ಈ ನಟಿ ಮಾಡಿದ ಆ ಒಂದು ತಪ್ಪು ʻಶ್ರೀದೇವಿʼಗೆ ಸ್ಟಾರ್ ಪಟ್ಟ ನೀಡಿತು.!

Bollywood Actress Sridevi: ಬಾಲಿವುಡ್‌ನ ಮೊದಲ ಲೇಡಿ ಸೂಪರ್‌ಸ್ಟಾರ್ ಎಂಬ ಬಿರುದು ಹೊಂದಿರುವ ಶ್ರೀದೇವಿ ಆ ಕಾಲದ ಅತ್ಯಂತ ದುಬಾರಿ ನಟಿಯರಲ್ಲಿ ಒಬ್ಬರು. ಸೌತ್ ಸಿನಿಮಾಗಳಲ್ಲಿ ನಟಿಸುತ್ತ ಖ್ಯಾತಿ ಪಡೆದ ಶ್ರೀದೇವಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಾಗ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. 

Written by - Chetana Devarmani | Last Updated : Feb 23, 2024, 08:05 AM IST
  • ಬಾಲಿವುಡ್‌ನ ಮೊದಲ ಲೇಡಿ ಸೂಪರ್‌ಸ್ಟಾರ್
  • ಆ ಕಾಲದ ಅತ್ಯಂತ ದುಬಾರಿ ನಟಿ ಶ್ರೀದೇವಿ
  • ಶ್ರೀದೇವಿ ಅಭಿನಯದ ಮೊದಲ ಹಿಂದಿ ಚಿತ್ರ
ಈ ನಟಿ ಮಾಡಿದ ಆ ಒಂದು ತಪ್ಪು ʻಶ್ರೀದೇವಿʼಗೆ ಸ್ಟಾರ್ ಪಟ್ಟ ನೀಡಿತು.! title=

Bollywood Actress Sridevi: ಬಾಲಿವುಡ್‌ ನಟಿ ಶ್ರೀದೇವಿ ತಮ್ಮ ವೃತ್ತಿಜೀವನದಲ್ಲಿ ಹಲವಾರು ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದಾರೆ. ಬಾಲಿವುಡ್‌ನ ಮೊದಲ ಲೇಡಿ ಸೂಪರ್‌ಸ್ಟಾರ್ ಎಂಬ ಬಿರುದು ಹೊಂದಿರುವ ಶ್ರೀದೇವಿ ಆ ಕಾಲದ ಅತ್ಯಂತ ದುಬಾರಿ ನಟಿಯರಲ್ಲಿ ಒಬ್ಬರು. ಸೌತ್ ಸಿನಿಮಾಗಳಲ್ಲಿ ನಟಿಸುತ್ತ ಖ್ಯಾತಿ ಪಡೆದ ಶ್ರೀದೇವಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಾಗ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಹಿಂದಿ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಆರಂಭಿಕ ದಿನಗಳಲ್ಲಿ ಸಿನಿಮಾಗಳ ಆಫರ್‌ ಸಿಗುತ್ತಿರಲಿಲ್ಲ ಎನ್ನಲಾಗಿದೆ. ಆದರೆ ಒಂದೇ ಒಂದು ಸಿನಿಮಾ ಶ್ರೀದೇವಿಯ ಜೀವನದ ದಾರಿಯನ್ನೇ ಬದಲಿಸಿತು. 

ಶ್ರೀದೇವಿ ಅಭಿನಯದ ಮೊದಲ ಹಿಂದಿ ಚಿತ್ರ ಸೋಲ್ವನ್ ಸಾವನ್. ಈ ಸಿನಿಮಾ ಬಳಿಕ ಶ್ರೀದೇವಿಗೆ ಬಹುದಿನಗಳ ವರೆಗೆ ಯಾವ ಸಿನಿಮಾದಲ್ಲಿಯೂ ನಾಯಕಿಯಾಗುವ ಅವಕಾಶ ಸಿಗಲಿಲ್ಲವಂತೆ. ಆರಂಭದಲ್ಲಿ ಶ್ರೀದೇವಿ ಧ್ವನಿಯನ್ನು ಡಬ್ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ ಆಗಿನ ಕಾಲದ ಮತ್ತೊಬ್ಬ ಖ್ಯಾತ ನಟಿ ರೇಖಾ ಅವರ ಆ ಒಂದು ತಪ್ಪು ಶ್ರೀದೇವಿಯನ್ನು ಸೂಪರ್‌ಸ್ಟಾರ್ ಮಾಡಿತು ಎನ್ನಲಾಗುತ್ತದೆ.

ಇದನ್ನೂ ಓದಿ: ನಟ ವಿಜಯ್‌ ಅವರನ್ನು ರಾಜಕೀಯಕ್ಕೆ ಬರುವಂತೆ ಹೇಳಿದ್ದೆ : ಕಮಲ್‌ ಹಾಸನ್‌

‘ಹಿಮ್ಮತ್‌ವಾಲಾ’ ಸಿನಿಮಾ ತಯಾರಕರು ನಟ ಜೀತೇಂದ್ರ ಜೊತೆ ನಟಿಸಲು ಮೊದಲು ರೇಖಾ ಅವರನ್ನು ಸೆಲೆಕ್ಟ್‌ ಮಾಡಿದ್ದರಂತೆ. ಆದರೆ ನಂತರ ರೇಖಾ ಬೇರೆ ಯಾವುದೋ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ ಕಾರಣ ಈ ಚಿತ್ರಕ್ಕೆ ಸಹಿ ಹಾಕಲಿಲ್ಲವಂತೆ. ತುಂಬಾ ಒಳ್ಳೆಯ ಸ್ನೇಹಿತರಾಗಿದ್ದ  ರೇಖಾ ಮತ್ತು ಜೀತೇಂದ್ರ ಒಂದು ದಿನ ಏನೋ ಮಾತನಾಡುತ್ತಿದ್ದರಂತೆ. ಆಗ ನಟಿ ಶ್ರೀದೇವಿಯ ಹೆಸರನ್ನು ಜೀತೇಂದ್ರಗೆ ರೇಖಾ ತಮಾಷೆಯಾಗಿ ಸೂಚಿಸಿದರಂತೆ ಎನ್ನಲಾಗಿದೆ. ಆದರೆ ಅದೇ ನಿಜವಾಯಿತು. ಹಿಮ್ಮತ್‌ವಾಲಾ ಸಿನಿಮಾಗೆ ಜೀತೇಂದ್ರ ಜೊತೆ ಶ್ರೀದೇವಿ ನಾಯಕಿಯಾದರು. 

ಈ ಸಿನಿಮಾ ರಿಲೀಸ್‌ ಆದಾಗ ಸಿನಿಪ್ರಿಯರ ಮನಗೆದ್ದಿತು. ಹಿಮ್ಮತ್‌ವಾಲಾ ಬಾಕ್ಸ್‌ಆಫಿಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತು. ಈ ಸಿನಿಮಾದ ಬಳಿಕ ಶ್ರೀದೇವಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾದರು. ಕ್ರಮೇಣ ಶ್ರೀದೇವಿ ಹಿಂದಿ ಚಿತ್ರರಂಗದ ಮೊದಲ ಲೇಡಿ ಸೂಪರ್‌ಸ್ಟಾರ್ ಎಂಬ ಬಿರುದು ಪಡೆದರು. 

ಇದನ್ನೂ ಓದಿ: ಪ್ರಿಯಾ ಸ್ಟನ್ನಿಂಗ್ ಲುಕ್ ನೋಡಿ..! ನೀನೆಂದರೆ ನನಗೆ ಇಷ್ಟ ಕಣೆ.. ಸಾಂಗ್‌ ನೆನಪಾಯ್ತು.. ಗುರು 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News