Sa ri ga ma pa19: ಯಾರ ಪಾಲಾಗಲಿದೆ ಜೀ ಕನ್ನಡ ವಾಹಿನಿಯ ಸರಿಗಮಪ' ಸೀಸನ್ 19ರ ಗೆಲುವಿನ ಕೀರಿಟ !

Sandalwood: ಜೀ ಕನ್ನಡ' ತನ್ನ ವೀಕ್ಷಕರಿಗೆ ವಿಭಿನ್ನ ರೀತಿಯ ಶೋ, ಧಾರಾವಾಹಿ, ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತಲೇ ನೋಡುಗರಿಗೆ ಹತ್ತಿರವಾಗಿದೆ. ಇದೀಗ 19ನೇ ಸೀಸನ್‌ನ ಅಂತಿಮ ಘಟ್ಟ ತಲುಪಿದೆ.

Written by - Zee Kannada News Desk | Last Updated : Apr 14, 2023, 07:56 PM IST
  • ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಅಂತಿಮ ಘಟ್ಟ
  • ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರ್ಯಾಂಡ್ ಫಿನಾಲೆ
  • ಕೂತೂಹಲ ಮೂಡಿಸಿರುವ ಸರಿಗಮಪ ಗೆಲುವಿನ ಕೀರಿಟ
Sa ri ga ma pa19: ಯಾರ ಪಾಲಾಗಲಿದೆ ಜೀ ಕನ್ನಡ ವಾಹಿನಿಯ ಸರಿಗಮಪ' ಸೀಸನ್ 19ರ ಗೆಲುವಿನ ಕೀರಿಟ ! title=

ಬೆಂಗಳೂರು: ಕನ್ನಡದ ನಂಬರ್ 1 ವಾಹಿನಿ 'ಜೀ ಕನ್ನಡ' ತನ್ನ ವೀಕ್ಷಕರಿಗೆ ವಿಭಿನ್ನ ರೀತಿಯ ಶೋ, ಧಾರಾವಾಹಿ, ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತಲೇ ನೋಡುಗರಿಗೆ ಹತ್ತಿರವಾಗಿದೆ. ಈ ವಾಹಿನಿಯ ಹೆಮ್ಮೆಯ ಸಿಂಗಿಂಗ್ ರಿಯಾಲಿಟಿ ಶೋ 'ಸರಿಗಮಪ' ಈಗಾಗಲೇ 18 ಸೀಸನ್‌ಗಳ ಜೊತೆಗೆ ಚಾಂಪಿಯನ್‌ಶಿಪ್ ಸೀಸನ್ ಕೂಡ ಮಾಡಿದೆ. ಇದೀಗ 19ನೇ ಸೀಸನ್‌ನ ಅಂತಿಮ ಘಟ್ಟ ತಲುಪಿದೆ.

ಈಗಾಗಲೇ ಯಶಸ್ವಿ 47 ಸಂಚಿಕೆಗಳನ್ನ ಪೂರೈಸಿರುವ 'ಸರಿಗಮಪ' ಸೀಸನ್ 19ರ ಗ್ರಾಂಡ್ ಫಿನಾಲೆ ಸಂಚಿಕೆಗಳು ಇದೇ ಶನಿವಾರ ಮತ್ತು ಭಾನುವಾರ ಸಂಜೆ 6.30 ರಿಂದ ಪ್ರಸಾರವಾಗಲಿದೆ. 

ಇದನ್ನೂ ಓದಿ: Kantara Movie  : ಕುಡ್ಲ ಜನರಿಗೆ ಕಾಂತಾರ ಸಿನಿಮಾ ತಂಡದಿಂದ ಗುಡ್‌ ನ್ಯೂಸ್‌! 

ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರ್ಯಾಂಡ್ ಫಿನಾಲೆ  ಯಶಸ್ವಿಯಾಗಿ ಜರುಗಿತು.  ಅಷ್ಟೇ ಅಲ್ಲದೆ ಈ ಅದ್ಧೂರಿ  ಸ್ವರ ಸಮರದಲ್ಲಿ ಗೆಲುವಿನ ಕಿರೀಟ ಯಾರ ಮುಡಿಗೇರಲಿದೆ ಎಂಬ ಕೂತೂಹಲ ಮೂಡಿಸಿದೆ. 

ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿರುವ ಸರಿಗಮಪ ಎಂದಿನಂತೆ  ಈ ಬಾರಿಯೂ ಕರ್ನಾಟಕದ ಮೂಲೆಮೂಲೆಯಿಂದ ವಿವಿಧ ಪ್ರತಿಭೆಗಳನ್ನು ಆರಿಸಿ ತಂದು ಕನ್ನಡಿಗರಿಗೆ ಪರಿಚಯಿಸಿ ಸಾರ್ಥಕತೆ ಗಳಿಸಿದೆ. 

ಇದನ್ನೂ ಓದಿ: Kabzaa 2: ತಲೆಗೆ ಹುಳಬಿಟ್ಟ ಕಬ್ಜ 2 ಪೋಸ್ಟರ್.. ಖಾಲಿ ಕುರ್ಚಿಗೆ ಒಡೆಯನಾರು?

ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಮತ್ತು ಮಹಾಗುರುಗಳಾದ ಹಂಸಲೇಖ ಅವರು ಈ ಕಾರ್ಯಕ್ರಮದ ಯಶಸ್ಸಿನ ರೂವಾರಿ ಎಂದು ಹೇಳಿದರೂ ತಪ್ಪಾಗಲಾರದು. ನಾಡಿನ ಹೆಸರಾಂತ ಗಾಯಕ, ಗಾಯಕಿಯರು ತೀರ್ಪುಗಾರರ ಜೊತೆ ಮೆಂಟರ್‌ಗಳಾಗಿ ತಮ್ಮ ತಂಡದ ಪ್ರತಿಯೊಬ್ಬ ಸ್ಪರ್ಧಿಯನ್ನೂ ತಿದ್ದಿ ತೀಡಿ, ಅವರಲ್ಲಿರುವ ವಿಶೇಷ ಪ್ರತಿಭೆಯನ್ನು  ವೇದಿಕೆಯ ಮೇಲೆ ಪ್ರಸ್ತುತಪಡಿಸುವಲ್ಲಿ ಶ್ರಮವಹಿಸಿದ್ದಾರೆ. ನಿರೂಪಕಿ ಅನುಶ್ರೀ ಅವರು ಸರಿಗಮಪ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದಾರೆ . 

ಅಂತಿಮ ಟಾಪ್ 6 ಸ್ಪರ್ಧಿಗಳಾಗಿ ಮಂಗಳೂರಿನ ತನುಶ್ರೀ, ಬೆಂಗಳೂರಿನ ಕುಷಿಕ್, ಮೈಸೂರಿನ ಗುರುಪ್ರಸಾದ್, ಉಡುಪಿಯ ಶಿವಾನಿ ನವೀನ್ ಕೊಪ್ಪ, ಸೊಲ್ಲಾಪುರದ ರೇವಣಸಿದ್ಧ ಮತ್ತು ಕುಶಾಲನಗರದ ಪ್ರಗತಿ ಬಡಿಗೇರ್ ಇದ್ದು ಸಂಗೀತ ಹಣಾಹಣಿಯಲ್ಲಿ ಸರಿಗಮಪ ಗೆಲುವಿನ ಕೀರಿಟ ಯಾರ ಪಾಲಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ. 

  ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News