‌Sai Pallavi: ಕತ್ರಿನಾ ಕೈಫ್‌ ಸಾಂಗ್‌ಗೆ ನ್ಯಾಚುರಲ್‌ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್‌ ಟೈಮ್ ವಿಡಿಯೋ ವೈರಲ್!!

Sai Pallavi Old Video: ಸಾಯಿ ಪಲ್ಲವಿ ದೊಡ್ಡ ನಟಿ... ಅದಕ್ಕಿಂತ ಹೆಚ್ಚಾಗಿ ಡ್ಯಾನ್ಸರ್. ಸಾಯಿ ಪಲ್ಲವಿ ಕಾಲೇಜು ದಿನಗಳಲ್ಲಿ ಸ್ಟೇಜ್ ಮೇಲೆ ಕತ್ರಿನಾ ಕೈಫ್ 'ಶೀಲಾ ಕಿ ಜವಾನಿ' ಹಾಡಿಗೆ ಅದ್ಭುತ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಆ ಹಳೆ ವಿಡಿಯೋ ವೈರಲ್ ಆಗಿದೆ.   

Written by - Savita M B | Last Updated : Apr 17, 2024, 01:53 PM IST
  • ಈ ಜನರೇಷನ್ ನಾಯಕಿಯರಲ್ಲಿ ಸಾಯಿ ಪಲ್ಲವಿ ಅತ್ಯುತ್ತಮ ಡಾನ್ಸರ್‌.
  • ಸಾಯಿ ಪಲ್ಲವಿಗೆ ಅಪಾರ ಕ್ರೇಜ್ ತಂದುಕೊಟ್ಟ ವಿಷಯಗಳಲ್ಲಿ ಡ್ಯಾನ್ಸ್ ಕೂಡ ಒಂದು.
‌Sai Pallavi: ಕತ್ರಿನಾ ಕೈಫ್‌ ಸಾಂಗ್‌ಗೆ ನ್ಯಾಚುರಲ್‌ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್‌ ಟೈಮ್ ವಿಡಿಯೋ ವೈರಲ್!! title=

‌Sai Pallavi: ಈ ಜನರೇಷನ್ ನಾಯಕಿಯರಲ್ಲಿ ಸಾಯಿ ಪಲ್ಲವಿ ಅತ್ಯುತ್ತಮ ಡಾನ್ಸರ್‌. ಅದರಲ್ಲಿ ಯಾವುದೇ ಸಂಶಯವಿಲ್ಲ. ಸಾಯಿ ಪಲ್ಲವಿ ತಮ್ಮ ಹದಿಹರೆಯದಿಂದಲೂ ಅನೇಕ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಸಾಯಿ ಪಲ್ಲವಿ ಅಭಿನಯದ ʼಫಿದಾʼ 'ರೌಡಿ ಬೇಬಿ' ಸಿನಿಮಾದ ಹಾಡುಗಳಲ್ಲಿ ಸಾಯಿ ಪಲ್ಲವಿಯ ನೃತ್ಯ ಅದ್ಭುತವೆಂದೇ ಹೇಳಬೇಕು. ಸಾಯಿ ಪಲ್ಲವಿಗೆ ಅಪಾರ ಕ್ರೇಜ್ ತಂದುಕೊಟ್ಟ ವಿಷಯಗಳಲ್ಲಿ ಡ್ಯಾನ್ಸ್ ಕೂಡ ಒಂದು. 

ಸಾಯಿ ಪಲ್ಲವಿಯ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು.. ಕಾಲೇಜು ದಿನಗಳಲ್ಲಿ ಫೆಸ್ಟ್‌ನಲ್ಲಿ ಸ್ಟೇಜ್‌ ಫರ್ಮಾಮೆನ್ಸ್‌ ನೀಡಿದ್ದರು. ಕತ್ರಿನಾ ಕೈಫ್ ಅವರ 'ಶೀಲಾ ಕಿ ಜವಾನಿ' ಹಾಡಿಗೆ ಸಾಯಿ ಪಲ್ಲವಿ ಡ್ಯಾನ್ಸ್ ಮಾಡಿದ್ದು ಅವರು ಎನರ್ಜಿ ನೋಡಿ ಅಭಿಮಾನಿಗಳು ಶಾಕ್‌ಆಗಿದ್ದಾರೆ.. ಈ ಹಳೆಯ ವಿಡಿಯೋ ಸದ್ಯ ಸೋಷಿಯಕ್‌ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ-‌Anushka Sharma: ಭಾರತಕ್ಕೆ ಮರಳಿದ ಅನುಷ್ಕಾ ಶರ್ಮಾ! ‌ಮೊದಲ ಬಾರಿಗೆ‌ ವಿರಾಟ್‌ ಪುತ್ರ ಅಕಾಯ್ ಫೇಸ್‌ ರಿವೀಲ್!!

ಇನ್ನು ನಟಿ ಸಾಯಿ ಪಲ್ಲವಿ ಮಲಯಾಳಂನ ಪ್ರೇಮಂ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಸಾಯಿ ಪಲ್ಲವಿಗೆ ಆಫರ್ ಗಳು ಸಾಲುಗಟ್ಟಿ ನಿಂತಿದ್ದವು. ತೆಲುಗಿನಲ್ಲಿ ಸಾಯಿ ಪಲ್ಲವಿ ಅಭಿನಯದ ಮೊದಲ ಚಿತ್ರ ಫಿದಾ ಅದೂ ಕೂಡ ಭರ್ಜರಿ ಯಶಸ್ಸು ಕಂಡಿತ್ತು. 

ಸದ್ಯ ನಾಗ ಚೈತನ್ಯ ಜೊತೆ ತಾಂಡೇಲ್ ಸಿನಿಮಾ ಮಾಡುತ್ತಿದ್ದಾರೆ. ಕಾರ್ತಿಕೇಯ ಖ್ಯಾತಿಯ ಚಂದು ಮೊಂಡೇಟಿ ಈ ಚಿತ್ರದ ನಿರ್ದೇಶಕರು. ಇದು ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೇ ಸಾಯಿ ಪಲ್ಲವಿ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ.  

ಇದನ್ನೂ ಓದಿ-Anchor Anushree: ಸರಿಗಮಪ ಸೀಸನ್‌ 20 ನಿರೂಪಣೆಗೆ ಆಂಕರ್‌ ಅನುಶ್ರೀ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News