'ಜೈಲರ್' ಪೋಷಕ ನಟನಿಗೆ ಗಿಫ್ಟ್ ಕೊಟ್ಟ ರಜನಿ..! ಆ ನಟ ಯಾರು ಗೊತ್ತಾ?

Rajanikanth Gifted to co-actor : ನಟ ರಜನಿಕಾಂತ್ ಅವರು ಜೈಲರ್‌ನಲ್ಲಿ ಬಳಸಿದ ಕನ್ನಡಕವನ್ನು ಸಹನಟನಿಗೆ ಉಡುಗೊರೆಯಾಗಿ ನೀಡಿದರು. ಆ ನಟ ಯಾರು ಅನ್ನೋದನ್ನು ತಿಳಿಯಲು ಮುಂದೆ ಓದಿ...  

Written by - Savita M B | Last Updated : Aug 24, 2023, 01:07 PM IST
  • ಜೈಲರ್ ಚಿತ್ರದಲ್ಲಿ ಜಾಫರ್ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ.
  • ರಜನಿಕಾಂತ್ ಅವರಿಗೆ ಉಡುಗೊರೆ ನೀಡಿದ್ದಾರೆ.
  • ಉಡುಗೊರೆ ಏನು ಗೊತ್ತಾ?
'ಜೈಲರ್' ಪೋಷಕ ನಟನಿಗೆ ಗಿಫ್ಟ್ ಕೊಟ್ಟ ರಜನಿ..! ಆ ನಟ ಯಾರು ಗೊತ್ತಾ? title=

 Jailer : ಇದೇ ತಿಂಗಳ 10ರಂದು ತೆರೆಕಂಡ ಹಿಟ್ ಸಿನಿಮಾ ಜೈಲರ್. ಈ ಚಿತ್ರದಲ್ಲಿ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ರಮ್ಯಾ ಕೃಷ್ಣನ್, ತಮನ್ನಾ, ಜಾಕಿ ಶ್ರಾಫ್, ಮೋಹನ್ ಲಾಲ್, ಶಿವರಾಜ್ ಕುಮಾರ್ ಸೇರಿದಂತೆ ಹಲವರು ಅವರೊಂದಿಗೆ ನಟಿಸಿದ್ದಾರೆ. ಇದರಲ್ಲಿ ಜಾಫರ್ ಪ್ರಮುಖ ಪಾತ್ರ ವಹಿಸಿದ್ದರು. 

ಜಾಫರ್ ಸಾದಿಕ್ ಅವರು ನೆಟ್‌ಫ್ಲಿಕ್ಸ್ ಸೈಟ್‌ನಲ್ಲಿ ಬಿಡುಗಡೆಯಾದ 'ಬಾವಕಥಗಳು' ಚಿತ್ರದ 'ಲವ್ ಪನ್ನಾ ಉದರನುಮ್' ಚಿತ್ರದಲ್ಲಿ ನಟಿಸುವ ಮೂಲಕ ತಮಿಳು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. 

ಸದ್ಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ತೆರೆಕಂಡ ಜೈಲರ್ ಸಿನಿಮಾದಲ್ಲಿ ರಜನಿ ಜೊತೆ ಕಥೆಯುದ್ದಕ್ಕೂ ಸಾಗುವ ಪಾತ್ರಗಳಲ್ಲಿ ಒಂದಾಗಿ ನಟಿಸಿದ್ದಾರೆ. ಇದೀಗ ರಜನಿ ಅವರಿಗೆ ತಮ್ಮ ಕೂಲಿಂಗ್ ಗ್ಲಾಸ್ ಉಡುಗೊರೆ ನೀಡಿದ್ದಾರೆ. 

ಇದನ್ನೂ ಓದಿ-Amala Poul : ಸಖತ್‌ ಪೋಟೋಶೂಟ್‌ನಲ್ಲಿ ಮಿಂಚಿದ ಹೆಬ್ಬುಲಿ ನಟಿ..ಪೋಟೋಸ್‌ ನೋಡಿ

ಜಾಫರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಜನಿಕಾಂತ್ ತಮಗೆ ನೀಡಿರುವ ಸ್ಪೆಷಲ್ ಗಿಫ್ಟ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. 

 
 
 
 
 

4ನೇ ತಾರೀಖಿನಂದು ರಜನಿಕಾಂತ್ ಈ ಕೂಲಿಂಗ್ ಗ್ಲಾಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. "ನಾನು ಕೇಳಿದೆ.,, ಅವರು ಕೊಟ್ಟರು.." ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಜಾಫರ್ ಗೆ 'ಲಕ್ಕಿ ಮ್ಯಾನ್ ನೀವು..' ಎಂದು ಅಭಿನಂದಿಸುತ್ತಿದ್ದಾರೆ. 

ಜೈಲರ್ ಚಿತ್ರದಲ್ಲಿ ನಟಿಸಲು ಮತ್ತೊಂದು ಸಿನಿಮಾ ಅವಕಾಶವನ್ನು ತಿರಸ್ಕರಿಸಿದ ನಟ..
ಭಾವಕಥೆಲ್ ನಂತರ ದಕ್ಷಿಣ ಭಾರತದ ಹಲವು ನಿರ್ದೇಶಕರು ಜಾಫರ್ ಅವರನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ವಿಜಯ್ ನಂಬಿಯಾರ್ ಅವರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು ಆದರೆ, ನಟ ರಜನಿಕಾಂತ್ ಜೊತೆ ಜೈಲರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಾಗ ಆ ಸಿನಿಮಾದಲ್ಲಿ ನಟಿಸುವುದನ್ನು ಬಿಟ್ಟುಬಿಟ್ಟರು. ಸದ್ಯ ಜೈಲರ್ ಚಿತ್ರದಲ್ಲಿನ ಅವರ ಪಾತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. 

​ಇದನ್ನೂ ಓದಿ-ಯಶ್‌19 ಕಥೆ ಅಲ್ಲ...ರಾಕಿ ಬಾಯ್‌ ರಾವಣನ ವೇಷದಲ್ಲಿ ಮಿಂಚಿದ್ದು ಇದೇ ಸಿನಿಮಾಗಾಗಿ!

ಜೈಲರ್ ಸಿನಿಮಾ ತಾರಾಬಳಗ
ಜೈಲರ್ ಭಾರತೀಯ ಚಲನಚಿತ್ರೋದ್ಯಮದ ಅನೇಕ ಪ್ರಮುಖ ನಟ ಮತ್ತು ನಟಿಯರನ್ನು ಒಳಗೊಂಡಿತ್ತು. ಆದರೆ ಅವರೆಲ್ಲರೂ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ ನಟ ಜಾಕಿ ಶ್ರಾಫ್, ಮಲಯಾಳಂ ನಟ ಮೋಹನ್ ಲಾಲ್, ಕನ್ನಡ ನಟ ಶಿವರಾಜ್ ಕುಮಾರ್, ತಮನ್ನಾ ಮುಂತಾದವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಲಯಾಳಂ ನಟ ವಿನಾಯಕ್ ಚಿತ್ರದ ಖಳನಾಯಕನಾಗಿ ನಟಿಸಿದ್ದಾರೆ. 

ಜೈಲರ್ ಪಾರ್ಟ್‌ 2 ಬರಲಿದೆಯಾ..?
ಜೈಲರ್ ರಿಲೀಸ್ ಸುದ್ದಿಯಲ್ಲಿ ಚಿತ್ರದ ಎರಡನೇ ಭಾಗವಿದೆ ಎಂಬ ಸುದ್ದಿ ಹಬ್ಬಿತ್ತು. ಇದರಲ್ಲಿ ನಟ ವಿಜಯ್ ನಟಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ಈ ಮಾಹಿತಿಯನ್ನು ಚಿತ್ರತಂಡ ಖಚಿತಪಡಿಸಿಲ್ಲ. ರಜನಿಕಾಂತ್ ತಮ್ಮ 170ನೇ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಮುಂದಿನ ತಿಂಗಳು ಇದರ ಶೂಟಿಂಗ್ ಶುರುವಾಗಲಿದೆ. ಇದನ್ನು ಡಿಜೆ ಜ್ಞಾನವೇಲ್ ನಿರ್ದೇಶಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

  

Trending News