Men Health : ಬೆಳ್ಳುಳ್ಳಿಯನ್ನು ರಾತ್ರಿ ಮಲಗುವ ಮುನ್ನ ತಿಂದ್ರೆ ಪುರುಷರಿಗೆ ಎಷ್ಟೆಲ್ಲಾ ಲಾಭ ಗೊತ್ತಾ?

Garlic Benefits : ಬೆಳ್ಳುಳ್ಳಿ ಪ್ರಾಚೀನ ಕಾಲದಿಂದಲೂ ಪ್ರಾಮುಖ್ಯತೆ ಪಡೆದಿದೆ. ಇದನ್ನು ವಿವಿಧ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಈಗ ಬೆಳ್ಳುಳ್ಳಿಯನ್ನು ಅತ್ಯಂತ ಜನಪ್ರಿಯ ಮಸಾಲೆ ಎಂದು ಪರಿಗಣಿಸಲಾಗಿದೆ. ಕೇವಲ ಅಡುಗೆ ಮಾತ್ರವಲ್ಲ ಬೆಳ್ಳುಳ್ಳಿಯನ್ನು ಔಷಧದಲ್ಲಿ ಸಹ ಬಳಸಲಾಗುತ್ತದೆ. ಮಲಗುವ ಮುನ್ನ ಬೆಳ್ಳುಳ್ಳಿ ಎಸಳು ತಿಂದರೆ ಆರೋಗ್ಯ ಉತ್ತಮವಾಗಿರುತ್ತದೆ.   

Written by - Chetana Devarmani | Last Updated : Nov 16, 2022, 05:19 PM IST
  • ಬೆಳ್ಳುಳ್ಳಿ ಪ್ರಾಚೀನ ಕಾಲದಿಂದಲೂ ಪ್ರಾಮುಖ್ಯತೆ ಪಡೆದಿದೆ
  • ಬೆಳ್ಳುಳ್ಳಿಯನ್ನು ರಾತ್ರಿ ಮಲಗುವ ಮುನ್ನ ತಿನ್ನಬೇಕು
  • ಇದು ಪುರುಷರ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ
Men Health : ಬೆಳ್ಳುಳ್ಳಿಯನ್ನು ರಾತ್ರಿ ಮಲಗುವ ಮುನ್ನ ತಿಂದ್ರೆ ಪುರುಷರಿಗೆ ಎಷ್ಟೆಲ್ಲಾ ಲಾಭ ಗೊತ್ತಾ? title=
ಬೆಳ್ಳುಳ್ಳಿ

Garlic Benefits : ಬೆಳ್ಳುಳ್ಳಿ ನೈಸರ್ಗಿಕ ಉತ್ಪನ್ನವಾಗಿದ್ದು, ದೇಹವು ವಿವಿಧ ರೋಗಗಳ ವಿರುದ್ಧ ಹೋರಾಡಲು ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ದಿನಕ್ಕೆ 1-2 ಎಸಳು ಬೆಳ್ಳುಳ್ಳಿಯನ್ನು ತಿನ್ನಬೇಕು. ಅತಿಯಾಗಿ ಸೇವಸಿದರೆ ಇದು ದೈಹಿಕ ಸ್ಥಿತಿಯ ಮೇಲೇ ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ. ಬೆಳ್ಳುಳ್ಳಿಯನ್ನು ತಿನ್ನಲು ಉತ್ತಮ ಸಮಯವೆಂದರೆ ಮಲಗುವ ಮುನ್ನ ಅಥವಾ ಬೆಳಿಗ್ಗೆ ಹೊಟ್ಟೆಯಲ್ಲಿ ಸೇವಿಸಬೇಕು. ಬ್ಯಾಕ್ಟೀರಿಯಾಗಳು ಹೆಚ್ಚು ದುರ್ಬಲವಾದ ಈ ಸಮಯದಲ್ಲಿ ಬೆಳ್ಳುಳ್ಳಿ ತಿನ್ನುವುದು ಪ್ರಯೋಜನಕಾರಿ. ಆದ್ದರಿಂದ ಅವುಗಳನ್ನು ನಾಶಮಾಡಲು ಸುಲಭವಾಗಿದೆ. ನಿಮಗೆ ಹೊಟ್ಟೆಯ ಸಮಸ್ಯೆಗಳಿದ್ದರೆ, ನೀವು ಬೆಳ್ಳುಳ್ಳಿಯನ್ನು ತಿನ್ನಬಾರದು.

ಇದನ್ನೂ ಓದಿ : ನೀವು ಗೊರಕೆ ಹೊಡೆಯುತ್ತೀರಾ? ಹಾಗಿದ್ರೆ, ನಿಮ್ಮ ಸಮಸ್ಯೆಗಿಲ್ಲಿದೆ ಪರಿಹಾರ!

ಪುರುಷರಿಗೆ ಬೆಳ್ಳುಳ್ಳಿಯ ಪ್ರಯೋಜನಗಳು : 

ಬೆಳ್ಳುಳ್ಳಿ ಪುರುಷರ ದೇಹದ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ, ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ, ಸಾಮರ್ಥ್ಯವನ್ನು ಸಕ್ರಿಯಗೊಳಿಸುತ್ತದೆ ಮತ್ತು ಪ್ರೊಸ್ಟಟೈಟಿಸ್‌ನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಬೆಳ್ಳುಳ್ಳಿ ಚಯಾಪಚಯವನ್ನು ಸಕ್ರಿಯಗೊಳಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಇದು ಪುರುಷರ ಅಂಗಕ್ಕೆ ಹೆಚ್ಚಿದ ರಕ್ತದ ಹರಿವಿಗೆ ಸಹಾಯ ಮಾಡುತ್ತದೆ. ಇದು ರಕ್ತನಾಳಗಳನ್ನು ಶುದ್ಧೀಕರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಪ್ಲೇಕ್‌ಗಳನ್ನು ಕರಗಿಸುತ್ತದೆ.

ಬೊಜ್ಜನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಸೇವನೆ ಸಹಕಾರಿ. ಬೆಳ್ಳುಳ್ಳಿಯ ನಿಯಮಿತ ಬಳಕೆಯೊಂದಿಗೆ ದೇಹದ ತೂಕದಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯ ತೊಂದರೆಗಳು ಪುರುಷರ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ನೀವು ತಾಜಾ ಬೆಳ್ಳುಳ್ಳಿಯ 3-4  ಎಸಳನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ  ಸುಧಾರಿಸುತ್ತದೆ. ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳನ್ನು ಪ್ರತಿಬಂಧಿಸುತ್ತದೆ. 

ಇದನ್ನೂ ಓದಿ : ಪುರುಷರು ಚಳಿಗಾಲದಲ್ಲಿ ಇದನ್ನು ಸೇವಿಸಿದರೆ ಸಿಗುತ್ತೆ ಅದ್ಭುತ ಲಾಭ!

(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News