Health Tips : ಹಸಿ ಪನೀರ್ ತಿನ್ನಲೇಬೇಕು ಈ ಕಾರಣಗಳಿಗಾಗಿ

ಊಟಕ್ಕೆ ಒಂದು ಗಂಟೆ ಮೊದಲು ಹಸಿ ಪನೀರ್ ಅನ್ನು ತಿನ್ನಬಹುದು. ಇದರಿಂದ ಓವರ್ ಈಟಿಂಗ್ ಅನ್ನು ತಪ್ಪಿಸಬಹುದು.

Written by - Ranjitha R K | Last Updated : Mar 21, 2021, 09:46 AM IST
  • ಹೆಚ್ಚಿನ ಜನರು ಪನೀರ್ ಅನ್ನು ತರಕಾರಿ ಜೊತೆ ಸೇರಿಸಿ ಪಲ್ಯ ಮಾಡಿ ತಿನ್ನಲು ಇಷ್ಟಪಡುತ್ತಾರೆ.
  • ಹಸಿ ಪನೀರ್ ಅನ್ನು ಯಾವ ಹೊತ್ತಿನಲ್ಲಿ ತಿನ್ನಬೇಕು ತಿಳಿಯಿರಿ
  • ಹಸಿ ಪನೀರ್ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ
Health Tips : ಹಸಿ ಪನೀರ್ ತಿನ್ನಲೇಬೇಕು ಈ ಕಾರಣಗಳಿಗಾಗಿ  title=
ಹಸಿ ಪನೀರ್ ಅನ್ನು ಯಾವ ಹೊತ್ತಿನಲ್ಲಿ ತಿನ್ನಬೇಕು ತಿಳಿಯಿರಿ (fle photo)

ಬೆಂಗಳೂರು :  ಹೆಚ್ಚಿನ ಜನರು ಪನೀರ್ (Paneer) ಅನ್ನು ತರಕಾರಿ ಜೊತೆ ಸೇರಿಸಿ ಪಲ್ಯ ಮಾಡಿ ತಿನ್ನಲು  ಇಷ್ಟಪಡುತ್ತಾರೆ.  ಆದರೆ ಹಸಿ ಪನೀರ್ (raw Paneer) ತಿನ್ನುವುದರಿಂದ ಆಗುವ ಲಾಭದ ಬಗ್ಗೆ ನಿಮಗೆ ಗೊತ್ತಿದೆಯಾ?  ಹೌದು, ಹಸಿ ಪನೀರ್ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹಸಿ ಪನೀರ್ ಅನ್ನು ಪ್ರತಿದಿನ ತಿನ್ನುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಪನೀರ್ ನಲ್ಲಿ ಪ್ರೋಟೀನ್,  ಕ್ಯಾಲ್ಸಿಯಂ,  ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇದರ ಸೇವನೆಯು ರಕ್ತದಲ್ಲಿನ ಸಕ್ಕರೆ  ಪ್ರಮಾಣವನ್ನು  ನಿಯಂತ್ರಣದಲ್ಲಿಡುತ್ತದೆ.  

ಪನೀರ್ (Paneer) ಭಾರತೀಯರ ನೆಚ್ಚಿನ ಭಕ್ಷ್ಯಗಳಲ್ಲಿ ಒಂದಾಗಿದೆ. ಪನೀರ್ ನಲ್ಲಿ ಸೆಲೆನಿಯಮ್, ಕ್ಯಾಲ್ಸಿಯಂ, ಪಾಸ್ಫೋರಸ್ ಮತ್ತು ಪೊಟ್ಯಾಸಿಯಮ್ ಕಂಡುಬರುತ್ತವೆ. ಪನೀರ್ ನಲ್ಲಿ ಕಂಡುಬರುವ ಪೊಟ್ಯಾಸಿಯಮ್ ಮೆಮೊರಿ ಪವರ್ (Memory power) ಹೆಚ್ಚಿಸಲು ಸಹಕಾರಿಯಾಗಿರುತ್ತದೆ. ಇದಲ್ಲದೆ, ಹಸಿ ಪನೀರ್ ನಲ್ಲಿ (Raw Paneer) ಕಂಡುಬರುವ ಕ್ಯಾಲ್ಸಿಯಂ ಮತ್ತು ಮೂಳೆಗಳನ್ನು ಬಲಗೊಳಿಸುತ್ತದೆ. 

ಇದನ್ನೂ ಓದಿ : Onion Peel: ಈರುಳ್ಳಿ ಸಿಪ್ಪೆಯ ಪ್ರಯೋಜನಗಳನ್ನು ತಿಳಿದರೆ ನೀವು ಖಂಡಿತಾ ಅದನ್ನು ಎಸೆಯುವುದಿಲ್ಲ

ಹಸಿ ಪನೀರ್ ಯಾವ ಹೊತ್ತಿನಲ್ಲಿ ತಿನ್ನಬೇಕು : 
ಊಟಕ್ಕೆ ಒಂದು ಗಂಟೆ ಮೊದಲು ಹಸಿ ಪನೀರ್ ಅನ್ನು ತಿನ್ನಬಹುದು. ಇದರಿಂದ ಓವರ್ ಈಟಿಂಗ್ (Over eating) ಅನ್ನು ತಪ್ಪಿಸಬಹುದು. ಇದಲ್ಲದೆ, ವ್ಯಾಯಾಮದ ನಂತರವೂ ಪನೀರ್ ಸೇವನೆ ಪ್ರಯೋಜನಕಾರಿ.  ರಾತ್ರಿ ಮಲಗುವ ಒಂದು ಗಂಟೆ ಮೊದಲು ಕೂಡಾ ಹಸಿ ಪನೀರ್ ತಿನ್ನಬಹುದು.

ಹಸಿ ಪನೀರ್ ತಿನ್ನುವುದರಿಂದ ಆಗುವ 4 ಪ್ರಯೋಜನಗಳು :
1. ಬೊಜ್ಜು ಸಮಸ್ಯೆ ನಿವಾರಿಸುವಲ್ಲಿ ಸಹಾಯಕ :
ಇದ್ದ ಬದ್ದ ಆಹಾರ ಸೇವನೆಯಿಂದ ದೇಹದಲ್ಲಿ ಬೊಜ್ಜು (fat) ಬೆಳೆಯುವುದು ಇಂದಿನ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ನೀವು ಕೂಡಾ  ಹೆಚ್ಚಿದ ತೂಕವನ್ನು (Weight loss)  ಕಡಿಮೆ ಮಾಡಲು ಬಯಸುವುದಾದರೆ, ಹಸಿ ಪನೀರ್ ಸೇವಿಸಬಹುದು. ಇದರಲ್ಲಿ ಗಮನಾರ್ಹ ಪ್ರಮಾಣದ ಲೆನಿಲಿಕ್ ಆಸಿಡ್ ಇದೆ. ಇದು ದೇಹದಲ್ಲಿನ ಫ್ಯಾಟ್ ಬರ್ನ್ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಸೊಳ್ಳೆ ಕಾಟ ತಪ್ಪಿಸಲು ಮನೆ ಸುತ್ತ ಈ ಗಿಡಗಳಿರಲಿ
 
2. ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ :
ಹಸಿ ಪನೀರ್ ದುರ್ಬಲ ಮೂಳೆಗಳಿಗೆ ಶಕ್ತಿಯನ್ನು ನೀಡುತ್ತದೆ. ದುರ್ಬಲ ಮೂಳೆಗಳ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ, ಹಸಿ ಪನೀರ್ ಸೇವಿಸಲು ಆರಂಭಿಸಿ. ಇದರಲ್ಲಿ ಕ್ಯಾಲ್ಸಿಯಂ (calcium) ಮತ್ತು ಫಾಸ್ಫರಸ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳು ದುರ್ಬಲಗೊಳ್ಳದಂತೆ ರಕ್ಷಿಸಲು ಸಹಾಯ ಮಾಡುತ್ತದೆ.

3. ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ :
ಹಸಿ ಪನೀರ್ ಒತ್ತಡವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕೆಲಸದ ಒತ್ತಡದಿಂದಾಗಿ, ಅನೇಕ ಜನರು ಸ್ಟ್ರೆಸ್ ಗೆ ಒಳಗಾಗುತ್ತಾರೆ. ಹಸಿ ಪನೀರ್ ಸೇವನೆ ಈ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. 

ಇದನ್ನೂ ಓದಿ ಈ ಕಾರಣಗಳಿಂದಾಗಿ ಚಹಾ, ಗ್ರೀನ್ ಟೀ ಅಥವಾ ಜ್ಯೂಸ್ ಜೊತೆ ಔಷಧಿ ಸೇವನೆ ಬೇಡ

4. ಈ ಸಮಸ್ಯೆಗಳನ್ನು ತೊಡೆದುಹಾಕಲು ಸಹಕಾರಿ :
ಫೈಬರ್ ಕೊರತೆ, ದುರ್ಬಲ ರೋಗನಿರೋಧಕ ಶಕ್ತಿ (Immunity) , ಕೊಲೆಸ್ಟ್ರಾಲ್, ಮಲಬದ್ಧತೆ ಮತ್ತು ಹೈ ಶುಗರ್ ನಂತಹ ಸಮಸ್ಯೆಗಳನ್ನು ತೆಗೆದು ಹಾಕಲು ಹಸಿ ಪನೀರ್ ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿ ಫೈಬರ್ ಕೊರತೆಯಿದ್ದರೆ, ಪ್ರತಿದಿನ ಹಸಿ ಪನೀರ್ ಸೇವಿಸಬೇಕು. ಹಸಿ ಪನೀರ್ ಅನ್ನು ದಿನಕ್ಕೆ ಒಂದು ಬಾರಿಯಾದರೂ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಫೈಬರ್ ಕೊರತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್, ಮಲಬದ್ಧತೆ (Consipation) ಮತ್ತು ಶುಗರ್ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News