ʼಕ್ರಾಂತಿʼ ಸಿನಿಮಾದ ʼಬೊಂಬೆ ಬೊಂಬೆʼ ಹಾಡಿಗೆ ಹೆಜ್ಜೆ ಹಾಕಿದ ನಟಿ ಸ್ನೇಹಾ..! ವಿಡಿಯೋ ನೋಡಿ

Sneha Kranti film song reels : ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʼಕ್ರಾಂತಿʼ ಸಿನಿಮಾದ ʼಬೊಂಬೆ ಬೊಂಬೆʼ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ದಚ್ಚು ಮತ್ತು ರಚ್ಚು ಅಭಿಮಾನಿಗಳು ಈ ಹಾಡಿನ ರಿಲ್ಸ್‌ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಅಲ್ಲದೆ, ಸ್ಟಾರ್‌ ನಟಿಯರು ಸಹ ಈ ಹಾಡಿಗೆ ರೀಲ್ಸ್‌ ಮಾಡೋಕೆ ಶುರುಮಾಡಿದ್ದಾರೆ. ಇದೀಗ ಬಹುಭಾಷಾ ನಟಿ ಸ್ನೇಹಾ ಅವರು ಕೂಡ ದರ್ಶನ್‌ ಸಿನಿಮಾದ ಹಾಡಿಗೆ ಸೊಂಟ ಬಳುಕಿಸಿದ್ದು, ವಿಡಿಯೋ ಸಖತ್‌ ವೈರಲ್‌ ಆಗಿದೆ.

Written by - Krishna N K | Last Updated : Jan 8, 2023, 07:04 PM IST
  • ʼಕ್ರಾಂತಿʼ ಸಿನಿಮಾದ ʼಬೊಂಬೆ ಬೊಂಬೆʼ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.
  • ದಚ್ಚು ಮತ್ತು ರಚ್ಚು ಅಭಿಮಾನಿಗಳು ಈ ಹಾಡಿನ ರಿಲ್ಸ್‌ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ.
  • ಇದೀಗ ಬಹುಭಾಷಾ ನಟಿ ಸ್ನೇಹಾ ಅವರು ಕೂಡ ದರ್ಶನ್‌ ಸಿನಿಮಾದ ಹಾಡಿಗೆ ಸೊಂಟ ಬಳುಕಿಸಿದ್ದು, ವಿಡಿಯೋ ಸಖತ್‌ ವೈರಲ್‌ ಆಗಿದೆ.
ʼಕ್ರಾಂತಿʼ ಸಿನಿಮಾದ ʼಬೊಂಬೆ ಬೊಂಬೆʼ ಹಾಡಿಗೆ ಹೆಜ್ಜೆ ಹಾಕಿದ ನಟಿ ಸ್ನೇಹಾ..! ವಿಡಿಯೋ ನೋಡಿ title=

Kranti film songs : ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʼಕ್ರಾಂತಿʼ ಸಿನಿಮಾದ ʼಬೊಂಬೆ ಬೊಂಬೆʼ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ದಚ್ಚು ಮತ್ತು ರಚ್ಚು ಅಭಿಮಾನಿಗಳು ಈ ಹಾಡಿನ ರಿಲ್ಸ್‌ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಅಲ್ಲದೆ, ಸ್ಟಾರ್‌ ನಟಿಯರು ಸಹ ಈ ಹಾಡಿಗೆ ರೀಲ್ಸ್‌ ಮಾಡೋಕೆ ಶುರುಮಾಡಿದ್ದಾರೆ. ಇದೀಗ ಬಹುಭಾಷಾ ನಟಿ ಸ್ನೇಹಾ ಅವರು ಕೂಡ ದರ್ಶನ್‌ ಸಿನಿಮಾದ ಹಾಡಿಗೆ ಸೊಂಟ ಬಳುಕಿಸಿದ್ದು, ವಿಡಿಯೋ ಸಖತ್‌ ವೈರಲ್‌ ಆಗಿದೆ.

ಈಗಾಗಲೇ ಕ್ರಾಂತಿ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಯೂಟ್ಯೂಬ್‌ನಲ್ಲಿ ಅಬ್ಬರಿಸುತ್ತಿದೆ. ಕ್ರಾಂತಿ ಸಿನಿಮಾವನ್ನು ವಿ. ಹರಿಕೃಷ್ಣ ಅವರು ನಿರ್ದೇಶಿಸಿದ್ದಾರೆ. ಅಲ್ಲದೆ, ಚಿತ್ರದ ಎಲ್ಲಾ ಹಾಡಿಗೆ ಅವರೇ ಸಂಗೀತ ನೀಡಿದ್ದಾರೆ. ಈ ಪೈಕಿ ʼಬೊಂಬೊ ಬೊಂಬೊʼ ಎಂಬ ರೊಮ್ಯಾಂಟಿಕ್ ಹಾಡು ಸೂಪರ್‌ ಹಿಟ್‌ ಆಗುತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ವಿಡಿಯೋ ಮಾಡಿ ದಾಸನ ಅಭಿಮಾನಿಗಳು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: DBoss Kranti : ʼಕ್ರಾಂತಿʼ ಸೆಂಟರ್‌ ಅಟ್ರ್ಯಾಕ್ಷನ್‌ ಆಯ್ತು ದರ್ಶನ್‌ ಬಾಡಿ ಲುಕ್‌..!

ʼಬೊಂಬೊ ಬೊಂಬೆʼ ಸಾಂಗ್‌ ಅಷ್ಟೇ ಅಲ್ಲ, ʼಪುಷ್ಪವತಿ' ಶೇಕ್‌ ಇಟ್‌ ಹಾಡು ಕೂಡ ಎಲ್ಲೆಡೆ ಸದ್ದು ಮಾಡುತ್ತಿದೆ. ಇನ್‌ಸ್ಟಾದಲ್ಲಿ ಈ ಎರಡು ಹಾಡಿನ ರೀಲ್ಸ್ ವಿಡಿಯೋಗಳು ಹರಿದಾಡುತ್ತಿದೆ. ಇದೀಗ ನಟಿ ಸ್ನೇಹಾ ಕೂಡ ಬೊಂಬೆ ಬೊಂಬೆ ಹಾಡಿಗೆ ಹೆಜ್ಜೆ ಹಾಕಿದ್ದು, ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಡ್ಯಾನ್ಸ್ ಮಾಸ್ಟರ್ ಸಂದೀಪ್ ಜೊತೆ ಸ್ನೇಹಾ ಹೆಜ್ಜೆ ಹಾಕಿದ್ದಾರೆ.

ಭೂಷಣ್‌ ಮಾಸ್ಟರ್‌ ಕೊರಿಯೋಗ್ರಫಿಯಲ್ಲಿ ಮೂಡಿ ಬಂದ ಬೊಂಬೆ ಬೊಂಬೆ ಹಾಡಿನಲ್ಲಿ ದರ್ಶನ್‌ ಮತ್ತು ರಚಿತಾ ರಾಮ್‌  ಕೆಮೆಸ್ಟ್ರಿ ಸಖತ್ ವರ್ಕೌಟ್‌ ಆಗಿದೆ. ಇನ್ನು ನಟಿ ಸ್ನೇಹಾ ಅವರು, ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇತ್ತಿಚೀಗೆ ಅವರು, ಮುನಿರತ್ನ ನಿರ್ಮಾಣದ ʼಕುರುಕ್ಷೇತ್ರʼ ಸಿನಿಮಾದಲ್ಲಿ ದ್ರೌಪದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ದರ್ಶನ್ ದುರ್ಯೋಧನನಾಗಿ ಅಬ್ಬರಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News