Amitabh Bachchan : ಚಿತ್ರೀಕರಣದ ವೇಳೆ ಅಮಿತಾಬ್ ಬಚ್ಚನ್‌ಗೆ ಗಾಯ.. ಆರೋಗ್ಯ ಸ್ಥಿತಿ ಹೇಗಿದೆ ಗೊತ್ತಾ?

Amitabh Bachchan injured during Action Scene: ಶೂಟಿಂಗ್ ವೇಳೆ ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದು, ಪಕ್ಕೆಲುಬುಗಳಿಗೆ ಗಾಯವಾಗಿದೆ. ಈ ಮಾಹಿತಿಯನ್ನು ಸ್ವತಃ ಬಿಗ್ ಬಿ ತಮ್ಮ ಬ್ಲಾಗ್ ಮೂಲಕ ನೀಡಿದ್ದಾರೆ.  'ಪ್ರಾಜೆಕ್ಟ್ ಕೆ' ಚಿತ್ರದ ಸಾಹಸ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಾಗ ಅವರ ಪಕ್ಕೆಲುಬುಗಳಿಗೆ ಗಾಯವಾಗಿತ್ತು. 

Written by - Chetana Devarmani | Last Updated : Mar 6, 2023, 11:15 AM IST
  • ಬಿಗ್‌ ಬಿ ಅಮಿತಾಬ್ ಬಚ್ಚನ್‌ಗೆ ಗಾಯ
  • ಶೂಟಿಂಗ್ ವೇಳೆ ಗಾಯಗೊಂಡ ನಟ
  • ಪ್ರಾಜೆಕ್ಟ್ ಕೆ ಚಿತ್ರೀಕರಣದ ವೇಳೆ ನಡೆದ ಘಟನೆ
Amitabh Bachchan : ಚಿತ್ರೀಕರಣದ ವೇಳೆ ಅಮಿತಾಬ್ ಬಚ್ಚನ್‌ಗೆ ಗಾಯ.. ಆರೋಗ್ಯ ಸ್ಥಿತಿ ಹೇಗಿದೆ ಗೊತ್ತಾ?  title=
Amitabh Bachchan

Amitabh Bachchan injured : ಶೂಟಿಂಗ್ ವೇಳೆ ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದು, ಪಕ್ಕೆಲುಬುಗಳಿಗೆ ಗಾಯವಾಗಿದೆ. ಈ ಮಾಹಿತಿಯನ್ನು ಸ್ವತಃ ಬಿಗ್ ಬಿ ತಮ್ಮ ಬ್ಲಾಗ್ ಮೂಲಕ ನೀಡಿದ್ದಾರೆ. ಅಮಿತಾಬ್‌ ಬಚ್ಚನ್ ಹೈದರಾಬಾದ್‌ನಲ್ಲಿ ತಮ್ಮ 'ಪ್ರಾಜೆಕ್ಟ್ ಕೆ' ಚಿತ್ರದ ಸಾಹಸ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಾಗ ಅವರ ಪಕ್ಕೆಲುಬುಗಳಿಗೆ ಗಾಯವಾಗಿತ್ತು. ಬ್ಲಾಗ್ ಮೂಲಕ ತಮ್ಮ ಪ್ರೀತಿಪಾತ್ರರಿಗೆ ಆರೋಗ್ಯದ ಮಾಹಿತಿ ನೀಡಿದ ಅಮಿತಾಬ್ ಬಚ್ಚನ್, ಸದ್ಯಕ್ಕೆ ತಾವು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ, ಪ್ರಸ್ತುತ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಪ್ರಸ್ತುತ ಮುಂಬೈನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ, ಆದರೆ ಗಾಯದಿಂದಾಗಿ ಯಾರನ್ನೂ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಈಗ ಅವರ ಸ್ಥಿತಿ ಹೇಗಿದೆ?

ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಪ್ರಕಾರ, "ಹೈದರಾಬಾದ್‌ನಲ್ಲಿ 'ಪ್ರಾಜೆಕ್ಟ್ ಕೆ' ಚಿತ್ರೀಕರಣದ ವೇಳೆ ಸಾಹಸ ದೃಶ್ಯವನ್ನು ಚಿತ್ರೀಕರಿಸುವಾಗ ನನಗೆ ನೋವಾಯಿತು. ಪಕ್ಕೆಲುಬುಗಳ ಸ್ನಾಯು ಹರಿದಿದೆ. ಚಿತ್ರೀಕರಣವನ್ನು ರದ್ದುಗೊಳಿಸಲಾಗಿದೆ. ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ವೈದ್ಯರ ಸಲಹೆ ಪಡೆದು ಸಿಟಿ ಸ್ಕ್ಯಾನ್ ಮಾಡಿ ಮನೆಗೆ ಮರಳಿದ್ದಾರೆ. ಬ್ಯಾಂಡೇಜ್ ಕಟ್ಟಲಾಗಿದ್ದು, ಬೆಡ್ ರೆಸ್ಟ್ ಗೆ ವೈದ್ಯರು ಸಲಹೆ ನೀಡಿದ್ದಾರೆ. ನಡೆಯುವಾಗ ಮತ್ತು ಉಸಿರಾಡಲು ತುಂಬಾ ನೋವಾಗುತ್ತದೆ. ಎಲ್ಲವೂ ಸಹಜ ಸ್ಥಿತಿಗೆ ಮರಳಲು ಕೆಲವು ವಾರಗಳು ಬೇಕಾಗುತ್ತದೆ. ನೋವಿಗೆ ಒಂದಷ್ಟು ಔಷಧವನ್ನೂ ನೀಡಲಾಗುತ್ತಿದೆ" 

ಇದನ್ನೂ ಓದಿ : Rashmika Mandanna: ರಶ್ಮಿಕಾಗೆ ಪ್ರಪೋಸ್ ಮಾಡಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ!?

"ಅದಕ್ಕಾಗಿಯೇ ಮಾಡಬೇಕಾದ ಕೆಲಸಗಳನ್ನು ನಿಲ್ಲಿಸಿದ್ದೇನೆ. ಚಿಕಿತ್ಸೆ ಮುಗಿಯುವವರೆಗೆ, ಎಲ್ಲಾ ಕೆಲಸವನ್ನು ರದ್ದುಗೊಳಿಸಲಾಗಿದೆ. ನಾನು ಜಲ್ಸಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ ಮತ್ತು ಎಲ್ಲಾ ಅಗತ್ಯ ಚಟುವಟಿಕೆಗಳಿಂದ ದೂರವಿದ್ದೇನೆ. ಇಂದು ಸಂಜೆ ಜಲ್ಸಾ ಗೇಟ್‌ನಲ್ಲಿ ಹಿತೈಷಿಗಳನ್ನು ಭೇಟಿ ಮಾಡಲು ನನಗೆ ಸಾಧ್ಯವಾಗುವುದಿಲ್ಲ" ಎಂದು ಬರೆದಿದ್ದಾರೆ.

41 ವರ್ಷಗಳ ಹಿಂದೆಯೂ ಗಂಭೀರ ಗಾಯ : 

ಜುಲೈ 26, 1982 ರಂದು ಬೆಂಗಳೂರಿನಲ್ಲಿ 'ಕೂಲಿ' ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಅಮಿತಾಬ್ ಬಚ್ಚನ್ ಅವರು ಹೊಡೆದಾಟದ ದೃಶ್ಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ವಾಸ್ತವವಾಗಿ, ಶೂಟಿಂಗ್ ಸಮಯದಲ್ಲಿ, ಅಮಿತಾಬ್ ಬಚ್ಚನ್ ದೃಶ್ಯದಲ್ಲಿ ನೈಜತೆಯನ್ನು ಬಯಸಿದ್ದರು, ಆದ್ದರಿಂದ ಅವರು ಸ್ವತಃ ಹೊಡೆದಾಟದ ದೃಶ್ಯವನ್ನು ಮಾಡಲು ನಿರ್ಧರಿಸಿದರು. ದೃಶ್ಯದಲ್ಲಿ ಪುನೀತ್ ಇಸ್ಸಾರ್ ಅಮಿತಾಬ್‌ಗೆ ಪಂಚ್ ಮಾಡಿ ಟೇಬಲ್ ಮೇಲೆ ಬೀಳಿಸಬೇಕಿತ್ತು. ದೃಶ್ಯವನ್ನು ಚಿತ್ರೀಕರಿಸಿದ ನಂತರ, ಅಮಿತಾಬ್ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಆರಂಭದಲ್ಲಿ, ಈ ಗಾಯವು ಸೌಮ್ಯವಾಗಿತ್ತು, ಆದರೆ ನಂತರ, ನೋವು ಹೆಚ್ಚಾಯಿತು. 

ಇದನ್ನೂ ಓದಿ : Kushboo Sundar : '8 ವರ್ಷದವಳಿದ್ದಾಗ ನನ್ನ ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ' 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News