ಅಕ್ಟೋಬರ್ 8ರಿಂದ ಕನ್ನಡ ಕಿರುತರೆ ವೀಕ್ಷಕರಿಗೆ ಮನರಂಜನೆಯ ರಸದೌತಣ..!

SaReGaMaPa Season20 and BiggBoss Kannada Season 10: ಅಕ್ಟೋಬರ್​ 8ರಿಂದ ಜೀ ಕನ್ನಡ ವಾಹಿನಿಯಲ್ಲಿ "ಸರಿಗಮಪ" 20ನೇ ಸೀಸನ್​ ಮತ್ತು ಕಲರ್ಸ್​​ ಕನ್ನಡದಲ್ಲಿ "ಬಿಗ್​​ಬಾಸ್​​" ​​10ನೇ ಸೀಸನ್ ಆರಂಭವಾಗುತ್ತಿದೆ. 

Written by - Nandish A.Huded | Edited by - Puttaraj K Alur | Last Updated : Oct 6, 2023, 09:34 PM IST
  • ಅ.8ರಿಂದ ಕನ್ನಡ ಕಿರುತರೆ ವೀಕ್ಷಕರಿಗೆ ಮನರಂಜನೆಯ ರಸದೌತಣ..!
  • ಅ.8ರಿಂದ ಜೀ ಕನ್ನಡ ವಾಹಿನಿಯಲ್ಲಿ "ಸರಿಗಮಪ" 20ನೇ ಸೀಸನ್​
  • ಕಲರ್ಸ್​​ ಕನ್ನಡದಲ್ಲಿ "ಬಿಗ್​​ಬಾಸ್​​" ​​10ನೇ ಸೀಸನ್ ಆರಂಭವಾಗುತ್ತಿದೆ
ಅಕ್ಟೋಬರ್ 8ರಿಂದ ಕನ್ನಡ ಕಿರುತರೆ ವೀಕ್ಷಕರಿಗೆ ಮನರಂಜನೆಯ ರಸದೌತಣ..! title=
ಕಿರುತರೆ ವೀಕ್ಷಕರಿಗೆ ಮನರಂಜನೆಯ ರಸದೌತಣ!

ಬೆಂಗಳೂರು: ದೇಶದಲ್ಲಿ ಏಕದಿನ ವಿಶ್ವಕಪ್​​ ಮೇನಿಯಾ ಶುರುವಾಗಿದೆ. ಎಲ್ಲಾ ವಯಸ್ಕರು ವಿಶ್ವಕಪ್​​​​ನ ಗುಂಗಲ್ಲಿ ಮುಳುಗಿದ್ದಾರೆ. ಈ ಮಧ್ಯೆಯೇ ನಮ್ಮ ಕನ್ನಡದ ಪ್ರಸಿದ್ಧ ಮನರಂಜನಾ ಚಾನಲ್​​ಗಳಾದ Zee ಕನ್ನಡ ಮತ್ತು ಕಲರ್ಸ್​​ ಕನ್ನಡದಲ್ಲಿ 2 ಜನಪ್ರಿಯ ಕಾರ್ಯಕ್ರಮಗಳು ಮತ್ತೆ ಪ್ರಾರಂಭವಾಗುತ್ತಿವೆ. ಹೌದು, ಅಕ್ಟೋಬರ್​ 8ರಿಂದ ಜೀ ಕನ್ನಡ ವಾಹಿನಿಯಲ್ಲಿ "ಸರಿಗಮಪ" 20ನೇ ಸೀಸನ್​ ಮತ್ತು ಕಲರ್ಸ್​​ ಕನ್ನಡದಲ್ಲಿ "ಬಿಗ್​​ಬಾಸ್​​" ​​10ನೇ ಸೀಸನ್ ಆರಂಭವಾಗುತ್ತಿದೆ. 

ಈ 2 ವಾಹಿನಿಗಳು ಒಂದೇ ದಿನ ತಮ್ಮ ಆವೃತ್ತಿಗಳನ್ನು ಅದ್ಧೂರಿಯಾಗಿ ಪ್ರಾರಂಭ ಮಾಡುತ್ತಿರುವುದು ವಿಶೇಷವಾಗಿದೆ. ಇದರಿಂದ ಪ್ರೇಕ್ಷಕರಿಗೆ ಹೆಚ್ಚಿನ ಮನರಂಜನೆ ಸಿಗಲಿದೆ. ಕಾರ್ಯಕ್ರಮಗಳು ವಿಭಿನ್ನ ಥೀಮ್​​ಗಳನ್ನು ಹೊಂದಿದ್ದರೂ ಪ್ರೇಕ್ಷಕರನ್ನು ಸೆಳೆಯಲು ಮಾತ್ರ ಹಿಂದೆ ಬೀಳವು. ಈಗಾಗಲೇ ನೀವು ಪ್ರೋಮೋಗಳಲ್ಲಿ ನೋಡಿರುವ ಹಾಗೆ ಈ 2 ಕಾರ್ಯಕ್ರಮಗಳಲ್ಲಿ ಹಲವು ವಿಶೇಷತೆಗಳು ನಿಮಗೆ ಕಾಣಸಿಗಲಿವೆ. ಕಲರ್ಸ್ ಕನ್ನಡದಲ್ಲಿ ಪ್ರಸಾವಾಗುತ್ತಿರುವ ಬಿಗ್‍ಬಾಸ್ ಶೋನಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್​​ಗಳು ಬಿಗ್​ಬಾಸ್​ ​ಸ್ಪರ್ಧಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಶಿವಣ್ಣ, ಪ್ರಕಾಶ್‌ ರಾಜ್‌ ಕ್ಷಮೆಯನ್ನು ಎಂದಿಗೂ ನಾನು ಸ್ವೀಕರಿಸುವುದಿಲ್ಲ : ನಟ ಸಿದ್ಧಾರ್ಥ್‌

ಇನ್ನೂ ಕುತೂಹಲ ಮೂಡಿಸುವ ಅಂಶವೆಂದರೇ, ಹೊಸ ಜಾಗದಲ್ಲಿ ಸಿದ್ಧವಾಗಿರುವ ಬಿಗ್‍ಬಾಸ್ ಹೌಸ್​​ಗೆ "ಚಾರ್ಲಿ 777" ಚಿತ್ರ ಖ್ಯಾತಿಯ ಚಾರ್ಲಿ (ಶ್ವಾನ) ಮನೆಗೆ ಮೊದಲ ಸ್ಪರ್ಧಿಯಾಗಿ ಕಾಲಿಡಲಿದ್ದಾಳೆ. ಚಾರ್ಲಿ ಜೊತೆ ಮತ್ತೆ ಇನ್ನು ಯಾರು ಯಾರು ಬಿಗ್‍ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರೆ ಎಂದು ಶನಿವಾರ ಸಂಜೆ 7:30ರ ನಂತರವಷ್ಟೇ ಗೊತ್ತಾಗಲಿದೆ.

ಅದೇ ರೀತಿ ಕನ್ನಡದ ಹೆಸರಾಂತ ಮನರಂಜನಾ ಕಾರ್ಯಕ್ರಮ ಸರಿಗಮಪ ಸೀಸನ್ 20 ಕೂಡ ಕೇಳುಗರ ಕಿವಿ ತಂಪು ಮಾಡದೇ ಇರದು. ಈ ಆವೃತಿಯ ವಿಶೇಷವೇನೆಂದರೆ ಅನಿವಾಸಿ ಕನ್ನಡಿಗರಿಗೂ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ಅಮೆರಿಕ ಮತ್ತು ಇಂಗ್ಲೆಂಡ್​ನಂತಹ ದೇಶಗಳಲ್ಲಿ ವಾಸವಾಗಿರುವ ಕನ್ನಡಿಗರು ಸೀಸನ್​ 20ರಲ್ಲಿ ಭಾಗವಹಿಸಲಿದ್ದಾರೆ. ಅನಿವಾಸಿ ಕನ್ನಡಿಗರಿಗೆ ಆನ್ಲೈನ್ ಮೂಲಕ ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿದೆ.

ಹಿಂದಿನಂತೆ ಈ ಬಾರಿಯೂ ಕೂಡ ಮೆಗಾ ಆಡಿಷನ್​​​ ನಡೆಯಲಿದೆ. ಇದೇ ಶನಿವಾರದಿಂದ ಮೆಗಾ ಆಡಿಷನ್​ ಆರಂಭವಾಗಲಿದ್ದು, ಆಯ್ದ 30 ಜನರನ್ನು ಮತ್ತಷ್ಟು ಸೋಸಿ, ಅಳೆದು-ತೂಗಿ ಮುಖ್ಯ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಇನ್ನು ಈ ಮೆಗಾ ಆಡಿಷನ್‍​​ನಲ್ಲಿ ಯಾವ ಯಾವ ಸ್ಪರ್ಧಿಗಳು ಎಂಬುವುದು ಶನಿವಾರ ಸಂಜೆ 6ಗಂಟೆ ಬಳಿಕವೇ ಗೊತ್ತಾಗಲಿದ್ದು, ಇದನ್ನು ವಿಶ್ವ ಕನ್ನಡಿಗರ ಸಂಗೀತ ಸಂಭ್ರಮವೆಂದು ಕರೆಯಬಹುದು. ಒಟ್ಟಾರೆ ಶನಿವಾರದಿಂದ ಕನ್ನಡದ ಹೆಸರಾಂತ ವಾಹಿನಿಗಳಲ್ಲಿ ಜನರ ಮನೆ ಮಾತಾಗಿರುವ 2 ಅದ್ಭುತ ರಿಯಾಲಿಟಿ ಶೋಗಳು ತೆರೆಮೇಲೆ ಮತ್ತೆ ಬರುತ್ತಿವೆ. ಕನ್ನಡದ ಸಂಗೀತ ಪ್ರಿಯರು ಹಾಗೂ ಬಿಗ್‍ಬಾಸ್ ಪ್ರೇಮಿಗಳಿಗೆ ಮನರಂಜನಾ ಊಟ ಬಡಿಸಲು ಎರಡು ಜನಪ್ರಿಯ ಕನ್ನಡ ವಾಹಿನಿಗಳು ಸಜ್ಜಾಗಿವೆ.

ಇದನ್ನೂ ಓದಿ: ಬಾಲಿವುಡ್ ನಟಿ ಕಂಗನಾ ರಣಾವತ್ ಮದುವೆ..! ‘ರಾಣಿ’ಯ ವರಿಸುವ ವರನ್ಯಾರು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News