ಐಶ್ವರ್ಯಾ ರೈ ಇಷ್ಟವಿರಲಿಲ್ಲ… ಈ ನಟಿಯನ್ನೇ ಮಗ ಅಭಿಷೇಕ್’ಗೆ ಮದುವೆ ಮಾಡಿಸಬೇಕೆಂದಿದ್ದರು ಜಯಾ ಬಚ್ಚನ್!

Aishwarya Rai and Jaya Bachchan: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವೆ ಭಿನ್ನಾಭಿಪ್ರಾಯವಿದೆ, ಇಬ್ಬರೂ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಅನೇಕ ವರದಿಗಳು ಹೇಳುತ್ತಿವೆ.

Written by - Bhavishya Shetty | Last Updated : Dec 20, 2023, 04:31 PM IST
    • ಅಭಿಷೇಕ್ ಮತ್ತು ಐಶ್ವರ್ಯಾ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಅನೇಕ ವರದಿಗಳು ಹೇಳುತ್ತಿವೆ
    • ಬಚ್ಚನ್ ಕುಟುಂಬ ಸೊಸೆ ಐಶ್ವರ್ಯಾ ರೈ ಅವರನ್ನು ಕಡೆಗಣಿಸುತ್ತಿದೆಯಂತೆ
    • ರೆಡಿಫ್‌’ಗೆ ನೀಡಿದ ಸಂದರ್ಶನದಲ್ಲಿ ಜಯಾ ಬಚ್ಚನ್ ಐಶ್ವರ್ಯಾ ರೈ ಬಗ್ಗೆ ಹೇಳಿಕೆ
ಐಶ್ವರ್ಯಾ ರೈ ಇಷ್ಟವಿರಲಿಲ್ಲ… ಈ ನಟಿಯನ್ನೇ ಮಗ ಅಭಿಷೇಕ್’ಗೆ ಮದುವೆ ಮಾಡಿಸಬೇಕೆಂದಿದ್ದರು ಜಯಾ ಬಚ್ಚನ್!   title=
Jaya Bachchan Statement About Aishwarya Rai

Aishwarya Rai and Jaya Bachchan: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಅನೇಕ ವಿಷಯಗಳು ಬೆಳಕಿಗೆ ಬರುತ್ತಿವೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವೆ ಭಿನ್ನಾಭಿಪ್ರಾಯವಿದೆ, ಇಬ್ಬರೂ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಅನೇಕ ವರದಿಗಳು ಹೇಳುತ್ತಿವೆ.

ಇದನ್ನೂ ಓದಿ: ಡೈ, ಕಲರ್ ಎಂತದ್ದೂ ಬೇಡ… ಕಾಫಿ ಪುಡಿ ಇದ್ದರೆ 10 ನಿಮಿಷದಲ್ಲಿ ಬಿಳಿಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು!

ಇದರ ಜೊತೆಗೆ ಕೆಲ ದಿನಗಳಿಂದ ಬಚ್ಚನ್ ಕುಟುಂಬ ಸೊಸೆ ಐಶ್ವರ್ಯಾ ರೈ ಅವರನ್ನು ಕಡೆಗಣಿಸುತ್ತಿದೆ ಎಂದು ಹೇಳಲಾಗುತ್ತಿದೆ. ಕೆಲ ಮೂಲಗಳ ಪ್ರಕಾರ, ಜಯಾ ಬಚ್ಚನ್’ಗೆ ಐಶ್ವರ್ಯಾರನ್ನು ಸೊಸೆಯನ್ನಾಗಿಸಿ ಮನೆ ತುಂಬಿಸಿಕೊಳ್ಳಲು ಇಷ್ಟವಿರಲಿಲ್ಲವಂತೆ, ಬದಲಾಗಿ ಕಪೂರ್ ಕುಟುಂಬದ ಕುಡಿ ಕರೀಷ್ಮಾ ಕಪೂರ್ ಅವರನ್ನು ತಮ್ಮ ಏಕೈಕ ಪುತ್ರ ಅಭಿಷೇಕ್’ಗೆ ಮದುವೆ ಮಾಡಿಸಬೇಕೆಂದುಕೊಂಡಿದ್ದರು ಎನ್ನಲಾಗುತ್ತಿದೆ.

ಇವೆಲ್ಲದರ ಹೊರತಾಗಿ ಈ ಹಿಂದೆ ರೆಡಿಫ್‌’ಗೆ ನೀಡಿದ ಸಂದರ್ಶನದಲ್ಲಿ, ಜಯಾ ಬಚ್ಚನ್ ಐಶ್ವರ್ಯಾ ರೈ ಬಗ್ಗೆ ಹೇಳಿಕೆಯೊಂದನ್ನು “ನನಗೆ ಐಶ್ವರ್ಯಾ ಬಗ್ಗೆ ಏನಾದರೂ ಅಸಮಾಧಾನ ಅನಿಸಿದರೆ, ನಾನು ಅದನ್ನು ಮುಖಕ್ಕೆ ಹೊಡೆದಂತೆ ಹೇಳುತ್ತೇನೆ. ಬೆನ್ನ ಹಿಂದೆ ಯಾವುದೇ ರಾಜಕೀಯ ಮಾಡುವುದಿಲ್ಲ. ಅವಳು ಕೂಡ ಅಷ್ಟೇ, ತನಗೆ ಬೇಸರ ಅನಿಸಿದರೆ ಹೇಳಿಕೊಳ್ಳುತ್ತಾಳೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 600 ವರ್ಷಕ್ಕೊಮ್ಮೆ ರೂಪುಗೊಳ್ಳುವ ಜಾತಕದಲ್ಲಿ ಜನಿಸಿದ್ದಾರೆ ಐಶ್ವರ್ಯಾ ರೈ: ವಿಚ್ಛೇದನದ ಬಗ್ಗೆ ಪ್ರಖ್ಯಾತ ಜ್ಯೋತಿಷಿ ಭವಿಷ್ಯ!

ಕೆಲ ವರದಿಗಳ ಪ್ರಕಾರ, ಒಮ್ಮೆ ತಮ್ಮ ಸೊಸೆ ಐಶ್ವರ್ಯಾ ರೈ ಮೇಲೆ ಪ್ರೀತಿಯ ಮಳೆಗರೆಯುತ್ತಿದ್ದ ಬಚ್ಚನ್ ಕುಟುಂಬ, ಇದ್ದಕ್ಕಿದ್ದಂತೆ ಅವರನ್ನು ದೂರವಿಡಲು ಶುರು ಮಾಡಿದೆ. ಜಯಾ ಬಚ್ಚನ್ ಸೊಸೆ ಐಶ್ವರ್ಯಾ ರೈ ಅವರನ್ನು ನಿರ್ಲಕ್ಷಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಇದೇ ವೇಳೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

Trending News