ದಸರಾ ದಿನ ಕೆಂಪುಕೋಟೆಯಲ್ಲಿ ಪ್ರಧಾನಿ ಅಲ್ಲ ಕಂಗನಾ ರಣಾವತ್ ರಾವಣ ದಹನ ನಡೆಸಲಿದ್ದಾಳೆ, 50 ವರ್ಷಗಳ ಇತಿಹಾಸದಲ್ಲಿ ಈ ರೀತಿ ಆಗುತ್ತಿರುವುದು ಇದೇ ಮೊದಲು!

Dussehra 2023: ಈ ಕುರಿತು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಈ ವರ್ಷ ಕೆಂಪು ಕೋಟೆಯಲ್ಲಿರುವ ಲುವ್ ಕುಶ್ ರಾಮಲೀಲಾದಲ್ಲಿ ರಾವಣನ ದಹನ ಮಾಡುವುದಾಗಿ ಹೇಳಿಕೊಂಡಿದ್ದಾರೆ. (Entertainment News In Kannada)  

Written by - Nitin Tabib | Last Updated : Oct 23, 2023, 10:35 PM IST
  • ಕಂಗನಾ ರಣಾವತ್ ಅವಳ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ ಮತ್ತು
  • ನೆಟಿಜನ್‌ಗಳು ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
  • ದಸರಾ ಸಂದರ್ಭದಲ್ಲಿ ಕಂಗನಾ ರಣಾವತ್ ರಾವಣ ದಹನ ಮಾಡುತ್ತಿರುವುದು ಇದೇ ಮೊದಲು.
ದಸರಾ ದಿನ ಕೆಂಪುಕೋಟೆಯಲ್ಲಿ ಪ್ರಧಾನಿ ಅಲ್ಲ ಕಂಗನಾ ರಣಾವತ್ ರಾವಣ ದಹನ ನಡೆಸಲಿದ್ದಾಳೆ, 50 ವರ್ಷಗಳ ಇತಿಹಾಸದಲ್ಲಿ ಈ ರೀತಿ ಆಗುತ್ತಿರುವುದು ಇದೇ ಮೊದಲು! title=

ನವದೆಹಲಿ: ಬಾಲಿವುಡ್‌ನಲ್ಲಿ 'ಧಾಕಡ್' ನಟಿ ಎಂದೇ ಖ್ಯಾತ ಕಂಗನಾ ರಣಾವತ್ ಸೋಮವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಒಂದು ವೀಡಿಯೊವೊಂದನ್ನು ಪೋಸ್ಟ್ ಮಾಡುವ ಮೂಲಕ ದೊಡ್ಡ ಘೋಷಣೆ ಮೊಲಗಿಸಿದ್ದಾರೆ. ಅಕ್ಟೋಬರ್ 24 ರಂದು ದಸರಾ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಲವ್ ಕುಶ್ ರಾಮಲೀಲಾದಲ್ಲಿ ಭಾಗವಹಿಸಲು ಬರುತ್ತಿದ್ದೇನೆ ಎಂದು ನಟಿ ಹೇಳಿದ್ದಾರೆ. ವೀಡಿಯೊದ ಶೀರ್ಷಿಕೆಯಲ್ಲಿ ಬರೆದುಕೊಂಡ ಕಂಗನಾ, 'ಕೆಂಪು ಕೋಟೆಯಲ್ಲಿ ಪ್ರತಿ ವರ್ಷ ಆಯೋಜಿಸುವ ಕಾರ್ಯಕ್ರಮದ 50 ವರ್ಷಗಳ ಇತಿಹಾಸದಲ್ಲಿ ಮಹಿಳೆಯೊಬ್ಬರು ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚುವುದು ಇದೇ ಮೊದಲು' ಎಂದು ಬರೆದಿದ್ದಾರೆ. ಕಂಗನಾ ರಣಾವತ್ ಅವಳ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ ಮತ್ತು ನೆಟಿಜನ್‌ಗಳು ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ದಸರಾ ಸಂದರ್ಭದಲ್ಲಿ ಕಂಗನಾ ರಣಾವತ್ ರಾವಣ ದಹನ ಮಾಡುತ್ತಿರುವುದು ಇದೇ ಮೊದಲು.

ರಾವಣ ದಹನ ಮಾಡಿದ ಮೊದಲ ಮಹಿಳೆ ಕಂಗನಾ ರಣಾವತ್
ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಕಂಗನಾ ರಣಾವತ್ ದೆಹಲಿಯ ಪ್ರಸಿದ್ಧ ಲವ್ ಕುಶ್ ರಾಮಲೀಲಾವನ್ನು ಅಲಂಕರಿಸಲು ಸಿದ್ಧರಾಗಿದ್ದಾರೆ. ಇವರಲ್ಲದೆ, ಮಂಗಳವಾರ ಸಂಜೆ ಕೆಂಪುಕೋಟೆ ಮೈದಾನದಲ್ಲಿ ರಾವಣ ದಹನ ಕಾರ್ಯಕ್ರಮದಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ. ಕಂಗನಾ ರಣಾವತ್ ತಮ್ಮ ವಿಡಿಯೋದಲ್ಲಿ, 'ಹಲೋ ಫ್ರೆಂಡ್ಸ್... ಅಕ್ಟೋಬರ್ 24 ರಂದು ರಾವಣನನ್ನು ದಹಿಸಲು ಕೆಂಪು ಕೋಟೆಯಲ್ಲಿ ಸ್ಥಾಪಿಸಲಾದ ರಾಮಲೀಲಾದಲ್ಲಿ ಭಾಗವಹಿಸಲು ಬರುತ್ತಿದ್ದೇನೆ. ಕೆಟ್ಟದ್ದರ ವಿರುದ್ಧ ಒಳ್ಳೆಯ ಸಂಗತಿಯ ಜಯದ ಸಂಕೇತ ಇದಾಗಿದೆ... ಭಾಗವಹಿಸಲು ತಪ್ಪದೆ ಬನ್ನಿ, ಅಕ್ಟೋಬರ್ 24 ರಂದು ಭೇಟಿಯಾಗೋಣ ಎಂದಿದ್ದಾರೆ. 

ಇದನ್ನೂ ಓದಿ-ಇದೇ ನೋಡಿ ವಿಶ್ವದ ಅತ್ಯಂತ ಸುಲಭ ನೌಕರಿ, ಕೆಲಸವಿಲ್ಲದೆ ಕುಳಿತುಕೊಳ್ಳಲು ಎಷ್ಟು ವೇತನ ಸಿಗುತ್ತೆ ಗೊತ್ತಾ?

ಪ್ರತಿ ವರ್ಷ ಪ್ರಧಾನಿಯಿಂದ ರಾವಣ ದಹನ ನಡೆಯುತ್ತದೆ
ವೀಡಿಯೊದಲ್ಲಿ, ಕಂಗನಾ ರಣಾವತ್ ತನ್ನ ಮುಂಬರುವ ಚಿತ್ರ 'ತೇಜಸ್' ಕುರಿತು ಪ್ರಚಾರ ಮಾಡುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಅವರು ಹೇಳಿದ್ದಾರೆ, 'ನನ್ನ ಮುಂಬರುವ ಚಿತ್ರ ತೇಜಸ್... ಈ ವಾರ ಅಕ್ಟೋಬರ್ 27 ರಂದು ಬಿಡುಗಡೆಯಾಗುತ್ತಿದೆ. ಚಿತ್ರವನ್ನು ನೋಡಲು ಮರೆಯದಿರಿ. ಈ ಚಲನಚಿತ್ರವು ಭಾರತೀಯ ವಾಯುಪಡೆಯನ್ನು ಆಧರಿಸಿದೆ... ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ. ಜೈ ಶ್ರೀ ರಾಮ್...' ಕಂಗನಾ ರನೌತ್ ಅವರು ಟ್ವೀಟ್ (ಎಕ್ಸ್) ಶೀರ್ಷಿಕೆಯಲ್ಲಿ ರಾಮಲೀಲಾದಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ್ದಾರೆ. 50 ವರ್ಷಗಳ ಇತಿಹಾಸದಲ್ಲಿ ಕೆಂಪು ಕೋಟೆಯಲ್ಲಿ ಪ್ರತಿ ವರ್ಷ ಆಯೋಜಿಸಲಾಗುವ ರಾವಣ ದಹನ ಕಾರ್ಯಕ್ರಮದ ಇತಿಹಾಸದಲ್ಲಿ ಮಹಿಳೆಯೊಬ್ಬರು ರಾವಣ ದಹನ ಮಾಡುತ್ತಿರುವುದು ಇದೇ ಮೊದಲು. ಪ್ರತಿ ವರ್ಷ ದೇಶದ ಪ್ರಧಾನಿ ರಾವಣನನ್ನು ದಹಿಸುವುದು ಇಲ್ಲಿ ಗಮನಾರ್ಹ ಸಂಗತಿ. 

ಇದನ್ನೂ ಓದಿ-ಇವರೇ ನೋಡಿ ಬಾಲೀವುಡ್ ಚಲನ ಚಿತ್ರಗಳಲ್ಲಿ ಅತಿ ಹೆಚ್ಚು ರೇಪ್ ಮಾಡಿದ ಖಳನಟರು!

ಕಂಗನಾ ಏರ್ ಫೋರ್ಸ್ ಪೈಲಟ್ ಆಗುವ ಮೂಲಕ ನಿದ್ದೆಗೆಡಿಸಲಿದ್ದಾಳೆ
ದೆಹಲಿಯ ಕೆಂಪು ಕೋಟೆ ಮೈದಾನದಲ್ಲಿ ಪ್ರತಿ ವರ್ಷ ದಸರಾ ದಿನದಂದು ರಾವಣನನ್ನು ದಹಿಸಲಾಗುತ್ತದೆ. ಈ ವರ್ಷ, ಮೊದಲ ಬಾರಿಗೆ, ದೆಹಲಿಯ 'ಲವ್-ಕುಶ್ ರಾಮಲೀಲಾ'ದಲ್ಲಿ ಮಹಿಳೆಯೊಬ್ಬರು ರಾವಣನನ್ನು ದಹಿಸುತ್ತಿದ್ದಾರೆ. ಕಂಗನಾ ರಣಾವತ್ ಅವರು ಕೆಂಪು ಕೋಟೆ ಮೈದಾನದಲ್ಲಿ ರಾವಣನ ಮೇಲೆ ಬಾಣ ಬಿಡಲಿದ್ದಾರೆ ಎಂದು ಹೇಳಲಾಗುತ್ತಿದೆ, ನಂತರ ಮಂಗಳವಾರ ದೆಹಲಿಯ ಕೆಂಪು ಕೋಟೆ ಮೈದಾನದಲ್ಲಿ ಅದ್ಧೂರಿ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನು ಕಂಗನಾ ರಣಾವತ್ ಅಭಿನಯದ 'ತೇಜಸ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರ ಇದೇ ಶುಕ್ರವಾರ ದೇಶಾದ್ಯಂತ ಮತ್ತು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಕಂಗನಾ ರಣಾವತ್ ಏರ್ ಫೋರ್ಸ್ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News