ಮೈನಸ್ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಮನಾಲಿಯಲ್ಲಿ 'ಬ್ರಹ್ಮಾಸ್ತ್ರ' ಚಿತ್ರೀಕರಣ!

ಚಿತ್ರದ ಒಂದು ಭಾಗವನ್ನು ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಅದರ ಹೆಚ್ಚಿನ ಭಾಗವನ್ನು ಬಲ್ಗೇರಿಯಾದಲ್ಲಿ ಚಿತ್ರೀಕರಿಸಲಾಗಿದೆ.

  • Dec 03, 2019, 09:15 AM IST

ನವದೆಹಲಿ: ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್(Amitabh Bachchan), ಆಲಿಯಾ ಭಟ್(Alia Bhatt) ಮತ್ತು ರಣಬೀರ್ ಕಪೂರ್(Ranbir Kapoor) ಈ ದಿನಗಳಲ್ಲಿ ತಮ್ಮ ಬಹುನಿರೀಕ್ಷಿತ ಚಿತ್ರ 'ಬ್ರಹ್ಮಾಸ್ತ್ರ'(Brahmastra)ದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ದಿನಗಳಲ್ಲಿ ಮನಾಲಿಯಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಶೂಟಿಂಗ್ ವೇಳೆ ತೆಗೆಯಲಾದ ಕೆಲ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ  ಅಮಿತಾಬ್ ಬಚ್ಚನ್, ಮನಾಲಿಯಲ್ಲಿ ಇದೀಗ ಮೈನಸ್ ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ, ಆದರೆ ಶೂಟಿಂಗ್ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು. ಅದೇ ಸಮಯದಲ್ಲಿ, ಚಲನಚಿತ್ರ ವಿಮರ್ಶಕ ರಮೇಶ್ ಬಾಲಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಚಿತ್ರದ ಚಿತ್ರೀಕರಣದ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗುತ್ತಿದೆ.

1 /5

ಈ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ(Akkineni Nagarjuna) ಮತ್ತು ಮೌನಿ ರಾಯ್ ನಟಿಸಿದ್ದಾರೆ. ರಣಬೀರ್ ಕಪೂರ್, ಆಲಿಯಾ ಭಟ್ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಅಕ್ಕಿನೆನಿ ನಾಗಾರ್ಜುನ!  

2 /5

ಈ ಚಿತ್ರದಲ್ಲಿ ಅಮಿತಾಬ್ ಅವರು ಆಲಿಯಾ ಮತ್ತು ರಣಬೀರ್ ಅವರೊಂದಿಗೆ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.

3 /5

'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಶಾರುಖ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.

4 /5

ಚಿತ್ರದ ಒಂದು ಭಾಗವನ್ನು ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಅದರ ಹೆಚ್ಚಿನ ಭಾಗವನ್ನು ಬಲ್ಗೇರಿಯಾದಲ್ಲಿ ಚಿತ್ರೀಕರಿಸಲಾಗಿದೆ.

5 /5

ಈ ವರ್ಷದ ಕ್ರಿಸ್‌ಮಸ್ ಹಬ್ಬದಂದು ಈ ಚಿತ್ರ ಬಿಡುಗಡೆಯಾಗಬೇಕಿತ್ತು, ಆದರೆ 'ಬ್ರಹ್ಮಾಸ್ತ್ರ' ಚಿತ್ರದ ನಿರ್ಮಾಪಕರು  ಅದರ ಬಿಡುಗಡೆಯನ್ನು 2020 ರ ಬೇಸಿಗೆಯವರೆಗೆ ಮುಂದೂಡಿದರು. (ಫೋಟೊ ಕೃಪೆ: ಎಲ್ಲಾ ಚಿತ್ರಗಳನ್ನು ಅಮಿತಾಬ್ ಬಚ್ಚನ್ / ರಮೇಶ್ ಬಾಲಾ ಅವರ ಟ್ವಿಟ್ಟರ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)