ಕರ್ಪೂರದ ಗೊಂಬೆ ನಟಿ ಶೃತಿ ಪುತ್ರಿ ಗೌರಿ ಸಿನಿಮಾದಲ್ಲಿ ನಟಿಸೋದು ಯಾವಾಗ ಗೊತ್ತಾ?

Sandalwood News: 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶ್ರುತಿ ವಿಷ್ಣುವರ್ಧನ್​, ಅಂಬರೀಶ್​, ಕಮಲ್​ ಹಾಸನ್​ ರಂತಹ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟರ ಜೊತೆ ನಟಿಸಿರುವಶೃತಿ ಕೊಟ್ಟ ಪಾತ್ರಕ್ಕೆ ಜೀವ ತುಂಬೋ ಕೆಲಸ ಮಾಡುತ್ತಾರೆ.

Written by - YASHODHA POOJARI | Edited by - Bhavishya Shetty | Last Updated : May 29, 2023, 01:23 PM IST
    • ಮೊದಲ ಬಾರಿಗೆ ಕನ್ನಡದ 'ಶೃತಿ' ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರನ್ನ ಮನ ಗೆಲ್ಲುವಲ್ಲಿ ಯಶಸ್ವಿಯಾದರು
    • ಕನ್ನಡ ಚಿತ್ರರಂಗದ ಮೇರು ನಟಿ ಎನಿಸಿಕೊಂಡಿರುವ ಚಂದನವನದ ಕರ್ಪೂರದ ಗೊಂಬೆ
    • ಇದರ ಜೊತೆಗೆ ಮಗಳು ಗೌರಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಗಾಗಿ ತಮ್ಮ ಫೋಟೋಗಳನ್ನ ಶೇರ್ ಮಾಡುತ್ತಿರುತ್ತಾರೆ
ಕರ್ಪೂರದ ಗೊಂಬೆ ನಟಿ ಶೃತಿ ಪುತ್ರಿ ಗೌರಿ ಸಿನಿಮಾದಲ್ಲಿ ನಟಿಸೋದು ಯಾವಾಗ ಗೊತ್ತಾ? title=
Actress Shruti

Sandalwood: ಸ್ಯಾಂಡಲ್ವುಡ್ ನಟಿ ಶೃತಿ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂನಲ್ಲೂ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಕನ್ನಡದ 'ಶೃತಿ' ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರನ್ನ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಆದಾದ ಬಳಿಕ ತಮ್ಮ ಮೂಲ ಹೆಸರು ಗಿರಿಜಾ ಬದಲು ಶ್ರುತಿ ಎಂಬ ಹೆಸರೆ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಚಿತ್ರರಂಗದಲ್ಲೂ ಶ್ರುತಿ ಎಂದೇ ಫೇಮಸ್‌ ಆದರು. ಸದ್ಯಕ್ಕೆ ಕನ್ನಡದ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಈಗ ರಿಯಾಲಿಟಿ ಶೋಗಳಲ್ಲೂ ಸಖತ್ ಮಿಂಚುತ್ತಿದ್ದಾರೆ.

ಇದನ್ನೂ ಓದಿ: ISRO: ನಭೋ ಮಂಡಲದಲ್ಲಿ ಇಸ್ರೋ: GSLV-F12 ಮೂಲಕ ನ್ಯಾವಿಗೇಶನ್ ಉಪಗ್ರಹ ಯಶಸ್ವಿ ಉಡಾವಣೆ

ಸುಮಾರು ಎರಡು ದಶಕಗಳಿಂದ ಕನ್ನಡ ಚಿತ್ರರಂಗದ ಮೇರು ನಟಿ ಎನಿಸಿಕೊಂಡಿರುವ ಚಂದನವನದ ಕರ್ಪೂರದ ಗೊಂಬೆ ಶ್ರುತಿ.

120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶ್ರುತಿ ವಿಷ್ಣುವರ್ಧನ್​, ಅಂಬರೀಶ್​, ಕಮಲ್​ ಹಾಸನ್​ ರಂತಹ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟರ ಜೊತೆ ನಟಿಸಿರುವಶೃತಿ ಕೊಟ್ಟ ಪಾತ್ರಕ್ಕೆ ಜೀವ ತುಂಬೋ ಕೆಲಸ ಮಾಡುತ್ತಾರೆ. ಜೊತೆಗೆ ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರೋ ಅದ್ಭುತ ಕಲಾವಿದೆ ಅಂದ್ರೆ ಶೃತಿ.

ಇದನ್ನೂ ಓದಿ: ಅಪ್ಪನಿಲ್ಲದೆ ಹಸೆಮಣೆ ಏರಲು ಸಿದ್ಧರಾಗಿರುವ ಅಭಿಗೆ ಕಾಡಿದೆ ಆ ಒಂದು ದೊಡ್ಡ ನೋವು..!

ಇತ್ತೀಚಿಗೆ ರಾಜಕೀಯ ಕ್ಷೇತ್ರದಲ್ಲೂ ಶೃತಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ತುಂಬಾ ಆಕ್ಟಿವ್ ಆಗಿರುತ್ತಾರೆ. ಇದರ ಜೊತೆಗೆ ಮಗಳು ಗೌರಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಗಾಗಿ ತಮ್ಮ ಫೋಟೋಗಳನ್ನ ಶೇರ್ ಮಾಡುತ್ತಿರುತ್ತಾರೆ. ಫೋಟೋಗಳನ್ನ ನೋಡಿದ ನೆಟ್ಟಿಗರು ಮೇಡಂ ನೀವು ಅಮ್ಮನಂತೆ ನಟಿಯಾಗೋದು ಯಾವಾಗ ಅಂತ ಕೇಳುತ್ತಿದ್ದಾರೆ. ಜೊತೆ ನೀವು ಕೂಡ ಮುದ್ದಾಗಿ ಇದ್ದೀರಾ. ಹೀರೋಯಿನ್ ಆಗೋ ಎಲ್ಲಾ ಲಕ್ಷಣ ಕೂಡ ಇದೆ ಅಂತ ಹೇಳುತ್ತಿದ್ದಾರೆ. ಹಾಗಾದ್ರೆ ಯಾವಾಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ ಶೃತಿ ಪುತ್ರಿ ಗೌರಿ ಅನ್ನೋದನ್ನ ಸ್ವತಃ ಅವರೇ ಹೇಳಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News