Jalapatha Release: ಅಕ್ಟೋಬರ್ 13ಕ್ಕೆ ಮಲೆನಾಡಿನ ಸಂಸ್ಕೃತಿಯ 'ಜಲಪಾತ' ಸಿನಿಮಾ ತೆರೆಗೆ

Jalapatha Release Date: ಸಾದ್ವಿನಿ ಕೊಪ್ಪ ಸಂಗೀತವಿರುವ 3 ಹಾಡುಗಳು ಈಗಾಗಲೇ ಜನಪ್ರಿಯವಾಗಿದ್ದು, ಹೆಸರಾಂತ ಗಾಯಕ ವಿಜಯಪ್ರಕಾಶ್ ಚಿತ್ರದ ಥೀಮ್ ಸಾಂಗ್‍ಗೆ ಧ್ವನಿಯಾಗಿದ್ದಾರೆ. ​

Written by - YASHODHA POOJARI | Edited by - Puttaraj K Alur | Last Updated : Oct 6, 2023, 09:32 PM IST
  • ಇದೇ ಅ.13ರ ಶುಕ್ರವಾರ ‘ಜಲಪಾತ’ ಚಿತ್ರವು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ
  • ರಮೇಶ್ ಬೇಗಾರ್ ರಚಿಸಿ-ನಿರ್ದೇಶಿಸಿರುವ ‘ಜಲಪಾತ’ಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್
  • ಖ್ಯಾತ ನಟ ಪ್ರಮೋದ್ ಶೆಟ್ಟಿ ಅತ್ಯಂತ ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ
Jalapatha Release: ಅಕ್ಟೋಬರ್ 13ಕ್ಕೆ ಮಲೆನಾಡಿನ ಸಂಸ್ಕೃತಿಯ 'ಜಲಪಾತ' ಸಿನಿಮಾ ತೆರೆಗೆ  title=
ಅ.13ಕ್ಕೆ ‘ಜಲಪಾತ’ ತೆರೆಗೆ

ಬೆಂಗಳೂರು: ಇಂಡಸ್ ಹರ್ಬ್ಸ್ ನ ಟಿ.ಸಿ.ರವೀಂದ್ರ ತುಂಬರಮನೆ ನಿರ್ಮಿಸಿ, ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ‘ಜಲಪಾತ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು’ ಸರ್ಟಿಫಿಕೇಟ್ ನೀಡಿದ್ದು, ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೇ ಚಿತ್ರ ತೇರ್ಗಡೆ ಹೊಂದಿದೆ. ಇದೇ ಅಕ್ಟೋಬರ್  13ರ ಶುಕ್ರವಾರ  ‘ಜಲಪಾತ’ ಚಿತ್ರವು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ.

ಹೆಸರಾಂತ ನಟ ಪ್ರಮೋದ್ ಶೆಟ್ಟಿ ಅವರು ಅತ್ಯಂತ ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಪದವಿಪೂರ್ವ ಖ್ಯಾತಿಯ ರಜನೀಶ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು, ವೈಶಂಪಾಯನ ತೀರದಿಂದ ಗಮನ ಸೆಳೆದ ಮಲೆನಾಡು ಚಲುವೆ ನಾಗಶ್ರೀ ಈ ಚಿತ್ರದ ನಾಯಕಿ.

ಇದನ್ನೂ ಓದಿ: ಶಿವಣ್ಣ, ಪ್ರಕಾಶ್‌ ರಾಜ್‌ ಕ್ಷಮೆಯನ್ನು ಎಂದಿಗೂ ನಾನು ಸ್ವೀಕರಿಸುವುದಿಲ್ಲ : ನಟ ಸಿದ್ಧಾರ್ಥ್‌

ಸಾದ್ವಿನಿ ಕೊಪ್ಪ ಸಂಗೀತವಿರುವ 3 ಹಾಡುಗಳು ಈಗಾಗಲೇ ಜನಪ್ರಿಯವಾಗಿದ್ದು, ಹೆಸರಾಂತ ಗಾಯಕ ವಿಜಯಪ್ರಕಾಶ್ ಚಿತ್ರದ ಥೀಮ್ ಸಾಂಗ್‍ಗೆ ಧ್ವನಿಯಾಗಿದ್ದಾರೆ. ವಿನು ಮನಸು ಹಿನ್ನೆಲೆ ಸಂಗೀತ, ಶಶೀರ ಛಾಯಾಗ್ರಹಣ ಮತ್ತು ಅವಿನಾಶ್ ಸಂಕಲನವನ್ನು ‘ಜಲಪಾತ’ ಹೊಂದಿದೆ.

ಮಲೆನಾಡು ಭಾಷೆ, ಸಂಸ್ಕೃತಿ ಮತ್ತು ಪ್ರಕೃತಿಯನ್ನು ಆಧರಿಸಿದ ವಿಶಿಷ್ಟ ಸಿನಿಮಾ ‘ಜಲಪಾತ’ದಲ್ಲಿ ರವಿಕುಮಾರ್, ನಟರಾಜ್, ವಿಶ್ವನಾಥ್, ರೇಖಾ ಪ್ರೇಮ್ ಕುಮಾರ್ ದತ್ತಾತ್ರಿ, ಚಂದ್ರಶೇಖರ್, ಎಂ.ಆರ್.ಸುರೇಶ್ ಮೊದಲಾದ ಮಲೆನಾಡಿನ ಅಪ್ಪಟ ರಂಗ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ನಟಿ ಕಂಗನಾ ರಣಾವತ್ ಮದುವೆ..! ‘ರಾಣಿ’ಯ ವರಿಸುವ ವರನ್ಯಾರು ಗೊತ್ತಾ?

ಪರಿಸರ ಕಾಳಜಿ ಮತ್ತು ಅರಿವನ್ನು ಮೂಡಿಸುವ ಫ್ಯಾಮಿಲಿ ಡ್ರಾಮಾ ಶೈಲಿ  ಹೊಂದಿರುವ ‘ಜಲಪಾತ’ ಮಲೆನಾಡ ಸಿಗ್ನೀಚರ್ ಅನ್ನು ಹಿರಿತೆರೆಗೆ ತರುವ ಸಾಂಸ್ಕೃತಿಕ ಪ್ರಯತ್ನವಾಗಿದೆ ಎಂದು ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದ್ದಾರೆ. ರಾಜ್ಯದಾದ್ಯಂತ ಬಿಡುಗಡೆ ಆಗಲಿರುವ ಈ ಉದ್ದೇಶಿತ ಸಿನಿಮಾವನ್ನು ವೀಕ್ಷಿಸಿ ಬೆಂಬಲಿಸಿ ಎಂದು ನಿರ್ಮಾಪಕ ರವೀಂದ್ರ ತುಂಬರಮನೆ ವಿನಂತಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News