ರಜನಿಕಾಂತ್‌-ವಿಷ್ಣುವರ್ಧನ್‌ ಸ್ನೇಹದ ಸವಿನೆನಪು-ವಿಡಿಯೋ ವೈರಲ್‌

Rajinikanth-Vishnuvardhan : ಸೂಪರ್ ಸ್ಟಾರ್‌ ರಜನಿಕಾಂತ್‌ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್‌ ಅವರು ಇಬ್ಬರು ಆತ್ಮೀಯ ಗೆಳೆಯರು. ಇದು ಎಲ್ಲರಿಗೂ ತಿಳಿದಿರುವ ವಿಷಯ. ಖ್ಯಾತ ನಟರಿಬ್ಬರೂ 1977ರಲ್ಲಿ ʼಸಹೋದರರ ಸವಾಲ್‌ʼ ಚಿತ್ರದಲ್ಲಿ ನಟಿಸಿದ್ದರು.

Written by - Zee Kannada News Desk | Last Updated : May 12, 2023, 10:51 AM IST
  • ವಿಷ್ಣುವರ್ಧನ್‌ ಅವರು ಸಾಕಷ್ಟು ಸ್ಟಾರ್‌ ನಟರ ಜೊತೆ ಆತ್ಮೀಯವಾಗಿದ್ದವರು.
  • ಅದರಲ್ಲೂ ಅಂಬಿ, ರಜನಿಕಾಂತ್‌ ಜೊತೆ ಸ್ವಲ್ಪ ಹೆಚ್ಚೇ ಆತ್ಮೀಯವಾಗಿದ್ದರು.
  • ವಿಷ್ಣುವರ್ಧನ್‌ ಹಾಗೂ ರಜನಿಕಾಂತ್‌ ಅವರು ಒಟ್ಟಿಗೆ ಸ್ಮೋಕ್‌ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.
ರಜನಿಕಾಂತ್‌-ವಿಷ್ಣುವರ್ಧನ್‌ ಸ್ನೇಹದ ಸವಿನೆನಪು-ವಿಡಿಯೋ ವೈರಲ್‌  title=

Viral Video : ವಿಷ್ಣುವರ್ಧನ್‌ ಸ್ನೇಹ ಜೀವಿ, ಅವರು ಸಾಕಷ್ಟು ಸ್ಟಾರ್‌ ನಟರ ಜೊತೆ ಆತ್ಮೀಯವಾಗಿದ್ದವರು. ಅದರಲ್ಲೂ ಅಂಬಿ, ರಜನಿಕಾಂತ್‌ ಜೊತೆ ಸ್ವಲ್ಪ ಹೆಚ್ಚೇ ಆತ್ಮೀಯವಾಗಿದ್ದರು. ಇವರಿಬ್ಬರು ಒಟ್ಟಿಗೆ ಚಿತ್ರರಂಗಕ್ಕೆ ಬಂದವರು. ಹೀಗಾಗಿ ಅವರಿಬ್ಬರ ನಡುವೆ ಉತ್ತಮ ಒಡನಾಟ ಇತ್ತು. ಆದರೆ ʼಕಥಾಸಂಗಮʼ ನಂತರ ರಜನಿಕಾಂತ್‌ ತಮಿಳು ಚಿತ್ರರಂಗದಲ್ಲಿ ಹೆಚು ಬ್ಯುಸಿಯಾಗಿದ್ದರು. 

ಆ ಕಾಲಕ್ಕೆ ಕನ್ನಡ ಚಿತ್ರರಂಗ ಇನ್ನು ಮದ್ರಾಸ್‌ನಲ್ಲಿ ಇದ್ದಿದ್ದರಿಂದ ಒಟ್ಟೊಟ್ಟಿಗೆ ಎಲ್ಲಾ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿತ್ತು. ವಿಷ್ಣುವರ್ಧನ್‌ ಅವರೂ ಮದ್ರಾಸ್‌ನಲ್ಲಿಯೇ ಇರುತ್ತಿದ್ದರು. ಇದರಿಂದಾಗಿ ಕನ್ನಡಿಗರ ನಡುವಿನ ಬಾಂಧವ್ಯ ಉತ್ತಮ ರೀತಿಯದ್ದಾಗಿತ್ತು. ರಜನಿಕಾಂತ್‌ ಅವರು ಸ್ಮೋಕ್‌ ಮಾಡುವುದು ಹೆಚ್ಚು. ಇವರು ತಮ್ಮ ಸಿಗರೇಟ್‌ ಸೇದುವ ಸ್ಟೈಲ್‌ನಿಂದಲೇ ಹೆಚ್ಚು ಜನಪ್ರಿರಾದವರು. ಇದರಿಂದಲೇ ಅವರಿಗೆ ಹೆಚ್ಚು ಸಿನಿಮಾಗಳ ಅವಕಾಶಗಳು ದೊರೆತವು. 

ಇದನ್ನೂ ಓದಿ-ಸಿನಿಮಾ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ʼದಿ ಕೇರಳ ಸ್ಟೋರಿʼ ಚಿತ್ರತಂಡ

ಇದೀಗ ವಿಷ್ಣುವರ್ಧನ್‌ ಹಾಗೂ ರಜನಿಕಾಂತ್‌ ಅವರು ಒಟ್ಟಿಗೆ ಸ್ಮೋಕ್‌ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು, ಸಾಕಷ್ಟು ವೀವ್ಸ್‌ ಜೊತೆಗೆ ಕಾಮೆಂಟ್ ಗಳ ಸುರಿಮಳೆಯನ್ನೇ ಪಡೆಯುತ್ತಿದೆ. 

ಶೇರ್‌ ಮಾಡಿರುವ ವಿಡಿಯೋದಲ್ಲಿ ಅದು ಯಾವದೋ ಸಿನಿಮಾ ದೃಶ್ಯದಂತೆ ಕಾಣುತ್ತಿಲ್ಲ. ಖಾಸಗಿಯಾಗಿ ಇಬ್ಬರು ಸೇರಿರುವ ಸಮಯದಲ್ಲಿ ಸಿಗರೇಟ್‌ ಹಚ್ಚಿ ರಜನಿಕಾಂತ್‌ ತನ್ನ ಸ್ನೇಹಿತ ವಿಷ್ಣು ಅವರಿಗೆ ಕೊಡುತ್ತಿದ್ದಾರೆ ಎನ್ನುವಂತಿದೆ. ವಿಷ್ಣುದಾದಾ ಕೂಡ ಸಿಗರೇಟ್‌ನ್ನು ಸೇದಿ ನಕ್ಕಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳಂತೂ ವಿಡಿಯೋವನ್ನು ಎಷ್ಟು ಬಾರಿ ನೋಡಿದರು ಸಾಕಾಗುತ್ತಿಲ್ಲ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಇಬ್ಬರು ಸ್ಟಾರ್‌ ನಟರ ಸ್ಟೈಲ್‌ ನೋಡಿ ಅಭಿಮಾನಿಗಳು ಮನಸೋತಿದ್ದಾರೆ. 

ಇದನ್ನೂ ಓದಿ-Rakul Preet Singh : ಕಪ್ಪು ವರ್ಣದ ಬಟ್ಟೆಯಲ್ಲಿ ನಾಭಿ ದರ್ಶನ ಮಾಡಿಸಿದ ರಾಕುಲ್‌..! ಫೋಟೋಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News