Kabzaa 2: ತಲೆಗೆ ಹುಳಬಿಟ್ಟ ಕಬ್ಜ 2 ಪೋಸ್ಟರ್.. ಖಾಲಿ ಕುರ್ಚಿಗೆ ಒಡೆಯನಾರು?

Kabzaa 2 Poster : ಕಬ್ಜ 2 ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿದ್ದು, ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಉಪೇಂದ್ರ ಜೊತೆಯಾಗಿ ಶ್ರೀಯಾ ಶರಣ್‌ ನಟಿಸಿದ್ದು, ಕಿಚ್ಚ ಸುದೀಪ್ ಮತ್ತು ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.  

Written by - Chetana Devarmani | Last Updated : Apr 14, 2023, 07:13 PM IST
  • ಕಬ್ಜ 2 ಸಿನಿಮಾದ ಪೋಸ್ಟರ್‌ ರಿಲೀಸ್‌
  • ತಲೆಗೆ ಹುಳಬಿಟ್ಟ ಕಬ್ಜ 2 ಪೋಸ್ಟರ್
  • ಐದು ಭಾಷೆಗಳಲ್ಲಿ ಪೋಸ್ಟರ್ ಬಿಡುಗಡೆ
Kabzaa 2: ತಲೆಗೆ ಹುಳಬಿಟ್ಟ ಕಬ್ಜ 2 ಪೋಸ್ಟರ್.. ಖಾಲಿ ಕುರ್ಚಿಗೆ ಒಡೆಯನಾರು?  title=
Kabzaa 2

Kabzaa 2 Movie Poster : ಪ್ಯಾನ್ ಇಂಡಿಯನ್ ಚಲನಚಿತ್ರ ಕಬ್ಜದ ಮೊದಲ ಭಾಗ ರಿಲೀಸ್‌ ಆಗಿ ಬಾಕ್ಸಾಫೀಸ್‌ನ್ನು ಕೊಳ್ಳೆ ಹೊಡೆಯಿತು. ಉಪೇಂದ್ರ ಅಭಿನಯದ ಆರ್.ಚಂದ್ರು ಆಕ್ಷನ್‌ ಕಟ್‌ ಹೇಳಿರುವ ಕಬ್ಜ ಸಿನಿಮಾ ಸೂಪರ್‌ ಹಿಟ್‌ ಆಯಿತು. ಕಬ್ಜ ಎರಡು ಭಾಗಗಳಲ್ಲಿ ರಿಲೀಸ್‌ ಆಗಲಿದೆ ಎಂದು ಆರ್‌. ಚಂದ್ರ ಬಹಳ ಹಿಂದೆಯೇ ತಿಳಿಸಿದ್ದರು. ಇದೀಗ ಕಬ್ಜ 2 ಸಿನಿಮಾದ ಪೋಸ್ಟರ್ ರಿಲೀಸ್‌ ಮಾಡಿದ್ದಾರೆ. ಕಬ್ಜಾ ಸಿನಿಮಾದಂತೆಯೇ ಕಬ್ಜ 2 ಕೂಡ ಸಾಕಷ್ಟು ಕುತೂಹಲ ಕೆರಳಿಸಿದೆ.  ಕಬ್ಜ 2 ಸಹ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ಐದು ಭಾಷೆಗಳ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ : Taapsee Pannu Bikini Photos: ಬಿಕಿನಿಯಲ್ಲಿ ತಾಪ್ಸಿ ಪನ್ನು ಹಾಟ್‌ ಪೋಸ್‌!

ಕಬ್ಜ 2 ಪೋಸ್ಟರ್‌ ಸಿನಿಪ್ರಿಯರ ತಲೆಗೆ ಹುಳಬಿಟ್ಟಿದೆ. ಇತ್ತೀಚೆಗೆ ಬಿಡುಗಡೆಯಾದ ಕಬ್ಜ 2 ಪೋಸ್ಟರ್‌ ಗನ್ ಮತ್ತು ಕುರ್ಚಿಯನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ಉಪೇಂದ್ರ ಜೊತೆಯಾಗಿ ಶ್ರೀಯಾ ಶರಣ್‌ ನಟಿಸಿದ್ದಾರೆ. ಕಿಚ್ಚ ಸುದೀಪ್ ಮತ್ತು ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಬ್ಜ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಗೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ತಾರಾಗಣದಲ್ಲಿ ಮುರಳಿ ಶರ್ಮಾ, ಸುಧಾ, ಜಾನ್ ಕೊಕ್ಕೆನ್ ಮತ್ತು ಅನೂಪ್ ರೇವಣ್ಣ ಪ್ರಮುಖ ಪಾತ್ರಗಳಲ್ಲಿದ್ದಾರೆ.

 

 

ಮಾರ್ಚ್ 17, 2023 ರಂದು ಬಿಡುಗಡೆಯಾದ ಭಾರತೀಯ ಕನ್ನಡ ಭಾಷೆಯ ಚಲನಚಿತ್ರ ಕಬ್ಜ, ಈಗ ಮುಂದಿನ ಭಾಗಕ್ಕೆ ಸಿದ್ಧವಾಗಿದೆ. ಕಬ್ಜ 2 ಪೋಸ್ಟರ್‌ನಲ್ಲಿರುವ ಕುರ್ಚಿ ಮತ್ತು ನೋಡುಗರ ತಲೆಗೆ ಹುಳ ಬಿಟ್ಟಿದೆ. ಅಂಡರ್‌ವಲ್ಡ್‌ ಕತೆ ಹೇಳುವ ಕಬ್ಜ ಸಿನಿಮಾದ ಎರಡನೇ ಭಾಗ ರೆಡಿಯಾಗುತ್ತಿದ್ದು, ಜನರ ಕುತೂಹಲ ಕೆರಳಿಸಿದೆ.  

ಇದನ್ನೂ ಓದಿ : Honey Rose : ಯಾವ ದೇವ ಶಿಲ್ಪಿ ಕಡೆದನೋ ನಿನ್ನ... ಕವಿ ಕಾಳಿದಾಸ ಕಲ್ಪನೆಯೋ ಚಿನ್ನ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News