ಈ ಸಣ್ಣ ವಯಸ್ಸಿನಲ್ಲಿಯೇ ಆರಾಧ್ಯ ....! ಐಶ್ವರ್ಯ ಮಗಳ ಬಗ್ಗೆ ನವ್ಯಾ ನಂದಾ ಅಷ್ಟಕ್ಕೂ ಹೇಳಿದ್ದೇನು? ವೈರಲ್ ಆಗುತ್ತಿದೆ ಈ ಕಾಮೆಂಟ್

Navya Naveli on Aaradhya Bachchan:ತನ್ನ ಇತ್ತೀಚಿನ ಸಂದರ್ಶನದಲ್ಲಿ,ನವ್ಯಾ ಅವರು ಐಶ್ವರ್ಯಾ ರೈ ಅವರ ಮಗಳು ಆರಾಧ್ಯ ಬಚ್ಚನ್ ಬಗ್ಗೆ  ಕಾಮೆಂಟ್ ಮಾಡಿದ್ದಾರೆ. ಇದು ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿದೆ.

Written by - Ranjitha R K | Last Updated : Apr 18, 2024, 11:06 AM IST
  • ನವ್ಯಾ ನವೇಲಿ ನಂದಾ ಬಾಲಿವುಡ್‌ನಲ್ಲಿ ತನ್ನ ವೃತ್ತಿಜೀವನ ಆರಂಭಿಸಿಲ್ಲ
  • ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದ್ದಾರೆ.
  • ನವ್ಯಾ ನವೇಲಿ ನಂದಾ ತನ್ನದೇ ಆದ ಪಾಡ್‌ಕ್ಯಾಸ್ಟ್ ನಡೆಸುತ್ತಾರೆ.
ಈ ಸಣ್ಣ ವಯಸ್ಸಿನಲ್ಲಿಯೇ ಆರಾಧ್ಯ ....! ಐಶ್ವರ್ಯ ಮಗಳ ಬಗ್ಗೆ ನವ್ಯಾ ನಂದಾ ಅಷ್ಟಕ್ಕೂ ಹೇಳಿದ್ದೇನು? ವೈರಲ್ ಆಗುತ್ತಿದೆ ಈ ಕಾಮೆಂಟ್  title=

Navya Naveli on Aaradhya Bachchan : ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಬಾಲಿವುಡ್‌ನಲ್ಲಿ ತನ್ನ ವೃತ್ತಿಜೀವನ ಆರಂಭಿಸಿಲ್ಲ.ಇದರ ಹೊರತಾಗಿಯೂ, ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದ್ದಾರೆ. ನವ್ಯಾ ನವೇಲಿ ನಂದಾ ತನ್ನದೇ ಆದ ಪಾಡ್‌ಕ್ಯಾಸ್ಟ್ ನಡೆಸುತ್ತಾರೆ. ಅಲ್ಲಿ ಅವರು ತಮ್ಮ ತಾಯಿ ಶ್ವೇತಾ ಮತ್ತು ಅಜ್ಜಿ ಜಯಾ ಬಚ್ಚನ್ ಅವರೊಂದಿಗೆ ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಾರೆ.ಆದರೆ, ಈ ಬಾರಿ ನವ್ಯಾ ಸುದ್ದಿಯಲ್ಲಿದ್ದಾರೆ. ಈಗ ನವ್ಯಾ ಬಗ್ಗೆ ಚರ್ಚೆ ನಡೆಯುತ್ತಿರುವುದು ಪಾಡ್‌ಕಾಸ್ಟ್‌ಗಾಗಿ ಅಲ್ಲ, ಅವರ ಇತ್ತೀಚಿನ ಸಂದರ್ಶನದ ಕಾರಣದಿಂದ.ತನ್ನ ಇತ್ತೀಚಿನ ಸಂದರ್ಶನದಲ್ಲಿ,ನವ್ಯಾ ಅವರು ಐಶ್ವರ್ಯಾ ರೈ ಅವರ ಮಗಳು ಆರಾಧ್ಯ ಬಚ್ಚನ್ ಬಗ್ಗೆ  ಕಾಮೆಂಟ್ ಮಾಡಿದ್ದಾರೆ. ಇದು ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿದೆ. 

ನವ್ಯಾ ನವೇಲಿ ನಂದಾ ಹೇಳಿದ್ದೇನು?: 
ನವ್ಯಾ ನವೇಲಿ ನಂದಾ ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು.ಈ ಸಮಯದಲ್ಲಿ ಆರಾಧ್ಯಗೆ ಯಾವ ಸಲಹೆ ನೀಡಲು ಬಯಸುತ್ತೀರಿ ಎನ್ನುವ ಪ್ರಶ್ನೆಯನ್ನು ನವ್ಯಾಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ನವ್ಯಾ, ಆರಾಧ್ಯಗೆ  ಯಾವುದೇ ಸಲಹೆಯ ಅಗತ್ಯವಿಲ್ಲ. ಆರಾಧ್ಯ ಈಗಾಗಲೇ ತುಂಬಾ ಬುದ್ಧಿವಂತೆ ಎಂದಿದ್ದಾರೆ. ಈ ವಯಸ್ಸಿನಲ್ಲಿಯೇ ನನಗಿಂತ ಹೆಚ್ಚು ಬುದ್ದಿವಂತಳು. ಅವಳ ವಯಸ್ಸಿನಲ್ಲಿ ನನಗೆ ಅಷ್ಟೊಂದು ಬುದ್ದಿ ಇರಲಿಲ್ಲ ಎಂದು ಹೇಳಿದ್ದಾರೆ. ಇಂದಿನ ಮಕ್ಕಳಿಗೆ ಎಲ್ಲಾ ವಿಚಾರದ ಬಗ್ಗೆಯೂ ತಿಳುವಳಿಕೆ ಇರುತ್ತದೆ. ತಿಳುವಳಿಕೆಯ ವಿಚಾರದಲ್ಲಿ ನಮಗಿಂತ ಹೆಚ್ಚು ಮುಂದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Actress Sirija: ಅಷ್ಟು ವಯಸ್ಸಾದರೂ ಬಿಗ್‌ಬಾಸ್‌ ಮನೆ ಅಕ್ಕ ಸಿರಿ ಮದುವೆಯಾಗದಿರಲು ಕಾರಣವೇನು ಗೊತ್ತಾ? ಯಾರಿಗಾಗಿ ಕಾಯುತ್ತಿದ್ದಾರೆ ಈ ಚೆಲುವೆ?!

ಆರಾಧ್ಯ ಬಚ್ಚನ್‌ ಬಗ್ಗೆ ಪ್ರಶಂಸೆಯ ಮಾತು : 
ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಆರಾಧ್ಯ ನಮಗಿಂತ ಹೆಚ್ಚು ಜಾಗೃತೆ, ಬುದ್ಧಿವಂತೆ, ತಿಳಿವಳಿಕೆ ಹೊಂದಿದ್ದಾರೆ.ಮುಂಬರುವ ಸಮಯದಲ್ಲಿ, ಅತ್ಯಂತ ಬುದ್ಧಿವಂತ ಮಹಿಳೆಯರ ಪೀಳಿಗೆಯು ಬರಲಿದೆ. ಜಗತ್ತಿನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲು ಅವರು ಸಿದ್ಧರಾಗುತ್ತಿದ್ದಾರೆ. ನಾನು ಆರಾಧ್ಯಳಲ್ಲೂ ಅದನ್ನೇ ನೋಡುತ್ತೇನೆ. ನಾನು ಅವಳಿಗೆ ಏನು ಸಲಹೆ, ಸ್ಫೂರ್ತಿ ನೀಡಲಿ. ಬದಲಿಗೆ ನಾನು ಅವಳಿಂದ ಸ್ಫೂರ್ತಿ ಪಡೆಯುತ್ತೇನೆ ಎಂದು ನವ್ಯಾ ಹೇಳಿದ್ದಾರೆ.ಆರಾಧ್ಯ ತನ್ನ ಜೀವನದಲ್ಲಿ ಏನಾದರೂ ದೊಡ್ಡ ಸಾಧನೆ ಮಾಡುತ್ತಾರೆ ನಾನು ಅದನ್ನು ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ.  

ಇದನ್ನೂ ಓದಿ : Deepika Padukone: ಗರ್ಭಿಣಿಯಾಗಿದ್ರೂ ಫೈರಿಂಗ್ ಫೈಟ್ ಸೀನ್ ಮಾಡಿದ್ರು ದಿಪ್ಪಿ: ಖಡಕ್‌ ಪೋಲೀಸ್‌ ಆಫೀಸರ್‌ ಲುಕ್‌ನಲ್ಲಿ ಬಾಲಿವುಡ್‌ ನಟಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News