ಬಾಲಿವುಡ್‌ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ SRK...! 'ಜವಾನ್' ಚಿತ್ರದಲ್ಲಿ ಶಿವಣ್ಣ?

ಒಂದ್ಕಡೆ ಶಾರುಕ್ ಖಾನ್ ನಟನೆ 'ಪಠಾಣ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಮತ್ತೊಂದ್ಕಡೆ ಕಿಂಗ್ ಖಾನ್ ಮುಂದಿನ ಸಿನಿಮಾ 'ಜವಾನ್' ಕುರಿತು ದಿನಕ್ಕೊಂದು ಗುಸುಗುಸು ಕೇಳಿಬರ್ತಿದೆ. ಅಟ್ಲಿ ನಿರ್ದೇಶನದ ಈ ಸಿನಿಮಾ ಶೂಟಿಂಗ್ ಭರದಿಂದ ಸಾಗ್ತಿದೆ. ಇತ್ತೀಚೆಗೆ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸ್ತಾರೆ ಎನ್ನಲಾಗಿತ್ತು. ಈಗ ಶಿವಣ್ಣನ ಹೆಸರು ಕೇಳಿಬರ್ತಿದೆ.

Written by - Zee Kannada News Desk | Last Updated : Mar 6, 2023, 02:03 PM IST
  • 'ಜವಾನ್' ಚಿತ್ರದಲ್ಲಿ ದಕ್ಷಿಣ ಭಾರತದ ಸ್ಟಾರ್‌ ಕಲಾವಿದರನ್ನು ಸೇರಿಸುವ ಪ್ರಯತ್ನ ನಡೀತಿದೆ.
  • ಶಿವಣ್ಣ ಈಗಾಗಲೇ ಪರಭಾಷಾ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ.
  • 'ಪಠಾಣ್' ಬ್ಲಾಕ್‌ಬಸ್ಟರ್ ಬೆನ್ನಲ್ಲೇ 'ಜವಾನ್' ಸಿನಿಮಾ ಮೇಲಿನ ನಿರೀಕ್ಷೆ ದುಪಟ್ಟಾಗಿದೆ.
ಬಾಲಿವುಡ್‌ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ SRK...! 'ಜವಾನ್' ಚಿತ್ರದಲ್ಲಿ ಶಿವಣ್ಣ?  title=

Jawan : 'ಜವಾನ್' ಚಿತ್ರದಲ್ಲಿ ದಕ್ಷಿಣ ಭಾರತದ ಸ್ಟಾರ್‌ ಕಲಾವಿದರನ್ನು ಸೇರಿಸುವ ಪ್ರಯತ್ನ ನಡೀತಿದೆ. ತಮಿಳಿನಿಂದ ದಳಪತಿ ವಿಜಯ್, ತೆಲುಗಿನಿಂದ ಅಲ್ಲು ಅರ್ಜುನ್ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡ್ತಾರೆ ಎನ್ನಲಾಗ್ತಿದೆ. ಅಲ್ಲು ಅರ್ಜುನ್ ನಟಿಸೋಕೆ ನಿರಾಕರಿಸಿದ್ದಾರೆ ಎನ್ನಲಾಗ್ತಿದ್ದು ಇದೀಗ ರಾಮ್‌ಚರಣ್ ಹೆಸರು ಕೇಳಿ ಬರ್ತಿದೆ. ಇನ್ನು ಕನ್ನಡದಿಂದ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ನ ಅಪ್ರೋಚ್ ಮಾಡಿದ್ದಾರೆ ಎನ್ನಲಾಗ್ತಿದೆ. ಶಿವಣ್ಣ ಈಗಾಗಲೇ ಪರಭಾಷಾ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. 

ಶಾರುಕ್ ಖಾನ್ ನಟನೆಯ 'ಜವಾನ್' ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಫಸ್ಟ್ ಲುಕ್ ಟೀಸರ್‌ನಿಂದಲೇ ಸಿನಿಮಾ ಹೈಪ್ ಕ್ರಿಯೇಟ್ ಮಾಡಿತ್ತು. ಹಿಂದಿ ಮಾತ್ರವಲ್ಲದೇ ಚಿತ್ರವನ್ನು ದಕ್ಷಿಣ ಭಾರತದ ಭಾಷೆಗಳಲ್ಲೂ ಡಬ್ ಮಾಡಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ರೆಡ್‌ ಚಿಲ್ಲೀಸ್ ಬ್ಯಾನರ್‌ನಲ್ಲಿ 'ಜವಾನ್' ಚಿತ್ರವನ್ನು ಸ್ವತಃ ಶಾರುಕ್ ಖಾನ್ ಪತ್ನಿ ಗೌರಿ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಎರಡೂವರೆ ವರ್ಷಗಳ ಹಿಂದೆಯೇ ಸಿನಿಮಾ ಘೋಷಣೆ ಆಗಿತ್ತು. ಆದರೆ ಶೂಟಿಂಗ್ ತಡವಾಗ್ತಿದೆ.

ಇದನ್ನೂ ಓದಿ-CFC Academy Awards 2023 : ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ.. ಅತ್ಯುತ್ತಮ ನಟ ರಿಷಬ್, ನಟಿ ಶರ್ಮಿಳಾ

45 ದಿನಗಳ ನಂತರ ಓಟಿಟಿಗೆ ಬರಬೇಕಿದ್ದ ಕ್ರಾಂತಿ 29ನೇ ದಿನಕ್ಕೆ ಓಟಿಟಿಗೆ ಲಗ್ಗೆ ಇಟ್ಟಿತ್ತು ತೆಲುಗಿನ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ 'ಜೈಲರ್' ಚಿತ್ರದಲ್ಲಿ ನಟಿಸ್ತಿದ್ದಾರೆ. ಹಾಗಾಗಿ ಶಿವಣ್ಣ ಜವಾನ್ ಚಿತ್ರದಲ್ಲಿ ನಟಿಸಿದರೂ ಅಚ್ಚರಿ ಪಡಬೇಕಿಲ್ಲ. ಆದರೆ ಸದ್ಯ ಹರಿದಾಡುತ್ತಿರುವ ಸುದ್ದಿ ಎಷ್ಟು ನಿಜ ಎಷ್ಟು ಸುಳ್ಳು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಜೂನ್ 2ಕ್ಕೆ 'ಜವಾನ್' ಚಿತ್ರವನ್ನು ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇನ್ನು 'ಜವಾನ್' ಚಿತ್ರದಲ್ಲಿ ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ಯೋಗಿ ಬಾಬು, ಮನ್ಸೂರ್ ಅಲಿಖಾನ್, ಅಸ್ತಾ ಅಗರ್‌ವಾಲ್ ನಟಿಸುತ್ತಿದ್ದಾರೆ. ದಳಪತಿ ವಿಜಯ್ ಹಾಗೂ ದೀಪಿಕಾ ಪಡುಕೋಣೆ ಗೆಸ್ಟ್ ಅಪಿಯರೆನ್ಸ್ ಮಾಡುವುದು ಪಕ್ಕಾ ಆಗಿದೆ. ತಮಿಳಿನ ಅನಿರುದ್ಧ್ ರವಿಚಂದರ್ ಮ್ಯೂಸಿಕ್, ಜಿ. ಕೆ ವಿಷ್ಣು ಸಿನಿಮಾಟೋಗ್ರಫಿ 'ಜವಾನ್' ಚಿತ್ರಕ್ಕಿದೆ. 'ಪಠಾಣ್' ಬ್ಲಾಕ್‌ಬಸ್ಟರ್ ಬೆನ್ನಲ್ಲೇ 'ಜವಾನ್' ಸಿನಿಮಾ ಮೇಲಿನ ನಿರೀಕ್ಷೆ ದುಪಟ್ಟಾಗಿದೆ.

ಇದನ್ನೂ ಓದಿ-Amitabh Bachchan : ಚಿತ್ರೀಕರಣದ ವೇಳೆ ಅಮಿತಾಬ್ ಬಚ್ಚನ್‌ಗೆ ಗಾಯ.. ಆರೋಗ್ಯ ಸ್ಥಿತಿ ಹೇಗಿದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News