2023ರ ಬಹು ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ

2023ರಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಭಾರತದ ಸಿನಿಮಾಗಳ ಪೈಕಿ ಈ 20 ಚಿತ್ರಗಳು ಐಎಂಡಿಬಿ ಬಳಕೆದಾರರಲ್ಲಿ ಜನಪ್ರಿಯವಾಗಿದೆ.  2020ರ ಉದ್ದಕ್ಕೂ ಪ್ರತಿ ತಿಂಗಳು ಸುಮಾರು 200 ದಶಲಕ್ಷ ಪೇಜ್ ವ್ಯೂಗಳನ್ನು ಈ ಚಿತ್ರಗಳು  ಪಡೆದಿವೆ.

Written by - Ranjitha R K | Last Updated : Jan 9, 2023, 12:37 PM IST
  • 2023ರ ಬಹುನಿರೀಕ್ಷಿತ ಚಿತ್ರ, ಶಾರುಖ್‌ ಖಾನ್‌ ನಟನೆಯ ಚಿತ್ರ ಪಠಾಣ್‌
  • ಹೆಚ್ಚು ಬಾರಿ ಐಎಂಡಿಬಿ ಸೈಟ್ ಗೆ ಭೇಟಿ ನೀಡುವ ಆಧಾರದ ಮೇಲೆ ಪಟ್ಟಿ ಬಿಡುಗಡೆ
  • ಐಎಂಡಿಬಿಯ 2023ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿವೆ.
2023ರ ಬಹು ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ title=

ಬೆಂಗಳೂರು :  ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ವಿಶ್ವ ಪ್ರಸಿದ್ಧ  ಸೈಟ್ ಐಎಂಡಿಬಿ  (www.imdb.com)ಇಂದು 2023ರ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಎಂಡಿಬಿ 2022ಲ್ಲಿ ಬಳಕೆದಾರರು  ಸೈಟ್ ಗೆ  ಭೇಟಿ ನೀಡಿದ ಮಾಹಿತಿಯನ್ನು ಆಧರಿಸಿ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಸಿದ್ಧಪಡಿಸಿದೆ.  

ಐಎಂಡಿಬಿಯ 2023ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳು :
1.ಪಠಾಣ್‌
2.ಪುಷ್ಪ: ದಿ ರೂಲ್ - ಭಾಗ 2
3.ಜವಾನ್
4.ಆದಿಪುರುಷ್
5.ಸಲಾರ್
6.ವಾರಿಸು
7.ಕಬ್ಜಾ
8.ದಳಪತಿ 67
9.ದಿ ಆರ್ಚಿಸ್
10.ಡಂಕಿ
11.ಟೈಗರ್ 3
12.ಕಿಸಿ ಕ ಭಾಯ್‌ ಕಿಸಿ ಕಿ ಜಾನ್
13.ತುನಿವು
14.ಅನಿಮಲ್
15.ಏಜೆಂಟ್
16.ಇಂಡಿಯನ್ 2
17.ವಾಡಿವಾಸಲ್
18.ಶೆಹಜಾದ
19.ಬಡೇ ಮಿಯಾ ಛೋಟೆ ಮಿಯಾ
20.ಭೋಲಾ

ಇದನ್ನೂ ಓದಿ : Kishore : ನಾನು ಕೆಜಿಎಫ್‌ 2 ನೋಡಿಲ್ಲ ಎಂದಿದ್ದೇ ಅಷ್ಟೇ.. ಮೈಂಡ್‌ಲೆಸ್‌ ಅಂದಿಲ್ಲ..!

2023ರಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಭಾರತದ ಸಿನಿಮಾಗಳ ಪೈಕಿ ಈ 20 ಚಿತ್ರಗಳು ಐಎಂಡಿಬಿ ಬಳಕೆದಾರರಲ್ಲಿ ಜನಪ್ರಿಯವಾಗಿದೆ.  2020ರ ಉದ್ದಕ್ಕೂ ಪ್ರತಿ ತಿಂಗಳು ಸುಮಾರು 200 ದಶಲಕ್ಷ ಪೇಜ್ ವ್ಯೂಗಳನ್ನು ಈ ಚಿತ್ರಗಳು  ಪಡೆದಿವೆ. ಈ ಜನಪ್ರಿಯತೆ ಆಧರಿಸಿ ಪಟ್ಟಿಯನ್ನು ರೂಪಿಸಲಾಗಿದೆ. ಐಎಂಡಿಬಿ ಬಳಕೆದಾರರು ಈ ಸಿನಿಮಾ ಶೀರ್ಷಿಕೆಗಳನ್ನು ಹಾಗೂ ಇತರೆ ಚಿತ್ರಗಳ ಶೀರ್ಷಿಕೆಗಳನ್ನು ತಮ್ಮ ಐಎಂಡಿಬಿ ವಾಚ್‌ಲಿಸ್ಟ್‌ಗೆ ಸೇರಿಸಿಕೊಂಡರೆ, ಸಿನಿಮಾ ಬಿಡುಗಡೆಯಾದಾಗ ಮಾಹಿತಿ ಪಡೆದುಕೊಳ್ಳಬಹುದು.  

2023ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಐಎಂಡಿಬಿ ಪಟ್ಟಿ ಕುರಿತು : 
-ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಈ ಪಟ್ಟಿಯಲ್ಲಿ 11 ಹಿಂದಿ ಸಿನಿಮಾಗಳಿದ್ದರೆ, 5 ತಮಿಳು, 3 ತೆಲುಗು ಹಾಗು  ಕನ್ನಡದ 1 ಚಿತ್ರವಿದೆ. 
-ಮೂರು ವರ್ಷಗಳ ನಂತರ ಬಾಲಿವುಡ್‌ ಚೇತರಿಸಿಕೊಳ್ಳುತ್ತಿದ್ದು, ಶಾರುಖ್‌ ಖಾನ್‌ ಮುಖ್ಯ ಪಾತ್ರದಲ್ಲಿರುವ ಪಠಾಣ್‌, ಜವಾನ್ ಮತ್ತು ಡಂಕಿ ಚಿತ್ರಗಳು ತೆರೆಗೆ ಬರುತ್ತಿವೆ. ಶಾರುಖ್‌ ಖಾನ್ ಮಗಳು ಸುಹಾನಾ ಖಾನ್‌ ಕೂಡ 2023ರಲ್ಲಿ ಜೋಯಾ ಅಖ್ತರ್‍ ಅವರ ದಿ ಆರ್ಚಿಸ್‌ ಚಿತ್ರದ ಮೂಲಕ ನಟಿಯಾಗಿ ಪದರ್ಪಾಣೆ ಮಾಡುತ್ತಿದ್ದಾರೆ. ಈ ಚಿತ್ರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.  
-ಸಲ್ಮಾನ್‌ ಖಾನ್ ನಟನೆಯ 2 ಚಿತ್ರಗಳು, ಕಿಸಿ ಕ ಭಾಯ್ ಕಿಸಿ ಕಿ ಜಾನ್ ಮತ್ತು ಟೈಗರ್‍ 3 ಬಿಡುಗಡೆಯಾಗುತ್ತಿವೆ.  
-1996ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್‍ ಚಿತ್ರ ಇಂಡಿಯನ್‌  ಚಿತ್ರದ  ಸೀಕ್ವೆಲ್‌ ಇಂಡಿಯನ್‌-2 ಕೂಡಾ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಕಮಲ್‌ಹಾಸನ್‌ ಮತ್ತು ನಿರ್ದೇಶಕ ಶಂಕರ್‍ ಮತ್ತೆ ಒಂದಾಗಿದ್ದಾರೆ. 
-ಕಾರ್ತಿಕ್ ಆರ್ಯನ್‌ ನಟನೆಯ  ಶೆಹಜಾದ ಮತ್ತೊಂದು ಬಹುನಿರೀಕ್ಷಿತ ಚಿತ್ರವಾಗಿದ್ದು, ಇದು ತೆಲುಗಿನ ಸೂಪರ್‍ ಹಿಟ್ ಚಿತ್ರ, ಅಲ್ಲು ಅರ್ಜುನ್‌ ನಟನೆ ಅಲಾ ವೈಕುಂಠಪುರಮ್‌ಲೊದ ರೀಮೇಕ್‌ ಆಗಿದೆ. 
-ಅಜಯ್‌ ದೇವಗನ್‌ ನಟನೆಯ ಭೋಲಾ ಚಿತ್ರವು 2019ರ ತಮಿಳು ಚಿತ್ರ ಕೈದಿಯ ರೀಮೇಕ್‌ ಆಗಿದೆ. 

ಇದನ್ನೂ ಓದಿ : ʼಕ್ರಾಂತಿʼ ಸಿನಿಮಾದ ʼಬೊಂಬೆ ಬೊಂಬೆʼ ಹಾಡಿಗೆ ಹೆಜ್ಜೆ ಹಾಕಿದ ನಟಿ ಸ್ನೇಹಾ..! ವಿಡಿಯೋ ನೋಡಿ

ಐಎಂಡಿಬಿಯು ಸಿನಿಮಾ, ಟಿವಿ ಶೋಗಳು ಮತ್ತು ತಾರೆಯರಿಗೆ ಸಂಬಂಧಿಸಿದ ಅಧಿಕೃತ ಮಾಹಿತಿ ಪಡೆಯಲು ಇರುವ ಮೂಲವಾಗಿದೆ. ಇದರಲ್ಲಿ ಡೆಸ್ಕ್‌ಟಾಪ್‌ ಮತ್ತು ಮೊಬೈಲ್‌ಗೆ ಅನುಕೂಲವಾಗುವ ವೆಬ್‌ಸೈಟ್‌, ಐಒಎಸ್‌ ಮತ್ತು ಆಂಡ್ರಾಯ್ಡ್‌ನ ಮೊಬೈಲ್‌ ಆಪ್ಲಿಕೇಷನ್‌ಗಳು ಮತ್ತು ಫೈರ್‍ ಟಿವಿಗಳಿಗೆ ಐಎಂಡಿಬಿ ಎಕ್ಸ್‌ ರೇ ಸೇರಿವೆ. ಅಲ್ಲದೆ ಐಎಂಡಿಬಿ ಟಿವಿ  ಫ್ರೀ ಸ್ಟ್ರೀಮಿಂಗ್‌ ಚಾನೆಲ್‌  ಆಗಿದ್ದು,  ಐಎಂಡಿಬಿ ಒರಿಜಿನಲ್‌ ವಿಡಿಯೋ  ಸೀರಿಸ್ ಗಳನ್ನು ಕೂಡಾ ನಿರ್ಮಾಣ ಮಾಡುತ್ತದೆ. ಮನರಂಜನೆ ಉದ್ಯಮದ ವೃತ್ತಿಪರರಿಗೆ, ಐಎಂಡಿಬಿಪ್ರೊ ಮತ್ತು ಬಾಕ್ಸ್‌ ಆಫೀಸ್‌ ಮೊಜೊ ಎಂಬ ಸೇವೆಯನ್ನು ಒದಗಿಸುತ್ತದೆ. ಐಎಂಡಿಬಿ, ಅಮೆಜಾನ್‌ ಕಂಪನಿಯ ಭಾಗಗವಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News