Coolie Teaser : ರಜನಿಕಾಂತ್ 171ನೇ ಚಿತ್ರ "ಕೂಲಿ", ಟೀಸರ್ ರಿಲೀಸ್

Coolie Teaser : ಲೋಕೇಶ್ ಕನಕರಾಜ್ ನಿರ್ದೇಶನದ ರಜನಿಕಾಂತ್ ಅವರ 171ನೇ ಚಿತ್ರ ' ಕೂಲಿ ' ಟೀಸರ್ ಬಿಡುಗಡೆಯಾಗಿದೆ.

Written by - Zee Kannada News Desk | Last Updated : Apr 23, 2024, 10:13 PM IST
  • ಇದು ರಜನಿಕಾಂತ್ ಅವರ 171 ನೇ ಚಿತ್ರವಾಗಿದ್ದು ಸಿನಿಮಾಗೆ ಕೂಲಿ ಎಂದು ಹೆಸರಿಡಲಾಗಿದೆ.
  • ಸಿನಿಮಾದ ಟೀಸರ್ ನೆನ್ನೆ ಏಪ್ರಿಲ್ 22ರಂದು ರಿಲೀಸ್ ಆಗಿದೆ
  • ಸನ್ ಪಿಚ್ಚರ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.
Coolie Teaser : ರಜನಿಕಾಂತ್ 171ನೇ ಚಿತ್ರ "ಕೂಲಿ", ಟೀಸರ್ ರಿಲೀಸ್  title=

Coolie Teaser Release : ರಜನಿಕಾಂತ್ ಅವರ 171ನೇ ಚಿತ್ರ ಕೂಲಿ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಿನಿಮಾವನ್ನು ಲೋಕೇಶ್ ಕನಕರಾಜ್ ನಿರ್ದೇಶಸಿದ್ದಾರೆ.

ಇದು ರಜನಿಕಾಂತ್ ಅವರ 171 ನೇ ಚಿತ್ರವಾಗಿದ್ದು ಸಿನಿಮಾಗೆ ಕೂಲಿ ಎಂದು ಹೆಸರಿಡಲಾಗಿದೆ. ಸಿನಿಮಾದ ಟೀಸರ್ ನೆನ್ನೆ ಏಪ್ರಿಲ್ 22ರಂದು ರಿಲೀಸ್ ಆಗಿದೆ. ಚಿತ್ರದ ನಿರ್ದೇಶಕ ಸೌತ್ ಮೆಗಾಸ್ಟಾರನ್ನು ತಮ್ಮ ಸಿಗ್ನೇಚರ್ ಸ್ಟೈಲ್ ನಲ್ಲಿ ಚಿನ್ನದ ಸರದಿಂದ ಗುಂಡಾಗಳನ್ನು ಹೊಡೆದಾಡಿರೋದನ್ನ ಟೀಸರ್ ನಲ್ಲಿ ಪವರ್ ಪ್ಯಾಕ್ಡ್ ಆಗಿ ತೋರಿಸಿಕೊಟ್ಟಿದ್ದಾರೆ.

ಇದನ್ನು ಓದಿ : O2 Review : ವೈದ್ಯಕೀಯ ಥ್ರಿಲ್ಲರ್ ಸಿನಿಮಾ ಹೇಗಿದೆ ಗೊತ್ತಾ ? 

ಕೂಲಿ ಸಿನಿಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ತೋಳಿನ ಮೇಲೆ ಕೂಲಿ ಎಂಬ ಬ್ಯಾಡ್ಜ್ ನೋಂದಿಗೆ ವಿಭಿನ್ನ ಒರಟಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಗೆ ಚಿನ್ನದ ಗಡಿಯಾರವನ್ನು ಹಾಕಿಕೊಂಡು ಬೆಲ್ಟ್ನಿಂದ ಗುಂಡಗಳನ್ನು ಹೊಡೆಯುತ್ತಿರುವುದು ಮತ್ತು ವಿಭಿನ್ನ ಟೋನ್ ನಲ್ಲಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

 ಇದಕ್ಕೂ ಮುಂಚೆ ಮಾರ್ಚ್ 28ರಂದು ಕೂಲಿ ಸಿನಿಮಾದ ನಿರ್ದೇಶಕ ಲೋಕೇಶ್ ಕನಕರಾಜ್ ತಮ್ಮ ಎಕ್ಸ್ ಖಾತೆಯಲ್ಲಿ ಏಪ್ರಿಲ್ 22ರಂದು ತಲೈವಾ ಅವರ 171ನೇ ಸಿನಿಮಾದ ಟೈಟಲ್ ರಿಲೀಸ್ ಆಗಲಿದೆ ಎಂದು ಪೋಸ್ಟ ಹಾಕಿಕೊಂಡಿದ್ದರು.

ಇದನ್ನು ಓದಿ : Neha Murder Case : ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗುವುದು : ಸಿಎಂ ಸಿದ್ದರಾಮಯ್ಯ 

ಲೋಕೇಶ್ ಕನಕರಾಜ್ ಹಾಗು ರಜನಿಕಾಂತ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ ಇದಾಗಿತ್ತು ಸನ್ ಪಿಚ್ಚರ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾದಲ್ಲಿ ಶಿವ ಕಾರ್ತಿಕೇಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಉಳಿದಂತೆ ಇತರ ತಾರಾ ಗಣದ ಕುರಿತಂತೆ ಚಿತ್ರತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಏಪ್ರಿಲ್ 22ರಂದು  ಸೂಪರ್ ಸ್ಟಾರ್ ರಜನಿಕಾಂತ್ ಅವರ 171ನೇ ಸಿನಿಮಾ ಕೂಲಿ ಟೀಸರ್ ಬಿಡುಗಡೆಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News