ಮದುವೆಗೆ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರಾ ಆಲಿಯಾ-ರಣಬೀರ್?

ರಣಬೀರ್ ಹಾಗೂ ಆಲಿಯಾ ಯಾವಾಗ ಮದುವೆ ಆಗ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ಇವರಿಬ್ಬರೂ ಮದುವೆ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

Written by - Chetana Devarmani | Last Updated : Mar 26, 2022, 06:45 PM IST
  • ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ರಣಬೀರ್ ಹಾಗೂ ಆಲಿಯಾ ಭಟ್ ಜೋಡಿ ಕೂಡ ಒಂದು
  • ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ
  • ಮದುವೆಗೆ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರಾ ಆಲಿಯಾ-ರಣಬೀರ್?
ಮದುವೆಗೆ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರಾ ಆಲಿಯಾ-ರಣಬೀರ್?  title=
ಆಲಿಯಾ ಭಟ್

ಗಂಗೂಬಾಯಿ ಕಥಿಯಾವಾಡಿ, ಆರ್‌ಆರ್‌ಆರ್‌ (RRR) ಸಿನಿಮಾ ಮೂಲಕ ಸುದ್ದಿಯಲ್ಲಿರುವ ಆಲಿಯಾ (Alia Bhatt) ಇದೀಗ ಏನ್ಮಾಡ್ತಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಬಾಲಿವುಡ್ (Bollywood) ಕ್ಯೂಟ್ ಜೋಡಿಗಳಲ್ಲಿ ರಣಬೀರ್ (ranbir kapoor) ಹಾಗೂ ಆಲಿಯಾ ಭಟ್ ಜೋಡಿ ಕೂಡ ಒಂದು. ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 

ಇದನ್ನೂ ಓದಿ: ಉಪೇಂದ್ರ ನಟನೆಯ "ಹೋಮ್‌ ಮಿನಿಸ್ಟರ್‌" ಸಿನಿಮಾ ರಿಲೀಸ್‌ ಯಾವಾಗ?

ಆರಂಭದಲ್ಲಿ ಇದೊಂದು ಗಾಸಿಪ್‌ (Gossip) ಎಂದು ಎಲ್ಲರೂ ಭಾವಿಸಿದ್ದರು. ಆದರೆ ಬಳಿಕ ಈ ಜೋಡಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಬಹಿರಂಗಪಡಿಸಿದರು. ರಣ್‍ಬೀರ್ ಹಾಗೂ ಆಲಿಯಾ ಯಾವಾಗ ಮದುವೆ ಆಗ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ಇವರಿಬ್ಬರೂ ಮದುವೆ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಆಲಿಯಾರನ್ನು ರಣ್‍ಬೀರ್ ಬಹಳ ಇಷ್ಟಪಡುತ್ತಾರಂತೆ ಈ ಜೋಡಿಯ ಮದುವೆಗೆ (Alia-Ranbir marriage) ಎರಡು ಕುಟುಂಬಗಳು ಒಪ್ಪಿಕೊಂಡಿವೆಯಂತೆ. ಹಿಂದಿ ಚಿತ್ರರಂಗದ ಖ್ಯಾತ ಕಲಾವಿದರಾದ ಆಲಿಯಾ ಭಟ್ ಮತ್ತು ರಣಬೀರ್​ ಕಪುರ್‌​ ನಡುವಿನ ಈ ಮಧುರ ಪ್ರೇಮ ವಿವಾಹ ಸಂಬಂಧವಾಗಲು ಸಕಲ ಸಿದ್ಧತೆ ನಡೆಯುತ್ತಿದೆ. 

ಇದನ್ನೂ ಓದಿ: KGF Chapter 2: ಯಶ್ ಫ್ಯಾನ್ಸ್‌ಗೆ ಸಿಕ್ತು ಗುಡ್ ನ್ಯೂಸ್, ಬಾಕ್ಸ್ ಆಫೀಸ್ ಶೇಕ್ ಮಾಡಲು ‘ರಾಕಿ ಬಾಯ್’ ಸಜ್ಜು!

ಅಯಾನ್ ಮುಖರ್ಜಿ ಅವರ ನಿರ್ದೇಶನದ 'ಬ್ರಹ್ಮಾಸ್ತ್ರ' (Brahmastra) ಚಿತ್ರೀಕರಣದ ವೇಳೆ ಇಬ್ಬರು ಡೇಟಿಂಗ್ ಆರಂಭಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News