹಲ ಹೆಚ್ಚಿಸಿದೆ.

Written by - Malathesha M | Edited by - Chetana Devarmani | Last Updated : Feb 21, 2022, 02:50 PM IST
  • 'ಹಂಟರ್'​ ಸಿನಿಮಾದ ಮೋಷನ್‌ ಪೋಸ್ಟರ್‌ ಇಂದು ರಿಲೀಸ್‌
  • ನಿರಂಜನ್ ಸುಧೀಂದ್ರ ಅಭಿನಯದ 'ಹಂಟರ್'​ ಸಿನಿಮಾ
  • ಸೂಪರ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ
'ಹಂಟರ್'​ ಮೋಷನ್‌ ಪೋಸ್ಟರ್‌ ರಿಲೀಸ್: ಅಣ್ಣನ ಮಗನಿಗೆ ಉಪೇಂದ್ರ‌ ಸಾಥ್! title=
ಹಂಟರ್

ಸೂಪರ್ ಸ್ಟಾರ್ ಉಪೇಂದ್ರ (Upendra) ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ 'ಹಂಟರ್'​ ಸಿನಿಮಾದ ಮೋಷನ್‌ ಪೋಸ್ಟರ್‌ (Hunter Motion Poster) ಇಂದು ರಿಲೀಸ್‌ ಆಗಿದ್ದು, ಕುತೂಹಲ ಹೆಚ್ಚಿಸಿದೆ. ಈ ಹಿಂದೆ ಸಿನಿಮಾದ ಫಸ್ಟ್ ಲುಕ್ ಹಾಗೂ ಶೀರ್ಷಿಕೆಯನ್ನು ರಿಯಲ್​ ಸ್ಟಾರ್​ ಉಪೇಂದ್ರ-ಪ್ರಿಯಾಂಕಾ ದಂಪತಿ ಬಿಡುಗಡೆ ಮಾಡಿದ್ದರು. ಇಂದು ಉಪೇಂದ್ರ ದಂಪತಿ ಮೋಷನ್‌ ಪೋಸ್ಟರ್‌ ನ ಕೂಡ ರಿಲೀಸ್‌ ಮಾಡಿದ್ದಾರೆ.

Hunter

ಇದನ್ನೂ ಓದಿ: ಪುಷ್ಪಾ, ರಣವೀರ್ ಸಿಂಗ್ ಗೆ 'ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ'.. ಸಂಪೂರ್ಣ ಪಟ್ಟಿ ಇಲ್ಲಿದೆ

'ಹಂಟರ್'​ (Hunter) ಸಿನಿಮಾದ ಮೋಷನ್‌ ಪೋಸ್ಟರ್‌ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿರಂಜನ್ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ರಿಲೀಸ್‌ ಆಗಿತ್ತು. ಇದೀಗ ಮೋಷನ್‌ ಪೋಸ್ಟರ್‌ ಮೂಲಕ 'ಹಂಟರ್'​ ಸಿನಿಮಾ ಕುತೂಹಲ ಹೆಚ್ಚಿಸಿದೆ. ಈಗಾಗಲೇ 3 ಸಿನಿಮಾಗಳಿಗೆ ಸೈನ್‌ ಮಾಡಿರುವ ನಿರಂಜನ್ ಸುಧೀಂದ್ರ ಸಖತ್‌ ಬ್ಯುಸಿಯಾಗಿದ್ದಾರೆ.

'ಎ' ಸಿನಿಮಾ ನೆನಪು:

ಇನ್ನು ಅಣ್ಣನ ಮಗನ ಸಿನಿಮಾ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ ಸೂಪರ್‌ ಸ್ಟಾರ್‌ ಉಪೇಂದ್ರ, ಚಿತ್ರತಂಡಕ್ಕೆ ಶುಭಹಾರೈಸಿದರು. ಹಾಗೇ ನಿರಂಜನ್‌ ಚಿಕ್ಕ ವಯಸ್ಸಿನಲ್ಲೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ಎಂದು ಹಳೆಯ ದಿನಗಳನ್ನ ಮೆಲುಕು ಹಾಕಿದ್ರು. 'ಎ' ಸಿನಿಮಾದಲ್ಲಿ ಮಗುವಿನ ಪಾತ್ರದಲ್ಲಿ ನಿರಂಜನ್‌ ಕಾಣಿಸಿಕೊಂಡಿದ್ದನ್ನು ಉಪೇಂದ್ರ ನೆನಪು ಮಾಡಿಕೊಂಡರು. ಹಾಗೇ ಪ್ರಿಯಾಂಕಾ ಉಪೇಂದ್ರ (Priyanka Upendra) ಕೂಡ ಚಿತ್ರತಂಡಕ್ಕೆ ಶುಭಹಾರೈಸಿದರು.

Hunter

ಇದನ್ನೂ ಓದಿ: Toolsidas Junior Trailer Release: Rajeev Kapoor ನಟಿಸಿರುವ ಕೊನೆಯ ಚಿತ್ರದಲ್ಲಿ ತಂದೆ-ಮಗನ ನಡುವಿನ ಇಮೋಶನಲ್ ಡ್ರಾಮಾ

ಇನ್ನು 'ಹಂಟರ್'​ ಮೋಷನ್‌ ಪೋಸ್ಟರ್‌ ಬಗ್ಗೆ ಹೇಳುವುದಾದರೆ ನಿರಂಜನ್‌ ರಗಡ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಆ್ಯಕ್ಷನ್, ಥ್ರಿಲ್ಲರ್ ಕಥಾ ಹಂದರ ಹೊಂದಿರುವ 'ಹಂಟರ್' ಸಿನಿಮಾ​ ಮೋಷನ್‌ ಪೋಸ್ಟರ್‌ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಒಟ್ಟಾರೆ ವಿನಯ್ ಕೃಷ್ಣ ನಿರ್ದೇಶನದ ಈ ಚಿತ್ರ ಸಖತ್‌ ಕ್ಯೂರಿಯಾಸಿಟಿ ಕ್ರಿಯೇಟ್‌ ಮಾಡಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News