ನಟ ವಿಜಯ್‌ ಅವರನ್ನು ರಾಜಕೀಯಕ್ಕೆ ಬರುವಂತೆ ಹೇಳಿದ್ದೆ : ಕಮಲ್‌ ಹಾಸನ್‌

Kamal haasan on Vijay : ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ವಿಜಯ್‌ ರಾಜಕೀಯ ಎಂಟ್ರಿ ಕುರಿತು ಹಲವಾರು ದಿಗ್ಗಜ ನಟರು ತಮ್ಮ ಅಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ.

Written by - Krishna N K | Last Updated : Feb 22, 2024, 11:41 PM IST
  • ಕಾಲಿವುಡ್‌ ಸ್ಟಾರ್‌ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ
  • ಲೋಕಸಭಾ ಚುನಾವಣೆಯಲ್ಲಿ ವಿಜಯ್ ಸ್ವಂತ ಪಕ್ಷ ಟಿವಿಕೆ ಮೂಲಕ ಸ್ಪರ್ಧಿಸಲಿದ್ದಾರೆ
  • ಕಮಲ್ ಹಾಸನ್ ಕೂಡ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶದ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ
ನಟ ವಿಜಯ್‌ ಅವರನ್ನು ರಾಜಕೀಯಕ್ಕೆ ಬರುವಂತೆ ಹೇಳಿದ್ದೆ : ಕಮಲ್‌ ಹಾಸನ್‌ title=

Thalapathy Vijay : ಕಾಲಿವುಡ್‌ ಸ್ಟಾರ್‌ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಫೆ.2 ರಂದು 'ತಮಿಳಗ ವೆಟ್ರಿ ಕಳಗಂ' (TVK) ಎಂಬ ಹೆಸರಿನ ರಾಜಕೀಯ ಪಕ್ಷವನ್ನು ವಿಜಯ್‌ ಘೋಷಿಸಿದ್ದಾರೆ. ಸಧ್ಯ ದಳಪತಿ ರಾಜಕೀಯ ಪ್ರವೇಶ ಕುರಿತು ಸಿನಿರಂಗದ ನಟರು, ರಾಜಕೀಯ ಧುರೀಣರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಹೌದು.. ಮುಂಬರುವ ತಮಿಳುನಾಡು ಲೋಕಸಭಾ ಚುನಾವಣೆಯಲ್ಲಿ ವಿಜಯ್ ಸ್ವಂತ ಪಕ್ಷ ಟಿವಿಕೆ ಮೂಲಕ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ್ ರಾಜಕೀಯ ಪ್ರವೇಶದ ಬಗ್ಗೆ ಅಭಿಮಾನಿಗಳ ಜೊತೆಗೆ ಚಿತ್ರರಂಗ, ರಾಜಕೀಯ ಗಣ್ಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಕೂಡ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶದ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ:ಪ್ರಿಯಾ ಸ್ಟನ್ನಿಂಗ್ ಲುಕ್ ನೋಡಿ..! ನೀನೆಂದರೆ ನನಗೆ ಇಷ್ಟ ಕಣೆ.. ಸಾಂಗ್‌ ನೆನಪಾಯ್ತು.. ಗುರು

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಮಲ್, ವಿಜಯ್‌ ರಾಜಕೀಯ ಭವಿಷ್ಯಕ್ಕೆ ಶುಭವಾಗಲಿ.. ಅವರನ್ನು ರಾಜಕೀಯಕ್ಕೆ ಬರುವಂತೆ ಪ್ರೋತ್ಸಾಹಿಸಿದವರಲ್ಲಿ ನಾನೂ ಒಬ್ಬ. ಈ ಬಗ್ಗೆ ನಮ್ಮಲ್ಲೂ ಚರ್ಚೆ ನಡೆದಿದೆ. ಒಂದು ಕ್ಷೇತ್ರದಲ್ಲಿ ಮುಂದುವರಿಯಲು ಇನ್ನೊಂದು ಕ್ಷೇತ್ರ ಬಿಟ್ಟು ಹೋಗಬಾರದು. ರಾಜಕೀಯ? ಚಿತ್ರ ? ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.

ಇನ್ನು  ಕಮಲ್‌ ಹಾಸನ್‌  ಬಹಳ ದಿನಗಳ ನಂತರ 'ವಿಕ್ರಮ್' ಸಿನಿಮಾದ ಮೂಲಕ ಕಮ್‌ ಬ್ಯಾಕ್‌ ಮಾಡಿದರು. ಸದ್ಯ 'ಇಂಡಿಯನ್ 2', 'ಥಗ್ ಲೈಫ್', KH237 ಚಿತ್ರಗಳ ವಿಶ್ವನಾಯಕ ಬ್ಯುಸಿಯಾಗಿದ್ದಾರೆ. ಜೊತೆಗೆ ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಅಭಿನಯದ 'ಕಲ್ಕಿ2898AD' ನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಮೂಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿರುವ ನಟಿ ಸಂಯುಕ್ತಾ ʼಪ್ರಾಣಾʼಗೆ ಟೆಕಿಯಾನ್‌ ಸಾಥ್‌..!

ಕಳೆದ ವರ್ಷ 'ಲಿಯೋ' ಚಿತ್ರದ ಮೂಲಕ ದೊಡ್ಡ ಯಶಸ್ಸನ್ನು ಪಡೆದ ದಳಪತಿ ವಿಜಯ್, ಪ್ರಸ್ತುತ ವೆಂಕಟ್ ಪ್ರಭು ನಿರ್ದೇಶನದ ಮೇಕೆ ಸಿನಿಮಾದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಈಗಾಗಲೇ  ಬಿಡುಗಡೆಯಾಗಿರುವ ಈ ಸಿನಿಮಾದ ಪೋಸ್ಟರ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೈಮ್ ಟ್ರಾವೆಲ್ ಪರಿಕಲ್ಪನೆಯಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News