ಇವರೇ ನೋಡಿ ಬಾಲೀವುಡ್ ಚಲನ ಚಿತ್ರಗಳಲ್ಲಿ ಅತಿ ಹೆಚ್ಚು ರೇಪ್ ಮಾಡಿದ ಖಳನಟರು!

Bollywood News: ಇತ್ತೀಚಿನ ದಿನಗಳಲ್ಲಿ ಚಲನ ಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳು ಕಡಿಮೆಯಾಗಿವೆ. ಏಕೆಂದರೆ ಸಮಾಜದಲ್ಲಿ ಅತ್ಯಾಚಾರದಂತಹ ಕುಕೃತ್ಯಕ್ಕೆ ಕುಮ್ಮಕ್ಕು ನೀಡುವ ಕೆಲಸವಾಗಬಾರದು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. (Entertainment News In Kannada)  

Written by - Nitin Tabib | Last Updated : Oct 23, 2023, 04:46 PM IST
  • ನಮ್ಮ ಅಕ್ಕಪಕ್ಕದಲ್ಲಿ ಅಥವಾ ಸಮಾಜದಲ್ಲಿ ನಡೆಯುವ ಘಟನಾವಳಿಗಳನ್ನೇ ಚಿತ್ರಗಳಲ್ಲಿ ಬಿಂಬಿಸಲಾಗುತ್ತದೆ ಎನ್ನಲಾಗುತ್ತದೆ.
  • ದೇಶಾದ್ಯಂತ ದಿನನಿತ್ಯ ಅತ್ಯಾಚಾರದ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ.
  • ಒಂದು ಕಾಲದಲ್ಲಿ ನಮ್ಮ ಚಲನಚಿತ್ರಗಳಲ್ಲಿಯೂ ಕೂಡ ಅತ್ಯಾಚಾರದ ದೃಶ್ಯಗಳನ್ನು ತೋರಿಸಲಾಗುತ್ತದೆ.
ಇವರೇ ನೋಡಿ ಬಾಲೀವುಡ್ ಚಲನ ಚಿತ್ರಗಳಲ್ಲಿ ಅತಿ ಹೆಚ್ಚು ರೇಪ್ ಮಾಡಿದ ಖಳನಟರು! title=

ಮುಂಬೈ: ಸಾಮಾನ್ಯವಾಗಿ ಚಲನಚಿತ್ರಗಳು ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿಗಳು ಎಂದು ಹೇಳಲಾಗುತ್ತದೆ. ನಮ್ಮ ಅಕ್ಕಪಕ್ಕದಲ್ಲಿ ಅಥವಾ ಸಮಾಜದಲ್ಲಿ ನಡೆಯುವ ಘಟನಾವಳಿಗಳನ್ನೇ ಚಿತ್ರಗಳಲ್ಲಿ ಬಿಂಬಿಸಲಾಗುತ್ತದೆ ಎನ್ನಲಾಗುತ್ತದೆ. ಅಂತಹುದೇ ಒಂದು ಘಟನೆ ಎಂದರೆ ಅದು ಅತ್ಯಾಚಾರ. ದೇಶಾದ್ಯಂತ ದಿನನಿತ್ಯ ಅತ್ಯಾಚಾರದ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಒಂದು ಕಾಲದಲ್ಲಿ ನಮ್ಮ ಚಲನಚಿತ್ರಗಳಲ್ಲಿಯೂ ಕೂಡ ಅತ್ಯಾಚಾರದ ದೃಶ್ಯಗಳನ್ನು ತೋರಿಸಲಾಗುತ್ತದೆ. (Entertainment News In Kannada)

ಇತ್ತೀಚಿನ ದಿನಗಳಲ್ಲಿ ಚಲನ ಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳು ಕಡಿಮೆಯಾಗಿವೆ. ಏಕೆಂದರೆ ಸಮಾಜದಲ್ಲಿ ಅತ್ಯಾಚಾರದಂತಹ ಕುಕೃತ್ಯಕ್ಕೆ ಕುಮ್ಮಕ್ಕು ನೀಡುವ ಕೆಲಸವಾಗಬಾರದು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಏತನ್ಮಧ್ಯೆ ಬನ್ನಿ ಚಲನಚಿತ್ರಗಳಲ್ಲಿ ಅತಿ ಹೆಚ್ಚು ರೇಪ್ ಸೀನ್ ಗಳಲ್ಲಿ ಕಾಣಿಸಿಕೊಂಡ ಆ ನಟರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

ಪ್ರೇಮ್ ಚೋಪ್ರಾ: ಚಲನಚಿತ್ರಗಳಲ್ಲಿ ಅತಿ ಹೆಚ್ಚು ರೇಪ್ ಸೀನ್ ಗಳಲ್ಲಿ ಕಾಣಿಸಿಕೊಂಡ ಖ್ಯಾತಿ ಹಿರಿಯ ಖಳನಟ ಪ್ರೇಮ್ ಚೋಪ್ರಾಗೆ ಸಲ್ಲುತ್ತದೆ. ಸರಿಸುಮಾರು 320 ಚಲನಚಿತ್ರಗಳಲ್ಲಿ ನಟಿಸಿರುವ ಈ ಖಳನಟ 250 ಚಿತ್ರಗಳ ರೇಪ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಚಿತ್ರದಲ್ಲಿ ರೇಪ್ ಸೀನ್ ಇರುವ ಕಾರಣವೇ ಅವರನ್ನು ಕಾಸ್ಟ್ ಮಾಡಲಾಗುತ್ತಿತ್ತು ಎಂದೂ ಕೂಡ ಹೇಳಲಾಗುತ್ತದೆ. 

ರಂಜೀತ್: ಬಾಲಿವುಡ್ ನ ಮತ್ತೊರ್ವ ಹಿರಿಯ ಖಳನಟ 150 ಚಿತ್ರಗಳ ರೇಪ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಚಿತ್ರಗಳಲ್ಲಿ ತಾವು ರೇಪ್ ಸೀನ್ ಗಳಲ್ಲಿ ಕಾಣಿಸಿಕೊಂಡ ಕಾರಣ ಹಲವು ಮಹಿಳಾ ಅಭಿಮಾನಿಗಳು ತಮ್ಮಿಂದ ದೂರ ಸರಿಯುತ್ತಿದ್ದರು ಎಂದು ಖುದ್ದು ರಂಜೀತ್ ಅವರೇ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. 

ಡ್ಯಾನಿ ಡ್ಯಾಂಜೋಪಾ: ಡ್ಯಾನಿ ಡ್ಯಾಂಜೋಪಾ 110 ಚಿತ್ರಗಳ ರೇಪ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಯಾಕೆ ಹಲವು ಚಿತ್ರಗಳಲ್ಲಿ ಪ್ರೇಮ್ ಚೋಪ್ರಾ, ರಂಜೀತ್ ಹಾಗೂ ಡ್ಯಾನಿ ಮೂವರು ಕೂಡ ಏಕಕಾಲಕ್ಕೆ ಆ ಚಿತ್ರದ ರೇಪ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರೆ ನಿಮಗೂ ಆಶ್ಚರ್ಯವಾಗಬಹುದು. 

ಇದನ್ನೂ ಓದಿ-ಇದೇ ನೋಡಿ ವಿಶ್ವದ ಅತ್ಯಂತ ಸುಲಭ ನೌಕರಿ, ಕೆಲಸವಿಲ್ಲದೆ ಕುಳಿತುಕೊಳ್ಳಲು ಎಷ್ಟು ವೇತನ ಸಿಗುತ್ತೆ ಗೊತ್ತಾ?

ಶಕ್ತಿ ಕಪೂರ್: 400 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಶಕ್ತಿ ಕಪೂರ್ 80 ಕ್ಕೂ ಅಧಿಕ ಚಿತ್ರಗಳ ಅತ್ಯಾಚಾರದ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಶಕ್ತಿ ಕಪೂರ್ ಅವರ ತಾಯಿ ಕೂಡ ಶಕ್ತಿಯ ಅತ್ಯಾಚಾರ ದೃಶ್ಯಗಳಿಂದ ಬೇಸತ್ತು ಹೋಗಿದ್ದರು ಎನ್ನಲಾಗುತ್ತದೆ. 

ಇದನ್ನೂ ಓದಿ-Viral Video: ದೆಹಲಿ ಮೆಟ್ರೊದಿಂದ ಯುವಕ-ಯುವತಿಯ ಮತ್ತೊಂದು ಅಸಹ್ಯ ಹುಟ್ಟಿಸುವಂತ ವಿಡಿಯೋ ವೈರಲ್!

ಗುಲ್ಶನ್ ಗ್ರೋವರ್: ಬೆಳ್ಳಿ ಪರದೆಯ ಮೇಲೆ ರೇಪ್ ಸೀನ್ ನಲ್ಲಿ ಕಾಣಿಸಿಕೊಂಡ ಖ್ಯಾತ ನಾಮರಲ್ಲಿ ಗುಲ್ಶನ್ ಗ್ರೋವರ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಗುಲ್ಶನ್ ಸುಮಾರು 22 ಚಿತ್ರಗಳ ರೇಪ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.  

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News