Deepika Padukone: ಗರ್ಭಿಣಿಯಾಗಿದ್ರೂ ಫೈರಿಂಗ್ ಫೈಟ್ ಸೀನ್ ಮಾಡಿದ್ರು ದಿಪ್ಪಿ: ಖಡಕ್‌ ಪೋಲೀಸ್‌ ಆಫೀಸರ್‌ ಲುಕ್‌ನಲ್ಲಿ ಬಾಲಿವುಡ್‌ ನಟಿ!

Deepika Padukone New Look: ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೊಣೆ ನಾಲ್ಕು ತಿಂಗಳ  ಗರ್ಭಿಣಿಯಾಗಿದ್ದರೂ ಕೂಡ ಫೈರಿಂಗ್ ಫೈಟ್ ಸೀನ್‌ನಲ್ಲಿ  ಖಡಕ್‌ ಪೋಲೀಸ್‌ ಆಫೀಸರ್‌ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಶೂಟಿಂಗ್‌ನ ಈ ಫೋಟೋಗಳು ಲೀಕ್‌ ಆಗಿ ವೈರಲ್‌ ಆಗಿವೆ.  

Written by - Zee Kannada News Desk | Last Updated : Apr 18, 2024, 10:20 AM IST
  • ನಟಿ ದೀಪಿಕಾ ಪಡುಕೊಣೆ ತಾವು ಒಪ್ಪಿಕೊಂಡ ಸಿನಿಮಾವನ್ನು ಕಂಪ್ಲೀಟ್ ಮಾಡುತ್ತಿದ್ದು, ಸದ್ಯ ಈ ನಟಿ ‘ಸಿಂಗಂ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
  • ನಟಿ ದೀಪಿಕಾ ಸಾಹಸ ದೃಶ್ಯವೊಂದರ ಶೂಟಿಂಗ್‌ಗಾಗಿ ‘ಸಿಂಗಂ’ ಸೆಟ್ಗೆ ಬಂದಿದ್ದು, ಅಲ್ಲಿಂದ ಇದರ ಟಿಎಸ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
  • ಸದ್ಯ ನಟಿ ದೀಪಿಕಾ ನಾಲ್ಕು ತಿಂಗಳ ಬಸರಿಯಾಗಿದ್ದು, ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಘಿರುವುದನ್ನು ನೋಡಿ ಫ್ಯಾನ್ಸ್‌ ಈಕೆಯ ನಿಷ್ಠೆ ಮತ್ತು ಧೈರ್ಯವನ್ನು ಕೊಂಡಾಡುತ್ತಿದ್ದಾರೆ.
Deepika Padukone: ಗರ್ಭಿಣಿಯಾಗಿದ್ರೂ ಫೈರಿಂಗ್ ಫೈಟ್ ಸೀನ್ ಮಾಡಿದ್ರು ದಿಪ್ಪಿ: ಖಡಕ್‌ ಪೋಲೀಸ್‌ ಆಫೀಸರ್‌ ಲುಕ್‌ನಲ್ಲಿ ಬಾಲಿವುಡ್‌ ನಟಿ! title=

Deepika Padukone Fire Fighting Scene: ಬಾಲಿವುಡ್‌ ನಟಿ ದೀಪಿಕಾ ಪಡುಕೊಣೆ ಗರ್ಭಿಣಿಯಾಗಿದ್ದರೂ ಫೈರಿಂಗ್ ಫೈಟ್ ಸೀನ್‌ನಲ್ಲಿ ಖಡಕ್‌ ಪೋಲೀಸ್‌ ಆಫೀಸರ್‌ ಪಾತ್ರವನ್ನು ನಿರ್ವಹಿಸಿದ್ದಾರೆ. ಬಿ-ಟೌನ್‌ ಕಪಲ್‌ ರಣವೀರ್-ದೀಪಿಕಾ ತಮ್ಮ ಮಗುವಿನ ಆಗಮನಕ್ಕಾಗಿ ಕಾಯ್ತಾಯಿದ್ದಾರೆ. ಇಂತಹ ಸಂದರ್ಭದಲ್ಲೇ ಈ ನಟಿ ಪ್ರಗ್ನೆಂಟ್‌ ಆಗಿದ್ದರೂ ಕೂಡ ತನ್ನನ್ನು ತಾನು ನೋಡಿಕೊಳ್ಳುವುದರ ಜೊತೆಗೆ,ಕೆಲಸದ ಕಡೆಗೆ ಕೂಡ ಗಮನ ಹರಿಸುತ್ತಿದ್ದಾರೆ.

ಹೌದು.. ನಟಿ ದೀಪಿಕಾ ಪಡುಕೊಣೆ ತಾವು ಒಪ್ಪಿಕೊಂಡ ಸಿನಿಮಾವನ್ನು ಕಂಪ್ಲೀಟ್ ಮಾಡುತ್ತಿದ್ದು, ಸದ್ಯ ಈ ನಟಿ ‘ಸಿಂಗಂ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ಸಿನಿಮಾ ಸೆಟ್‌ನಲ್ಲಿರುವ ಫೋಟೋಗಳು ಲೀಕ್‌ ಆಗಿವೆ. ದೀಪಿಕಾ ಪಡುಕೊಣೆ ನಿರ್ದೇಶಕ ರೋಹಿತ್ ಶೆಟ್ಟಿ ‘ಸಿಂಗಂ ಎಗೇನ್’ ಚಿತ್ರದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಹಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಮೈಮೇಲಿನ ʻರಣಬೀರ್‌ ಕಪೂರ್‌ʼ ಹೆಸರಿನ ಟ್ಯಾಟೂ ನೋಡಿದ್ದೀರಾ? ಆಲಿಯಾಗೂ ಗೊತ್ತಾ ಇವರ ಸೀಕ್ರೇಟ್‌ ಸಂಬಂಧ!

ದೀಪಿಕಾ ಪಡುಕೊಣೆ ಸಿಂಗಂ ಸಿನಿಮಾದಲ್ಲಿ ‘ಶಕ್ತಿ ಶೆಟ್ಟಿ’ ಎಂಬ ರೋಲ್‌ಗೆ ಬಣ್ಣ ಹಚ್ಚುತ್ತಿದ್ದು, ಇದೀಗ ಈ ನಟಿ ಖಡಕ್ ಪೊಲೀಸ್ ಆಫೀಸರ್‌ ಲುಕ್‌ನಲ್ಲಿ ಕಣ್ಣಿಗೆ ಬಿದ್ದಿದ್ದಾರೆ. ನಟಿ ದೀಪಿಕಾ ಸಾಹಸ ದೃಶ್ಯವೊಂದರ ಶೂಟಿಂಗ್‌ಗಾಗಿ ‘ಸಿಂಗಂ’ ಸೆಟ್ಗೆ ಬಂದಿದ್ದು, ಅಲ್ಲಿಂದ ಇದರ ಟಿಎಸ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ನಟಿ ಪೊಲೀಸ್ ಡ್ರೆಸ್‌ನಲ್ಲಿ ಬಹಳ ಸ್ಟೈಲಿಶ್ ಆಗಿ ಕಾಣುತ್ತಿದ್ದರು. ಲೀಕ್‌ ಆಗಿರುವ ಫೋಟೋಗಳಲ್ಲಿ ದೀಪಿಕಾಳ  ಸಣ್ಣ ಬೇಬಿ ಬಂಪ್‌ ಕೂಡ ನೋಡಬಹುದು. ದೀಪಿಕಾ ಗರ್ಭಿಣಿಯಾಗಿದ್ದರು ಆಕ್ಷನ್ ಮೂವಿ ಶೂಟಿಂಗ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಸದ್ಯ ನಟಿ ದೀಪಿಕಾ ನಾಲ್ಕು ತಿಂಗಳ ಬಸರಿಯಾಗಿದ್ದು, ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಘಿರುವುದನ್ನು ನೋಡಿ ಫ್ಯಾನ್ಸ್‌ ಈಕೆಯ ನಿಷ್ಠೆ ಮತ್ತು ಧೈರ್ಯವನ್ನು ಕೊಂಡಾಡುತ್ತಿದ್ದಾರೆ. ಇನ್ನೂ ಈ ಬಿಗ್‌ಬಜೆಟ್‌ ಸಿನಿಮಾದಲ್ಲಿ ನಟಿ ದೀಪಿಕಾ ಜೊತೆಗೆ ಅಜಯ್ ದೇವಗನ್, ರಣವೀರ್ ಸಿಂಗ್, ಕರೀನಾ ಕಪೂರ್ ಖಾನ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್ , ಅಕ್ಷಯ್ ಕುಮಾರ್ ಅಂತಹ ಬಹುದೊಡ್ಡ ತಾರಾಂಗಣವೇ ಇದೆ. ನಟಿ ದೀಪಿಕಾ ಇದೀಗ 38 ವರ್ಷವಾಗಿದೆ. ಈ ನಟಿ 2018 ರಲ್ಲಿ ಸ್ಟಾರ್ ಹೀರೋ ರಣಬೀರ್ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, 5 ವರ್ಷಗಳ ಬಳಿಕ ತಾಯಿ ಆಗ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News