CFC Academy Awards 2023 : ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ.. ಅತ್ಯುತ್ತಮ ನಟ ರಿಷಬ್, ನಟಿ ಶರ್ಮಿಳಾ

Chandanavana Film Critics Academy Awards : 2022ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ನೀಡಲಾದ ಪ್ರಶಸ್ತಿಯಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರಗಳು ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. 

Written by - YASHODHA POOJARI | Last Updated : Mar 6, 2023, 11:39 AM IST
  • ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ
  • ಅತ್ಯುತ್ತಮ ನಟ ರಿಷಬ್, ನಟಿ ಶರ್ಮಿಳಾ
  • ಅತೀ ಹೆಚ್ಚು ಪ್ರಶಸ್ತಿ ಬಾಚಿಕೊಂಡ ಕೆಜಿಎಫ್ 2
CFC Academy Awards 2023 : ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ.. ಅತ್ಯುತ್ತಮ ನಟ ರಿಷಬ್, ನಟಿ ಶರ್ಮಿಳಾ  title=
CFC Academy Awards 2023

Chandanavana Film Critics Academy Awards : 4ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆಯಿತು. 2022ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ನೀಡಲಾದ ಪ್ರಶಸ್ತಿಯಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರಗಳು ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. 

ಅತ್ಯುತ್ತಮ ನಟ ಪ್ರಶಸ್ತಿಯನ್ನು ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಪಾಲಾಗಿದ್ದರೆ, ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ‘ಕಾಂತರ’ದ ಕೈ ಸೇರಿದೆ. ಅತ್ಯುತ್ತಮ ಸಂಗೀತ ಕಾಂತಾರ ಚಿತ್ರಕ್ಕಾಗಿ ಅಜನೀಶ್ ಲೋಕನಾಥ್ ಪಡೆದುಕೊಂಡರೆ, ಅತ್ಯುತ್ತಮ ಸ್ಟಂಟ್ ಪ್ರಶಸ್ತಿಯು ಕಾಂತಾರ ಸಿನಿಮಾದ ವಿಕ್ರಮ್ ಮೋರ್ ಅವರಿಗೆ ಸಂದಿದೆ. 
ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನ ಚಿತ್ರಕ್ಕೆ ಒಟ್ಟು ಮೂರು ಪ್ರಶಸ್ತಿಗಳು ಸಂದಿದ್ದು, ಸಿನಿಮಾಟೋಗ್ರಫಿಗಾಗಿ ಭುವನ್ ಗೌಡ,  ಅತ್ಯುತ್ತಮ ಸಂಕಲನಕ್ಕಾಗಿ ಪ್ರಜ್ವಲ್ ಕುಲಕರ್ಣಿ ಹಾಗೂ ಅತ್ಯುತ್ತಮ ವಿಎಫ್ ಎಕ್ಸ್ ಹಾಗಿ ಉದಯ ರವಿ ಹೆಗಡೆ ಪಡೆದುಕೊಂಡಿದ್ದಾರೆ. 

ಇದನ್ನೂ ಓದಿ : Amitabh Bachchan : ಚಿತ್ರೀಕರಣದ ವೇಳೆ ಅಮಿತಾಬ್ ಬಚ್ಚನ್‌ಗೆ ಗಾಯ.. ಆರೋಗ್ಯ ಸ್ಥಿತಿ ಹೇಗಿದೆ ಗೊತ್ತಾ?

ಅತ್ಯುತ್ತಮ ನಟಿ ಪ್ರಶಸ್ತಿಯು ಗಾಳಿಪಟ 2 ಚಿತ್ರಕ್ಕಾಗಿ ಶರ್ಮಿಳಾ ಮಾಂಡ್ರೆಗೆ ದೊರೆತರೆ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು 777 ಚಾರ್ಲಿ ಚಿತ್ರಕ್ಕಾಗಿ ಕಿರಣ್ ರಾಜ್ ಕೆ ಪಡೆದಿದ್ದಾರೆ. ಈ ಬಾರಿ ಐದು ವಿಶೇಷ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಯಿತು. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅತ್ಯುತ್ತಮ ನಿರ್ಮಾಪಕ (ಡೆಬ್ಯು), ಸಂಚಾರಿ ವಿಜಯ್ ಹೆಸರಿನಲ್ಲಿ ಅತ್ಯುತ್ತಮ ನಟ (ಡೆಬ್ಯು), ತ್ರಿಪುರಾಂಭ ಹೆಸರಿನಲ್ಲಿ ಅತ್ಯುತ್ತಮ ನಟಿ (ಡೆಬ್ಯು), ಶಂಕರನಾಗ್ ಹೆಸರಿನಲ್ಲಿ ಅತ್ಯುತ್ತಮ ನಿರ್ದೇಶಕ (ಡೆಬ್ಯು) ಹಾಗೂ ಚಿ.ಉದಯ ಶಂಕರ್ ಹೆಸರಿನಲ್ಲಿ ಅತ್ಯುತ್ತಮ ಬರಹಗಾರ (ಡೆಬ್ಯು) ಪ್ರಶಸ್ತಿಯನ್ನು ನೀಡಲಾಯಿತು.

ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಮೋಹಕ ತಾರೆ ರಮ್ಯಾ, ನಟಿಯರಾದ ಕಾರುಣ್ಯ ರಾಮ್, ನಿರ್ದೇಶಕರಾದ ಬಿ.ಸುರೇಶ್, ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಸ್ಮೈಲ್ ಶ್ರೀನು, ಬಿ.ಎಸ್.ಲಿಂಗದೇವರು, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. 

ಇದನ್ನೂ ಓದಿ : Rashmika Mandanna: ರಶ್ಮಿಕಾಗೆ ಪ್ರಪೋಸ್ ಮಾಡಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ!?

4ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ವಿಜೇತರು : 

ಅತ್ಯುತ್ತಮ ಚಿತ್ರ
ಕಾಂತಾರ 

ಅತ್ಯುತ್ತಮ ನಿರ್ದೇಶಕ
ಕಿರಣ್ ರಾಜ್ (ಚಾರ್ಲಿ) 

ಅತ್ಯುತ್ತಮ ನಾಯಕ
ರಿಷಬ್ ಶೆಟ್ಟಿ (ಕಾಂತಾರ) 

ಅತ್ಯುತ್ತಮ ನಾಯಕಿ
ಶರ್ಮಿಳಾ ಮಾಂಡ್ರೆ (ಗಾಳಿಪಟ 2)

ಅತ್ಯುತ್ತಮ ಸಂಭಾಷಣೆ
ಮಾಸ್ತಿ (ಗುರು ಶಿಷ್ಯರು) 
ಅತ್ಯುತ್ತಮ ಪೋಷಕ ನಟ
ಸುಚೇಂದ್ರ ಪ್ರಸಾದ್ (ವ್ಹೀಲ್ ಚೇರ್ ರೋಮಿಯೋ) 

ಅತ್ಯುತ್ತಮ ಪೋಷಕ ನಟಿ
ಸುಧಾರಾಣಿ (ತುರ್ತು ನಿರ್ಗಮನ) 

ಅತ್ಯುತ್ತಮ ಚಿತ್ರಕಥೆ
ಡಾರ್ಲಿಂಗ್ ಕೃಷ್ಣ  (ಲವ್ ಮಾಕ್ಟೆಲ್ 2) 

ಅತ್ಯುತ್ತಮ ಬಾಲನಟ/ನಟಿ
ಶಾರ್ವರಿ (ಚಾರ್ಲಿ)

ಅತ್ಯುತ್ತಮ ಸಂಗೀತ
ಕಾಂತಾರ (ಅಜನೀಶ್) 

ಅತ್ಯುತ್ತಮ ಹಿನ್ನೆಲೆ ಸಂಗೀತ
ಅನೂಪ ಸೀಳೀನ್ (ಮಾನ್ಸೂನ್ ರಾಗ) 

ಅತ್ಯುತ್ತಮ ಚಿತ್ರ ಸಾಹಿತ್ಯ
ಶಶಾಂಕ (ಲವ್ 350) 

ಅತ್ಯುತ್ತಮ ಗಾಯಕ
ಮೋಹನ್ (ಜುಂಜಪ್ಪ, ವೇದ) 

ಅತ್ಯುತ್ತಮ ಗಾಯಕಿ
ಐಶ್ವರ್ಯ ರಂಗರಾಜ್ (ಏಕ್ ಲವ್ ಯಾ) 

ಅತ್ಯುತ್ತಮ ಛಾಯಾಗ್ರಹಣ
ಭುವನ್ ಗೌಡ (ಕೆಜಿಎಫ್ 2)

ಅತ್ಯುತ್ತಮ ಸಂಕಲನ
ಉಜ್ವಲ್ ಕುಲಕರ್ಣಿ (ಕೆಜಿಎಫ್2)

ಅತ್ಯುತ್ತಮ ಕಲಾ ನಿರ್ದೇಶನ
ಶಿವಕುಮಾರ (ವಿಕ್ರಾಂತ ರೋಣ) 

ಅತ್ಯುತ್ತಮ ನೃತ್ಯ ನಿರ್ದೇಶನ
ಮೋಹನ್ (ಏಕ್ ಲವ್ ಯಾ, ಮೀಟ್ ಮಾಡೋಣ) 

ಅತ್ಯುತ್ತಮ ಸಾಹಸ
ವಿಕ್ರಮ್ ಮೋರ್ (ಕಾಂತಾರ)

ಅತ್ಯುತ್ತಮ ವಿಎಫ್ ಎಕ್ಸ್
ಉದಯ ರವಿ ಹೆಗಡೆ ಯೂನಿಫೈ ಮೀಡಿಯಾ (ಕೆಜಿಎಫ್2)

ಅತ್ಯುತ್ತಮ ನಟ (ಡೆಬ್ಯು)
ಪೃಥ್ವಿ ಶ್ಯಾಮನೂರು (ಪದವಿ ಪೂರ್ವ)

ಅತ್ಯುತ್ತಮ ನಟಿ (ಡೆಬ್ಯು)
ಯಶಾ ಶಿವಕುಮಾರ್ (ಮಾನ್ಸನ್ ರಾಗ)

ಅತ್ಯುತ್ತಮ ನಿರ್ದೇಶಕ (ಡೆಬ್ಯು)
ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ)

ಅತ್ಯುತ್ತಮ ನಿರ್ಮಾಪಕ (ಡೆಬ್ಯು)
ಪವನ್ ಒಡೆಯರ್ (ಡೊಳ್ಳು) 

ಅತ್ಯುತ್ತಮ ಬರಹಗಾರ (ಡೆಬ್ಯು)
ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ) 

ಅತ್ಯುತ್ತಮ ಯುಟ್ಯೂಬರ್
ಕಲಾ ಮಾಧ್ಯಮ (ಪರಮೇಶ್ವರ ಕೆ.ಎಸ್)

ಅತ್ಯುತ್ತಮ ಮನರಂಜನಾ ಸಾಮಾಜಿಕ ಜಾಲತಾಣ
ವಿಕ್ಕಿ ಪೀಡಿಯಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News