ಬೆಂಗಳೂರು : ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಅಭಿನಯದ ರಾಜತಂತ್ರ (Rajathanthra) ಹೊಸ ವರ್ಷದಂದೇ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನಿವೃತ್ತ ಮಿಲಿಟರಿ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಭವ್ಯ, ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಮತ್ತು ಶಂಕರ್ ಅಶ್ವತ್ ಪ್ರಮುಖ ಪಾತ್ರದಲ್ಲಿದ್ದಾರೆ. ರಾಜತಂತ್ರ 2021ರಲ್ಲಿ ತೆರೆಕಂಡ ಮೊದಲ ಚಿತ್ರವಾಗಿದೆ.
ನಿವೃತ್ತಿಯ ನಂತರ ಮಿಲಿಟರಿ ಅಧಿಕಾರಿ ಯಾವ ರೀತಿ ದೇಶವನ್ನು ನೋಡಿಕೊಳ್ಳುತ್ತಾನೆ ಎಂಬ ಅಂಶದ ಆಧಾರದ ಮೇಲೆ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಭ್ರಷ್ಟಾಚಾರ, ಡ್ರಗ್ಸ್ ಮುಂತಾದ ವಿಷಯಗಳನ್ನು ಕೂಡಾ ಚಿತ್ರ ಒಳಗೊಂಡಿದೆ. ಪ್ರಸ್ತುತ ಘಟನೆಗಳನ್ನುಸೇನೆಯ ನಿವೃತ್ತ ಅಧಿಕಾರಿ ಯಾವ ದೃಷ್ಟಿಕೋನದಿಂದ ನೋಡುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.
ALSO READ : Sandalwood : ಕನ್ನಡ ಬಳಿಕ ತೆಲುಗು, ತಮಿಳಿನಲ್ಲೂ ಬರಲಿದೆ ಧ್ರುವ ಸರ್ಜಾ ‘ಪೊಗರು’
ಕರೋನಾ (Coronavirus) ಕಾಲದಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಅದೇ ಸಮಯದಲ್ಲಿ ಚಿತ್ರವನ್ನು ಪೂರ್ಣಗೊಳಿಸಲಾಗಿದೆ. ಕೇವಲ 10 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು ಈ ಚಿತ್ರದ ವಿಶೇಷವಾಗಿದೆ. ಅಮ್ಮನ ಮನೆ" (Ammana Mane) ಚಿತ್ರದ ಡಿಒಪಿ ಆಗಿದ್ದ ಪಿವಿಆರ್ ಸ್ವಾಮಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಶ್ರೀ ಸುರೇಶ್ ಸಂಗೀತವಿದೆ.
ರಾಜತಂತ್ರ ಉತ್ತಮ ಚಿತ್ರಕತೆಯನ್ನು ಹೊಂದಿರುವ ಸಿನೆಮಾವಾಗಿದ್ದು, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಉತ್ತಮ ಹಣಗಳಿಸಿಕೊಡುವಂತಾಗಲಿ ಎಂದು ಚಿತ್ರದ ನಟ ರಾಘವೇಂದ್ರ ರಾಜ್ ಕುಮಾರ್ ಹಾರೈಕೆ. ಈಗಾಗಲೇ ಚಿತ್ರಕ್ಕೆ ಶಿವರಾಜ್ ಕುಮಾರ್, (Shiva Rajkumar) ಪುನೀತ್ ರಾಜ್ ಕುಮಾರ್ (Puneeth Rajkumar) ಶುಭಕೋರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.