Beetroot Side Effects : ಈ ಸಮಸ್ಯೆ ಇರುವವರು ತಪ್ಪಿಯೂ ತಿನ್ನಬಾರದು ಬೀಟ್ ರೂಟ್

ಲೋ  ಬಿಪಿ ಇರುವ ರೋಗಿಗಳು ಬೀಟ್ರೂಟ್ ಸೇವಿಸಬಾರದು. ಅಧಿಕ ರಕ್ತದೊತ್ತಡವಿದ್ದರೆ ಇದನ್ನು ತಿನ್ನಬಹುದು. ಆದರೆ, ಕಡಿಮೆ ರಕ್ತದೊತ್ತಡದ ಸಮಯದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ಬೀಟ್ರೂಟ್ ಸೇವಿಸಬಾರದು.   

Written by - Ranjitha R K | Last Updated : Nov 11, 2021, 01:22 PM IST
  • ಬೀಟ್ರೂಟ್ ತಿನ್ನುವುದು ಪ್ರಯೋಜನಕಾರಿ
  • ಇದು ರಕ್ತದ ಕೊರತೆಯನ್ನು ನಿವಾರಿಸುತ್ತದೆ.
  • ಆದರೆ ಕೆಲವು ಕಾಯಿಲೆಗಳ ಸಂದರ್ಭದಲ್ಲಿ ಹಾನಿಯನ್ನುಂಟುಮಾಡುತ್ತದೆ.
Beetroot Side Effects : ಈ ಸಮಸ್ಯೆ ಇರುವವರು ತಪ್ಪಿಯೂ ತಿನ್ನಬಾರದು ಬೀಟ್ ರೂಟ್  title=
ಬೀಟ್ರೂಟ್ ತಿನ್ನುವುದು ಪ್ರಯೋಜನಕಾರಿ (file photo)

ನವದೆಹಲಿ : ಬೀಟ್ರೂಟ್ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿ (Benefits of beetroot). ಹೆಚ್ಚಿನ ಜನರು ಇದನ್ನು ಪಲ್ಯ, ಸಾಂಬಾರ್ ,  ಸಲಾಡ್‌ಗಳು ಅಥವಾ ಜ್ಯೂಸ್‌ಗಳ ರೂಪದಲ್ಲಿ ಸೇವಿಸುತ್ತಾರೆ. ಬೀಟ್ರೂಟ್ ದೇಹದಲ್ಲಿನ ರಕ್ತದ ಕೊರತೆಯನ್ನು ನಿವಾರಿಸುತ್ತದೆ. ಮಾತ್ರವಲ್ಲ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಉಪಯುಕ್ತವಾಗಿದೆ.  ಆದರೆ ಕೆಲವೊಂದು ಸಮಸ್ಯೆಗಳಿದ್ದಾಗ, ಬೀಟ್ ರೂಟ್ ಅನ್ನು ತಪ್ಪಿಯೂ ತಿನ್ನಲು ಹೋಗಬಾರದು. ಇದು ಆರೋಗ್ಯಕ್ಕೆ ಹಾನಿ ಉಂಟು (Sideeffects of beetroot) ಮಾಡುತ್ತದೆ.  

ಕಡಿಮೆ ರಕ್ತದೊತ್ತಡ ಇದ್ದರೆ ತಿನ್ನಲೇ ಬಾರದು : 
ಲೋ  ಬಿಪಿ ಇರುವ ರೋಗಿಗಳು ಬೀಟ್ರೂಟ್ (beetroot) ಸೇವಿಸಬಾರದು. ಅಧಿಕ ರಕ್ತದೊತ್ತಡವಿದ್ದರೆ ಇದನ್ನು ತಿನ್ನಬಹುದು. ಆದರೆ, ಕಡಿಮೆ ರಕ್ತದೊತ್ತಡದ ಸಮಯದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ಬೀಟ್ರೂಟ್ ಸೇವಿಸಬಾರದು. ಕಡಿಮೆ ರಕ್ತದೊತ್ತಡದ ಸಮಸ್ಯೆ ಇದ್ದವರು  ಬೀಟ್‌ರೂಟ್ ತಿಂದರೆ ರಕ್ತದೊತ್ತಡ (Blood pressure) ಮತ್ತಷ್ಟು ಕಡಿಮೆಯಾಗಬಹುದು. 

ಇದನ್ನೂ ಓದಿ : Bad Food For Kidney : ಈ 5 ಆಹಾರಗಳು ನಿಮ್ಮ ಕಿಡ್ನಿ ಹಾಳುಮಾಡುತ್ತವೆ! ಇವುಗಳನ್ನ ಮಿತಿವಾಗಿ ಸೇವಿಸಿ

ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿದ್ದರೆ : 
ಕಿಡ್ನಿ ಸ್ಟೋನ್  (Kidney stone) ಸಮಸ್ಯೆ ಇದ್ದವರು ಬೀಟ್‌ರೂಟ್ ತಿಂದರೂ ತೊಂದರೆಯಾಗುತ್ತದೆ. ಇದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಬೀಟ್ರೂಟ್ ಕಬ್ಬಿಣದ ಕೊರತೆಯನ್ನು ಪೂರೈಸುತ್ತದೆ. ಆದರೆ ಇದು ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಅನ್ನು ಹೊಂದಿರುತ್ತದೆ. ಹೆಚ್ಚು ಆಕ್ಸಲೇಟ್ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಹೆಚ್ಚಾಗುತ್ತದೆ. ಈಗಾಗಲೇ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಬೀಟ್ ರೂಟ್ ಸೇವನೆಯಿಂದ ದೂರವಿರುವುದೇ ಉತ್ತಮ. 

ಅಲರ್ಜಿ :  
ಬೀಟ್ರೂಟ್ ವಿಟಮಿನ್ ಗಳು, ಆಂಟಿ ಆಕ್ಸಿಡೆಂಟ್, ಫೈಟೊನ್ಯೂಟ್ರಿಯೆಂಟ್ಗಳು, ಪಾಲಿಫಿನಾಲ್ ಗಳು ಮತ್ತು ಫೈಬರ್ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಆದರೆ ಇದು ಕೆಲವು ಜನರಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಇದು ಚರ್ಮದ ಸಮಸ್ಯೆಗೆ ಕಾರಣವಾಗಬಹುದು. ಬೀಟ್ರೂಟ್ ತಿಂದ ನಂತರ ನೀವು ಯಾವುದೇ ರೀತಿಯ ಅಲರ್ಜಿ ಮತ್ತು ಚರ್ಮದ ದದ್ದುಗಳು ಕಂಡರೆ,ತಕ್ಷಣ ಬೀಟ್ ರೂಟ್ ಸಿನ್ನುವುದನ್ನು ನಿಲ್ಲಿಸಿ ವೈದ್ಯರನ್ನು  ಸಂಪರ್ಕಿಸಿ. 

ಇದನ್ನೂ ಓದಿ : Winter Health Tips: ಚಳಿಗಾಲದಲ್ಲಿ ಫಿಟ್ ಆಗಿರಲು ಇಲ್ಲಿದೆ ಸುಲಭ ಟಿಪ್ಸ್

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು :
ಬೀಟ್ರೂಟ್ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ( blood sugar) ಹೆಚ್ಚಿಸಬಹುದು. ಮಧುಮೇಹದ ಸಮಸ್ಯೆ ಇರುವವರು ಬೀಟ್ ರೂಟ್ ಅನ್ನು ತಪ್ಪಿಯೂ ತಿನ್ನಬಾರದು.  ಇದರ ಗ್ಲೈಸೆಮಿಕ್ ಸೂಚ್ಯಂಕವು ಅಧಿಕವಾಗಿದೆ, ಇದರಿಂದ ಹಾನಿ ಉಂಟಾಗುತ್ತದೆ.  

ಯಕೃತ್ತಿನ ಹಾನಿ :
ಬೀಟ್ರೂಟಿನ ಅತಿಯಾದ ಸೇವನೆಯು ಯಕೃತ್ತನ್ನು (Beetroot side effects) ಹಾನಿಗೊಳಿಸುತ್ತದೆ. ಬೀಟ್ರೂಟ್ ಹೆಚ್ಚಿನ ಪ್ರಮಾಣದ ತಾಮ್ರ, ಕಬ್ಬಿಣ, ರಂಜಕ, ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. ಇದು ದೇಹಕ್ಕೆ ಪ್ರಯೋಜನಕಾರಿಯಾಗಿದೆ, ಆದರೆ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಸೇವಿಸುವುದರಿಂದ, ಈ ಎಲ್ಲಾ ವಸ್ತುಗಳು ಯಕೃತ್ತಿನಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದು ಯಕೃತ್ತನ್ನು ಹಾನಿಗೊಳಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News