Kishore : ನಾನು ಕೆಜಿಎಫ್‌ 2 ನೋಡಿಲ್ಲ ಎಂದಿದ್ದೇ ಅಷ್ಟೇ.. ಮೈಂಡ್‌ಲೆಸ್‌ ಅಂದಿಲ್ಲ..!

kantara actor Kishore : ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ 2 ಸಿನಿಮಾ ಕುರಿತು ಪ್ರತಿಕ್ರಿಯೆ ನೀಡಿದ್ದ ಬಹುಭಾಷಾ ನಟ ಕಿಶೋರ್ ಅವರು ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅವರು ನೀಡಿದ್ದ ಕೆಜಿಎಫ್‌ 2 ಮೈಂಡ್‌ಲೆಸ್‌ ಸಿನಿಮಾ ವಿಚಾರವಾಗಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸುಧೀರ್ಘವಾದ ಬರಹದೊಂದಿದೆ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

Written by - Krishna N K | Last Updated : Jan 8, 2023, 07:30 PM IST
  • ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ 2 ಸಿನಿಮಾ ಕುರಿತು ನಟ ಕಿಶೋರ್‌ ಪ್ರತಿಕ್ರಿಯೆ
  • ಕೆಜಿಎಫ್‌ 2 ಮೈಂಡ್‌ಲೆಸ್‌ ಸಿನಿಮಾ ವಿಚಾರವಾಗಿ ಸ್ಪಷ್ಟನೆ ನೀಡಿದ ಕಾಂತಾರ ನಟ
  • ನಾನು ಕೆಜಿಎಫ್‌ 2 ನೋಡಿಲ್ಲ ಎಂದಿದ್ದೇ ಅಷ್ಟೇ.. ಮೈಂಡ್‌ಲೆಸ್‌ ಅಂದಿಲ್ಲ ಎಂದ ಕಿಶೋರ್‌
Kishore : ನಾನು ಕೆಜಿಎಫ್‌ 2 ನೋಡಿಲ್ಲ ಎಂದಿದ್ದೇ ಅಷ್ಟೇ.. ಮೈಂಡ್‌ಲೆಸ್‌ ಅಂದಿಲ್ಲ..! title=

Kishore on kgf 2 : ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ 2 ಸಿನಿಮಾ ಕುರಿತು ಪ್ರತಿಕ್ರಿಯೆ ನೀಡಿದ್ದ ಬಹುಭಾಷಾ ನಟ ಕಿಶೋರ್ ಅವರು ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅವರು ನೀಡಿದ್ದ ಕೆಜಿಎಫ್‌ 2 ಮೈಂಡ್‌ಲೆಸ್‌ ಸಿನಿಮಾ ವಿಚಾರವಾಗಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸುಧೀರ್ಘವಾದ ಬರಹದೊಂದಿದೆ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ʼಕೆಜಿಎಫ್ 2ʼ ಸಿನಿಮಾ ಕುರಿತಂತೆ ಕಿಶೋರ್‌ ಅವರು ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದರು. ಅವರು ಕೆಜಿಎಫ್‌ 2 ಮೈಂಡ್‌ಲೆಸ್‌ ಸಿನಿಮಾ, ನಾನು ನೋಡಲ್ಲ ಎಂದಿದ್ದಾಗಿ ಸುದ್ದಿಯಾಗಿತ್ತು. ಆದ್ರೆ ಈ ವಿಚಾರ ವೈರಲ್‌ ಆಗುತ್ತಿದ್ದಂತೆ ಈ ಕುರಿತು ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಸ್ಪಷ್ಟತೆ ನೀಡಿದ್ದಾರೆ. ʼಚರ್ಚಿಸಲು, ಚಿಂತಿಸಲು ನಿಜವಾದ ಸಮಸ್ಯೆಗಳು ಹಲವಿರುವಾಗ ನನ್ನ ಲೋಕಾಭಿರಾಮದ ಯಾವುದೋ ಮಾತು ಚರ್ಚೆಗೆ ಗ್ರಾಸವಾಗುವುದೋ, ಜನರ ಸಮಯ ಹಾಳುಮಾಡುವುದೋ ನನ್ನ ಮಟ್ಟಿಗೆ ಅಕ್ಷಮ್ಯ. ಆದರೂ ಅದಕ್ಕಾಗಿ ಕ್ಷಮೆಯಿರಲಿ. ನಾನು ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಇಷ್ಟು ಚರ್ಚೆಯಾಗಿದ್ದರೆ ತೃಪ್ತಿಯಿರುತ್ತಿತ್ತು.

ಇದನ್ನೂ ಓದಿ: Urfi Javed : ಖ್ಯಾತ ಗೀತರಚನೆಕಾರ ʼಜಾವೇದ್‌ ಅಖ್ತರ್‌ ಉರ್ಫಿ ಅಜ್ಜʼ... ನೆಟ್ಟಿಗರು ಶಾಕ್‌..!

ಅದೇನೇ ಇರಲಿ ರಶ್ಮಿಕಾ ವಿಷಯದ ಚರ್ಚೆಯಲ್ಲಿ, ಆಯ್ಕೆಯ ಸ್ವಾತಂತ್ರದ ಮಾತುಗಳ ನಡುವೆ ಹೇಗೋ ಸುಳಿದ ಈ ಮಾತುಗಳಲ್ಲಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿರಲಿಲ್ಲ. “ಮೈಂಡ್ ಲೆಸ್ “ನನ್ನ ಪದವಲ್ಲ. ಬರೆದವರು ನನ್ನ ಯಾವ ಪದವನ್ನು ಸಮೀಕರಿಸಿ ಆ ಪದ ಬಳಸಿದರೋ, ಭಾಷಾಂತರದಲ್ಲಿ ಯಾವ ಪದದರ್ಥ ಏನಾಯ್ತೊ ಗೊತ್ತಿಲ್ಲ. “ನೋಡಿಲ್ಲ”ದಿಂದ “ನೋಡುವುದಿಲ್ಲ” ದವರೆಗೆ ಅವರವರ ಇಷ್ಟದಂತೆ ಬರೆದಿದ್ದಾರಲ್ಲ ಹಾಗೆ.

ಒಂದು ಸಿನಿಮಾವನ್ನು ನೋಡದ ನಾನು ಅದನ್ನು ಈ ಥರದ ಪದಬಳಸಿ ತೀರ್ಪು ಕೊಡುವುದು ಸಾಧ್ಯವೂ ಇಲ್ಲ . ಮಾಡಿದರೆ ತಪ್ಪೂ ಸಹ. ಆದರೆ ಪ್ರೇಕ್ಷಕನಾಗಿ ಎಲ್ಲರಿಗೂ ಇರುವಂತೆ ಅಭಿರುಚಿ, ಆಯ್ಕೆಯ ಸ್ವಾತಂತ್ರ್ಯ ನನ್ನದು. ಯಾರೂ ಯಾರನ್ನೂ ಥಿಯೇಟರಿನ ಒಳಗೂ ತಳ್ಳಲಾಗದು, ಹೊರಗೂ ಸಹ. ನನ್ನ ಸಿನಿಮಾವಾದರೂ ಸರಿ, ಯಾವ ಸಿನಿಮಾದರೂ ಸರಿ. ಒಟ್ಟಿನಲ್ಲಿ ನನ್ನ ಅಭಿರುಚಿಯೋ ಅಲ್ಲವೋ KGF ಸಿನಿಮಾದ ಯಶಸ್ಸಿನ ಬಗ್ಗೆ ಸಂತೋಷವಿದೆ ಹಾಗೂ ಆ ಯಶಸ್ಸಿನಿಂದ ನನ್ನಲ್ಲಿನ ಸಿನಿಮಾ ತಂತ್ರಜ್ಞ ಕಲಿತದ್ದು, ಕಲಿಯುವುದೂ ಸಾಕಷ್ಟಿದೆ. ನನ್ನ KGF ಕಲ್ಪನೆ ಬೇರೆಯೇ ಆದರೂ ಸಹ..ʼ ಎಂದು ಕಿಶೋರ್ ತಮ್ಮ ಮಾತನ್ನು ಮುಗಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News