ರಕ್ಷಿತ್ ಶೆಟ್ಟಿ ಫಸ್ಟ್‌ ಲವ್‌ ಇವರೇ.. ಅಂದು ಆ ನಗುವಿಗೆ ಮನಸೋತು ಅವಳ ಹಿಂದೆನೇ ಸುತ್ತಾಡಿದ್ದರಂತೆ!

Rakshit Shetty First Love: ನಟ ರಕ್ಷಿತ್ ಶೆಟ್ಟಿ ಫಸ್ಟ್ ಲವ್ ಯಾರೆಂಬ ಕುತೂಹಲ ಅನೇಕರಲ್ಲಿ ಇದೆ. 

Written by - Chetana Devarmani | Last Updated : Jan 11, 2024, 05:43 PM IST
  • ಕನ್ನಡ ನಟ ರಕ್ಷಿತ್ ಶೆಟ್ಟಿ
  • ರಕ್ಷಿತ್ ಶೆಟ್ಟಿ ಲವ್‌ ಸ್ಟೋರಿ
  • ರಕ್ಷಿತ್ ಶೆಟ್ಟಿ ಫಸ್ಟ್‌ ಲವ್‌
ರಕ್ಷಿತ್ ಶೆಟ್ಟಿ ಫಸ್ಟ್‌ ಲವ್‌ ಇವರೇ.. ಅಂದು ಆ ನಗುವಿಗೆ ಮನಸೋತು ಅವಳ ಹಿಂದೆನೇ ಸುತ್ತಾಡಿದ್ದರಂತೆ!  title=
Rakshit Shetty

Rakshit Shetty Love story: ನಟ ರಕ್ಷಿತ್ ಶೆಟ್ಟಿ ಫಸ್ಟ್ ಲವ್ ಯಾರೆಂಬ ಕುತೂಹಲ ಅನೇಕರಲ್ಲಿ ಇದೆ. ರಕ್ಷಿತ್ ಶೆಟ್ಟಿ ಮೊದಲ ಕ್ಷಣ ಅವಳನ್ನು ಕಂಡಾಗ ಆದ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಆಕೆಯ ನಗುವಿಗೆ ಅವರು ಮನಸೋತಿದ್ದರಂತೆ. ಅವಳ ನಗು ಕಂಡು ಇಡೀ ದಿನ ಆಕೆಯ ಹಿಂದೆಯೇ ಸುತ್ತಿದ್ದರಂತೆ. 

ಆ ಹುಡುಗಿಯನ್ನು ನೋಡಿ ಫಿದಾ ಆಗಿದ್ದ ಘಟನೆಯನ್ನು ರಕ್ಷಿತ್‌ ಶೆಟ್ಟಿ  ನೆನಪಿಸಿಕೊಂಡಿದ್ದರು. ಅವತ್ತು ಬಸ್ ಹತ್ತಿದ ಆಕೆ ಹಿಂದೆ ತಿರುಗಿ ನನ್ನ ನೋಡಿ ನಕ್ಕಳು. ನನಗೆ ಒಂದು ಅವತ್ತು ಅದೊಂದು ಅದ್ಭುತ ಅನುಭವದಂತೆ ಅನಿಸಿತು. ನನ್ನ ಹೃದಯ ಅರಳಿತು. ಆ ಬಳಿಕ ಅವಳ ಹಿಂದೆನೇ ಸುತ್ತಾಡಿದೆ ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ. 

ಇದನ್ನೂ ಓದಿ: ರಶ್ಮಿಕಾ ಕೆನ್ನೆಗೆ ಮುತ್ತಿಟ್ಟ ರಣ್‌ಬೀರ್ ಕಪೂರ್.. ‘ಅನಿಮಲ್’ ಸಕ್ಸಸ್ ಪಾರ್ಟಿಯಲ್ಲಿ ನಡೆದಿದ್ದೇನು? 

ನಾವು ಟ್ರಿಪ್‌ಗೆ ಹೋದಾಗ ಈ ಘಟನೆ ನಡೆದಿತ್ತು. ನಾನು ಆ ಟ್ರಿಪ್ ಗೆ ಕ್ಯಾಮರಾ ತಗೊಂಡು ಹೋಗಿದ್ದೆ. ನನ್ನ ಕ್ಯಾಮರಾ ತುಂಬಾ ಬರೀ ಅವಳ ಫೋಟೊಗಳೇ ತುಂಬಿದ್ದವು ಎಂದು ರಕ್ಷಿತ್‌ ಹೇಳಿದ್ದಾರೆ.

ರಕ್ಷಿತ್‌ ಅವರು 9ನೇ ಕ್ಲಾಸ್‌ನಲ್ಲಿದ್ದಾಗ ತಮ್ಮದೇ ತರಗತಿ ಹುಡುಗಿಯನ್ನು ಕಂಡು ಲವ್‌ ಆಗಿತ್ತಂತೆ. ಈ ಹುಡುಗಿಯೇ ಅವರ ಫಸ್ಟ್‌ ಲವ್‌ ಅಂತೆ ಎಂದು ಹೇಳಿದ್ದಾರೆ. 

ನಟ ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ ಹುಟ್ಟಿ ಬೆಳೆದಿದ್ದಾರೆ. ಉಡುಪಿಯಲ್ಲೇ ಶಾಲಾ ಶಿಕ್ಷಣ ಮುಗಿಸಿ ಬಳಿಕ ಇಂಜಿನಿಯರಿಂಗ್ ಓದಿದ ರಕ್ಷಿತ್ 2 ವರ್ಷ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿದ್ದಾರೆ. ಬಳಿಕ ಸಿನಿರಂಗಕ್ಕೆ ರಕ್ಷಿತ್‌ ಕಾಲಿಟ್ಟರು. 

ಇದನ್ನೂ ಓದಿ: ಯಶ್ ಟಾಕ್ಸಿಕ್ ಸಿನಿಮಾಗೆ ಈ ಸೌತ್ ಬ್ಯೂಟಿಯೇ ಹೀರೋಯಿನ್.. ಕರೀನಾ, ಸಂಯುಕ್ತಾ, ಸಾಯಿ ಪಲ್ಲವಿ ಅಲ್ಲ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News