Anushka-Virat ವಿವಾಹದ Unseen ಫೋಟೋ ವೈರಲ್

Anushka-Virat Unseen Wedding Pictures: ವಿರಾಟ್-ಅನುಷ್ಕಾರ ಛಾಯಾಗ್ರಾಹಕ ವಿವಾಹಕ್ಕೆ ಸಂಬಂಧಿಸಿದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು ಇದನ್ನು ನೋಡಿದ ಸಾಕಷ್ಟು ಮಂದಿ Made For Each Other ಎನ್ನುತ್ತಿದ್ದಾರೆ.  

Written by - Yashaswini V | Last Updated : Jan 1, 2021, 02:10 PM IST
  • ವಿರಾಟ್ ಮತ್ತು ಅನುಷ್ಕಾ ಇಟಲಿಯಲ್ಲಿ ವಿವಾಹವಾದರು
  • ಶೀಘ್ರದಲ್ಲೇ ಅವರು ಪೋಷಕರಾಗಲಿದ್ದಾರೆ
  • ಅನುಷ್ಕಾ ಅವರ ಬೇಬಿ ಬಂಪ್ ಫೋಟೋಶೂಟ್ ಕೂಡ ಈ ದಿನಗಳಲ್ಲಿ ಚರ್ಚೆಯ ವಿಷಯವಾಗಿದೆ
Anushka-Virat ವಿವಾಹದ Unseen ಫೋಟೋ ವೈರಲ್ title=
Anushka Sharma, Virat Kohli Unseen Wedding Pictures Photo Credit: Instagram/@storiesbyjosephradhik

ಮುಂಬೈ: ಒಂದು ಕಡೆ ವಿರಾಟ್ ಮತ್ತು ಅನುಷ್ಕಾ ಹೊಸ ವರ್ಷದಲ್ಲಿ ತಮ್ಮ ಮೊದಲ ಮಗುವಿಗಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಅವರ ವಿವಾಹದ ಕೆಲವು ವಿಶೇಷ ಚಿತ್ರಗಳು ಮತ್ತೊಮ್ಮೆ ವೈರಲ್ ಆಗುತ್ತಿವೆ. ವಾಸ್ತವವಾಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಮದುವೆಯಲ್ಲಿ ಫೋಟೋಶೂಟ್ ಮಾಡಿರುವ ಛಾಯಾಗ್ರಾಹಕ ಜೋಸೆಫ್ ವಿವಾಹದ ಕೆಲವು ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನೀವು ವಿರುಷ್ಕಾ ದಂಪತಿ ಮತ್ತು ಅವರ ಕುಟುಂಬಗಳನ್ನು ನೋಡಬಹುದು.

ಅನುಷ್ಕಾಶರ್ಮಾ (Anushka Sharma) - ವಿರಾಟ್ ಕೊಹ್ಲಿ ಅವರ ವಿವಾಹವು ಒಂದು ಕಾಲ್ಪನಿಕ ಕಥೆಗಿಂತ ಕಡಿಮೆಯಿಲ್ಲ ಎಂದು ಎಲ್ಲರೂ ನಂಬುತ್ತಾರೆ. ಇಬ್ಬರೂ ಇಟಲಿಯಲ್ಲಿ ವಿವಾಹವಾದರು.  ಇಬ್ಬರ ಮದುವೆಯ ಫೋಟೋಗಳನ್ನು ಹಂಚಿಕೊಂಡಿರುವ ಛಾಯಾಗ್ರಾಹಕ ಕೂಡ ಈ ಜೋಡಿಯ ವಿವಾಹಕ್ಕೆ ಸಂಬಂದಿಸಿದಂತೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದು ಈ ದಂಪತಿಗಳು ಒಬ್ಬರಿಗೊಬ್ಬರು ಪರಿಪೂರ್ಣರು ಎಂದು ಹೇಳಿದರು.

ವಿರಾಟ್ ಮತ್ತು ಅನುಷ್ಕಾ ಅವರ ಚಿತ್ರದೊಂದಿಗೆ, 'ಇದು ವಿರಾಟ್-ಅನುಷ್ಕಾ ಅವರ ಮದುವೆ, ಪರಸ್ಪರರ ಪ್ರೀತಿ. ಇದನ್ನು ನೀವು ಕ್ಯಾಮೆರಾದಲ್ಲಿಯೂ ಅಥವಾ ನೈಜವಾಗಿಯೂ ನೋಡಬಹುದು. ಈ ವಿಶೇಷ ಕ್ಷಣ ಮತ್ತು ಈ ಸುಂದರ ಕ್ಷಣವನ್ನು ನಾವು ಯುರೋಪಿನ ಚಳಿಗಾಲದಲ್ಲಿ ಚಿತ್ರೀಕರಣ ಮಾಡಿದ್ದೆವು ಮತ್ತು ಈ ವಿವಾಹವು ತುಂಬಾ ವಿಶೇಷವಾಗಿದೆ. ಹಾಗಾಗಿಯೇ ಈ ವಿವಾಹ ಸದಾ ಎಲ್ಲರ ಮನಸ್ಸಿನಲ್ಲಿ ಹಚ್ಚ ಹಸಿರಾಗಿರುತ್ತದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ : Sandalwood : ಹೊಸ ವರ್ಷದಂದೇ ತೆರೆಗೆ ಬಂದಿದೆ ರಾಜತಂತ್ರ

ವಿರಾಟ್ ಮತ್ತು ಅನುಷ್ಕಾ ಇಟಲಿಯಲ್ಲಿ ವಿವಾಹವಾದರು ಮತ್ತು ಶೀಘ್ರದಲ್ಲೇ ಅವರು ಪೋಷಕರಾಗಲಿದ್ದಾರೆ ಎಂದು ದಯವಿಟ್ಟು ಹೇಳಿ. ಅನುಷ್ಕಾ ಅವರ ಬೇಬಿ ಬಂಪ್ ಫೋಟೋಶೂಟ್ ಕೂಡ ಈ ದಿನಗಳಲ್ಲಿ ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ : ಕೇರಳದ ಪ್ರಕೃತಿ ಮಡಿಲಲ್ಲಿ ರಜಾದಿನಗಳನ್ನು ಕಳೆಯುತ್ತಿರುವ ಮಲ್ಲಿಕಾ ಶೆರಾವತ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News