Winter Health Tips: ಚಳಿಗಾಲದಲ್ಲಿ ಫಿಟ್ ಆಗಿರಲು ಇಲ್ಲಿದೆ ಸುಲಭ ಟಿಪ್ಸ್

Winter Health Tips: ಚಳಿಗಾಲ ಪ್ರಾರಂಭವಾದ ತಕ್ಷಣ, ಹೆಚ್ಚಿನ ಜನರಿಗೆ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ವಿಷಯಗಳನ್ನು ಕಾಳಜಿ ವಹಿಸುವುದು ಮತ್ತು ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ.

Written by - Yashaswini V | Last Updated : Nov 11, 2021, 11:37 AM IST
  • ಚಳಿಗಾಲದಲ್ಲಿ ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಿ
  • ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
  • ದಿನವಿಡೀ ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ
Winter Health Tips: ಚಳಿಗಾಲದಲ್ಲಿ ಫಿಟ್ ಆಗಿರಲು ಇಲ್ಲಿದೆ ಸುಲಭ ಟಿಪ್ಸ್ title=
Winter Health Tips

Winter Health Tips: ಚಳಿಗಾಲವು ಪ್ರಾರಂಭವಾದ ತಕ್ಷಣ, ಹೆಚ್ಚಿನ ಜನರಿಗೆ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ವಿಷಯಗಳ ಬಗ್ಗೆ ಕಾಳಜಿವಹಿಸುವುದು ಮತ್ತು ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಬಹದು.

ಆರೋಗ್ಯಕರ ಆಹಾರ ಸೇವಿಸಿ:
ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಿ. ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಚರ್ಮದ ಆರೈಕೆ :
ಚಳಿಗಾಲದಲ್ಲಿ ಒಣ ತ್ವಚೆಯ (Dry Skin) ಸಮಸ್ಯೆ, ತುಟಿಗಳು ಮತ್ತು ಕಾಲುಗಳು ಬಿರುಕು ಬಿಡುವುದು ಮತ್ತು ತ್ವಚೆಯಲ್ಲಿ ತುರಿಕೆ ಉಂಟಾಗಬಹುದು. ಆದ್ದರಿಂದ ನೀವು ತ್ವಚೆಯ ಆರೈಕೆಗೆ ವಿಶೇಷ ಗಮನ ನೀಡುವುದು ಮುಖ್ಯ. ಇದಕ್ಕಾಗಿ ಚಳಿಗಾಲದಲ್ಲಿ ತಪ್ಪದೆ ಮಾಯಿಶ್ಚರೈಸರ್ ಮತ್ತು ಸನ್ ಪ್ರೊಟೆಕ್ಷನ್ ಕ್ರೀಮ್ ಬಳಸಿ. ಈ ಋತುವಿನಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ಆಗಾಗ್ಗೆ ಕೈಗಳನ್ನು ತೊಳೆಯಿರಿ. ಇದು ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗಗಳನ್ನು ತಡೆಯುತ್ತದೆ.

ಇದನ್ನೂ ಓದಿ- Garlic Benefits: ಮಲಗುವ ಮುನ್ನ ದಿಂಬಿನ ಕೆಳಗೆ ಬೆಳ್ಳುಳ್ಳಿ ಎಸಳನ್ನು ಇಡುವುದರಿಂದ ಸಿಗುತ್ತೆ ಈ ಪ್ರಯೋಜನ

ಸಾಕಷ್ಟು ನೀರು ಕುಡಿಯಿರಿ:
ಹಲವರು ಚಳಿಗಾಲದಲ್ಲಿ ಕಡಿಮೆ ನೀರು (Winter Health Tips) ಕುಡಿಯುತ್ತಾರೆ. ಆದರೆ, ಈ ಸಮಯದಲ್ಲಿ ದಿನವಿಡೀ ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ದೇಹದ ಜೀವಕೋಶಗಳಿಗೆ ಪೋಷಕಾಂಶಗಳನ್ನು ಸಾಗಿಸಲು ಮತ್ತು ದೇಹದಲ್ಲಿನ ದ್ರವಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು ಸಹ ಅಗತ್ಯವಾಗಿದೆ. 

ಸಾಕಷ್ಟು ನಿದ್ರೆ ಮಾಡಿ: 
ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಾಕಷ್ಟು ನಿದ್ರೆ (Sleep) ಪಡೆಯುವುದು ಸಹ ಅಗತ್ಯವಾಗಿದೆ. ನೀವು 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ, ಹಲವಾರು ರೀತಿಯ ಕಾಯಿಲೆಗಳು ನಿಮಗೆ ಸಮಸ್ಯೆ ಉಂಟುಮಾಡುತ್ತದೆ.

ನಿಯಮಿತ ಆರೋಗ್ಯ ತಪಾಸಣೆ :
ಚಳಿಗಾಲದಲ್ಲಿ (Winter) ಸಾಮಾನ್ಯವಾಗಿ ಅಸ್ತಮಾ, ಜ್ವರ, ಗಂಟಲು ನೋವು, ಕೀಲು ನೋವು ಸಮಸ್ಯೆ ಕಾಡಬಹುದು. ಅದೇ ಸಮಯದಲ್ಲಿ, ಈ ಋತುವಿನಲ್ಲಿ ಹೃದಯಾಘಾತದ ಅಪಾಯವೂ ಹೆಚ್ಚಾಗುತ್ತದೆ. ಯಾವುದೇ ಗಂಭೀರ ಸಮಸ್ಯೆಯಾಗದಂತೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. 

ಇದನ್ನೂ ಓದಿ- Leaky Bladder: ಮೂತ್ರ ಸೋರಿಕೆಯ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಬೇಡಿ, ಇದು ಗಂಭೀರ ಕಾಯಿಲೆಯಾಗಿರಬಹುದು

ಧೂಮಪಾನ ತ್ಯಜಿಸುವುದು ಒಳ್ಳೆಯದು: 
ಧೂಮಪಾನವು ನಿಮಗೆ ಉಸಿರಾಟದ ತೊಂದರೆಗಳನ್ನು ಉಂಟುಮಾಡಬಹುದು. ಚಳಿಗಾಲದಲ್ಲಿ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಧೂಮಪಾನದಿಂದ ದೂರವಿದ್ದರೆ ಅಥವಾ ತ್ಯಜಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.

ವಿಟಮಿನ್ ಡಿ:
ದೇಹಕ್ಕೆ ಸಾಕಷ್ಟು ಪ್ರಮಾಣದ ವಿಟಮಿನ್ ಡಿ (Vitamin D) ಅತ್ಯಗತ್ಯ. ವಿಟಮಿನ್ ಡಿ ರೋಗನಿರೋಧಕ ಶಕ್ತಿ ಮತ್ತು ಮನಸ್ಥಿತಿ ಎರಡನ್ನೂ ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳಿ, ಇದು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ. ಇದರಿಂದ ದೇಹದಲ್ಲಿ ವಿಟಮಿನ್ ಡಿ ಕೊರತೆ ಆಗುವುದಿಲ್ಲ.  

ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ: 
ನಿಯಮಿತ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ ಕೂಡ ಆರೋಗ್ಯಕ್ಕೆ ಬಹಳ ಮುಖ್ಯ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನೀವು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News