ಕಿಡ್ನಿ ಸ್ಟೋನ್ ಇದ್ದವರು ನಿತ್ಯ ಈ ಹಣ್ಣನ್ನು ತಿಂದರೆ ಔಷಧಿಯ ಅಗತ್ಯವೇ ಇರುವುದಿಲ್ಲ

ಕಿಡ್ನಿ ಸ್ಟೋನ್ ಗೆ ಪ್ರಮುಖ ಕಾರಣವೆಂದರೆ  ನಾವು ಅನುಸರಿಸುವ ಜೀವನಶೈಲಿ ಮತ್ತು ಆಹಾರ ಪದ್ಧತಿ. ಇದರಿಂದಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳಲು  ಕಾರಣವಾಗುವ ಖನಿಜಗಳು ರಕ್ತದಲ್ಲಿ ಹೆಚ್ಚುತ್ತವೆ. 

Written by - Ranjitha R K | Last Updated : Mar 14, 2023, 10:04 AM IST
  • ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಎನ್ನುವುದು ಸಾಮಾನ್ಯ ಸಮಸ್ಯೆ.
  • ಹೆಚ್ಚಿನ ಜನರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.
  • ಜೀವನಶೈಲಿ ಮತ್ತು ಆಹಾರ ಪದ್ಧತಿ ಕಿಡ್ನಿ ಸ್ಟೋನ್ ಗೆ ಕಾರಣ
ಕಿಡ್ನಿ ಸ್ಟೋನ್ ಇದ್ದವರು ನಿತ್ಯ ಈ ಹಣ್ಣನ್ನು ತಿಂದರೆ ಔಷಧಿಯ ಅಗತ್ಯವೇ ಇರುವುದಿಲ್ಲ   title=

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಎನ್ನುವುದು ಸಾಮಾನ್ಯ ಸಮಸ್ಯೆ. ಹೆಚ್ಚಿನ ಜನರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕಿಡ್ನಿ ಸ್ಟೋನ್ ಗೆ ಪ್ರಮುಖ ಕಾರಣವೆಂದರೆ ನಾವು ಅನುಸರಿಸುವ ಜೀವನಶೈಲಿ ಮತ್ತು ಆಹಾರ ಪದ್ಧತಿ. ಇದರಿಂದಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳಲು  ಕಾರಣವಾಗುವ ಖನಿಜಗಳು ರಕ್ತದಲ್ಲಿ ಹೆಚ್ಚುತ್ತವೆ. ಅದಕ್ಕಾಗಿಯೇ ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಅಥವಾ ಹೆಚ್ಚಿನ ಪ್ರಮಾಣದ ಪ್ರೋಟೀನ್ ಹೊಂದಿರುವ ಈ ಪದಾರ್ಥಗಳನ್ನು  ತಿನ್ನಬಾರದು ಎಂದು ಹೇಳಲಾಗುತ್ತದೆ. ಆದರೆ, ಕೆಲವು ಪದಾರ್ಥಗಳನ್ನು ಸೇವಿಸುವ ಮೂಲಕ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ನಿವಾರಿಸಬಹುದು. ಹೌದು, ಕೆಲವು ಹಣ್ಣುಗಳನ್ನು ನಿತ್ಯ ಸೇವಿಸುವ ಮೂಲಕ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. 

ಕಿಡ್ನಿ ಸ್ಟೋನ್ ರೋಗಿಗಳು ಈ ಹಣ್ಣುಗಳನ್ನು ಸೇವಿಸಬೇಕು :
ನೀರಿನಂಶವಿರುವ ಹಣ್ಣುಗಳನ್ನು ತಿನ್ನಬೇಕು :
ಎಳನೀರು, ಕಲ್ಲಂಗಡಿ ಸೇರಿದಂತೆ ನೀರಿನಿಂದ ಸಮೃದ್ಧವಾಗಿರುವ ಹಣ್ಣುಗಳ ಸೇವನೆಯಿಂದ ಮೂತ್ರಪಿಂಡದಲ್ಲಿರುವ ಕಲ್ಲನ್ನು ಹೋಗಲಾಡಿಸಬಹುದು.  ಇವೆಲ್ಲವೂ  ಸ್ಟೋನ್ ಅನ್ನು ಕರಗಿಸುವ ಕೆಲಸ ಮಾಡುತ್ತವೆ. ಈ ಕಾರಣದಿಂದ ನಿಮ್ಮ ಆಹಾರದಲ್ಲಿ ಗರಿಷ್ಠ ನೀರಿನ ಅಂಶವಿರುವ ಹಣ್ಣುಗಳನ್ನು ಸೇರಿಸಬೇಕು.

ಇದನ್ನೂ ಓದಿ : Curry Leaves: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಈ 5 ಕಾಯಿಲೆ ಬರುವುದಿಲ್ಲ
 
ಸಿಟ್ರಸ್ ಹಣ್ಣುಗಳು : 
ಸಿಟ್ರಸ್ ಹಣ್ಣುಗಳು ವಿಟಮಿನ್ ಸಿಯಲ್ಲಿ ಸಮೃದ್ಧವಾಗಿವೆ. ಇದು ಕಲ್ಲುಗಳನ್ನು ಕರಗಿಸುವ ಕೆಲಸ ಮಾಡುತ್ತವೆ. ಸಿಟ್ರಸ್ ಹಣ್ಣುಗಳು ಮತ್ತು ಅದರ ಜ್ಯೂಸ್  ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತವೆ. ಆದ್ದರಿಂದ ಇದನ್ನು ಸೇವಿಸುವುದು  ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಮೋಸಂಬಿ, ಮತ್ತು ದ್ರಾಕ್ಷಿಯನ್ನು ಸೇವಿಸಬೇಕು.

ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ  ಹಣ್ಣುಗಳು :
ಕ್ಯಾಲ್ಸಿಯಂ ಸಮೃದ್ಧವಾಗಿರುವ ಹಣ್ಣುಗಳು ಕಲ್ಲುಗಳು ಕರಗಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕಪ್ಪು ದ್ರಾಕ್ಷಿ, ಅಂಜೂರದ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದಲ್ಲದೆ ಸೌತೆಕಾಯಿಯಂಥಹ ನೀರಿನ ಅಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸಬಹುದು. 

ಇದನ್ನೂ ಓದಿ :  Tender Coconut : ಎಳೆನೀರು ಕುಡಿದ ಮೇಲೆ ತಪ್ಪದೇ ಗಂಜಿ ತಿನ್ನಿ, ಈ ಕಾಯಿಲೆ ಬುಡಸಮೇತ ತೊಲಗುತ್ತೆ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News