Kidney Stone : ಕಿಡ್ನಿ ಸಮಸ್ಯೆ ಇದೆಯಾ..? ಈ ಐದು ವಸ್ತುಗಳಿಂದ ದೂರ ಇರಿ.!

ಒಂದು ವೇಳೆ ನೀವು ಕೂಡಾ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದರೆ ತಪ್ಪಿಯೂ ಈ ಐದು ವಸ್ತುಗಳನ್ನು ತಿನ್ನಬಾರದು, ಅಥವಾ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ.  

Written by - Ranjitha R K | Last Updated : Mar 1, 2021, 04:57 PM IST
  • ಕಿಡ್ನಿ ಸ್ಟೋನ್ ಇದ್ದರೆ ಪಾಲಕ್ ತಿನ್ನಬೇಡಿ.
  • ಬೀಟ್ರೂ ಟ್, ಬೆಂಡೆಕಾಯಿ, ಗೆಣಸು, ಚಾಕಲೇಟ್ ನಿಂದ ದೂರವಿರಿ
  • ಯೂರಿಕೆ ಆಮ್ಲ ಹೆಚ್ಚಾದರೆ ಕಿಡ್ನಿ ಸ್ಟೋನ್ ಆಗುತ್ತದೆ
Kidney Stone : ಕಿಡ್ನಿ ಸಮಸ್ಯೆ ಇದೆಯಾ..? ಈ ಐದು ವಸ್ತುಗಳಿಂದ ದೂರ ಇರಿ.! title=
ಕಿಡ್ನಿ ಸ್ಟೋನ್ ಇದ್ದರೆ ಪಾಲಕ್ ತಿನ್ನಬೇಡಿ (file photo)

ಬೆಂಗಳೂರು :  ವೈದ್ಯರ ಪ್ರಕಾರ ಮೂತ್ರದಲ್ಲಿರುವ ಸಣ್ಣ ಸಣ್ಣ ಹರಳಿನ ಕಣಗಳು ಒಟ್ಟು ಸೇರಿ ಒಂದು ಕಡೆ ಕಿಡ್ನಿಯಲ್ಲಿ ಜಮೆಗೊಳ್ಳುತ್ತದೆ. ನೋಡಲು ಇದು ಕಲ್ಲಿನ ರೀತಿಯಲ್ಲೇ ಇರುತ್ತದೆ. ಹಾಗಾಗಿ ಇದನ್ನು ಕಿಡ್ನಿ ಸ್ಟೋನ್ (Kidney stone) ಎಂದು ಕರೆಯುತ್ತಾರೆ.  ಮೂತ್ರದಲ್ಲಿರುವ ಕ್ಯಾಲ್ಸಿಯಂ (Calcium) ಅಂಶವು ಅಕ್ಸಲೇಟ್ (Oxalate) ಅಥವಾ ಪಾಸ್ಪರೇಸ್ ರೀತಿಯ ಕೆಮಿಕಲ್ ಜೊತೆ ಸೇರಿದಾಗ ಕಿಡ್ನಿ ಸ್ಟೋನ್ ಸಮಸ್ಯೆ ಸೃಷ್ಟಿಯಾಗುತ್ತದೆ. ಕಿಡ್ನಿಯಲ್ಲಿ ಯೂರಿಕ್ ಆಸಿಡ್ (Uric Acid) ಸಂಗ್ರಹವಾದಗಲೂ ಕಿಡ್ನಿ ಕಲ್ಲಿನ ಸಮಸ್ಯೆ ತಲೆದೋರಬಹುದು.  ಒಂದು ವೇಳೆ ನೀವು ಕೂಡಾ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದರೆ ತಪ್ಪಿಯೂ ಈ ಐದು ವಸ್ತುಗಳನ್ನು ತಿನ್ನಬಾರದು, ಅಥವಾ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಯಾವುದು ಆ ಐದು ವಸ್ತು..?

1. ಪಾಲಕ್:
ಪಾಲಕದಲ್ಲಿ (Spinach) ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ವಿಟಮಿನ್, ಮಿನರಲ್ಸ್ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಆದರೆ, ಕಿಡ್ನಿ ಸ್ಟೋನ್ (Kidney stone) ಇದ್ದರೆ ಪಾಲಕ್ ತಿನ್ನಬೇಡಿ. ಯಾಕೆಂದರೆ, ಪಾಲಕ್ನಲ್ಲಿ ಅಕ್ಸಲೇಟ್ ಇರುತ್ತವೆ. ಇವು ದೇಹದಲ್ಲಿರುವ ಕ್ಯಾಲ್ಸಿಯಂ (Calcium) ಅಂಶವನ್ನು ಹರಳಿನ ರೂಪಕ್ಕೆ ಬದಲಾಯಿಸುತ್ತವೆ.  ಇದನ್ನು ಫಿಲ್ಟರ್ ಮಾಡಲು ಕಿಡ್ನಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಕಿಡ್ನಿಯಲ್ಲೇ ಜಮೆಯಾಗಿ ಸ್ಟೋನ್ ಆಗಿ ಬಿಡುತ್ತವೆ. 

ಇದನ್ನೂ ಓದಿ : Healthy Kidney : ಕಿಡ್ನಿ ಸ್ಟೋನ್ ಗೆ ಕಾರಣವಾಗುವ ಈ ಐದು ತಪ್ಪು ಮಾಡಲೇಬೇಡಿ.!

2. ಅಕ್ಸಲೇಟ್ ಪ್ರಮಾಣ ಅಧಿಕ ಇರುವ ತರ್ಕಾರಿ:
ಬೀಟ್ರೂಟ್, ಬೆಂಡೆಕಾಯಿ, ಗೆಣಸು, ಚಾಕಲೇಟ್ (Chocolate) ಮುಂತಾದ ವಸ್ತುಗಳಲ್ಲಿ ಅಕ್ಸಲೇಟ್ ಪ್ರಮಾಣ ಹೆಚ್ಚಾಗಿರುತ್ತದೆ. ಪಾಲಕ್ (Palak) ತಿಂದರೆ ಆಗುವ ಪರಿಣಾಮ ಈ ವಸ್ತುಗಳನ್ನು ತಿಂದರೂ ಆಗುತ್ತದೆ. ಹಾಗಾಗಿ ಈ ವಸ್ತುಗಳು ಹಿತಮಿತವಾಗಿ ತಿನ್ನಿ.

3. ಚಿಕನ್, ಮೀನು ಮತ್ತು ಮೊಟ್ಟೆ:
ಚಿಕನ್, ಮೀನು ಮತ್ತು ಮೊಟ್ಟೆಯಲ್ಲಿ (Egg) ಅನಿಮಲ್ ಪ್ರೊಟಿನ್ (Animal Protein) ಅಂಶ ಹೇರಳವಾಗಿರುತ್ತವೆ. ಹಾಗಾಗಿ ಈ ವಸ್ತುಗಳ ಅಧಿಕ ಸೇವನೆಯಿಂದ ದೇಹದಲ್ಲಿ ಯೂರಿಕ್ ಆಮ್ಲ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ಯೂರಿಕೆ ಆಮ್ಲ ಹೆಚ್ಚಾದರೆ, ಅದು ಕಿಡ್ನಿ ಸ್ಟೋನಿಗೂ ಕಾರಣವಾಗುತ್ತದೆ. ಹಾಗಾಗಿ  ಆಹಾರದಲ್ಲಿ ಪ್ರಾಣಿಜನ್ಯ ಪ್ರೊಟೀನ್ ಗಿಂತ  ಸಸ್ಯ ಜನ್ಯ ಪ್ರೋಟೀನ್ ಅಂದರೆ, ಪನೀರ್, ಹಾಲು (Milk), ಕುಂಬಳಕಾಯಿ ಬೀಜ, ಹಾಲು, ದಾಲ್ (Dal) ಹೆಚ್ಚು ತಿನ್ನಿ.

ಇದನ್ನೂ ಓದಿ : Military Diet ಅನುಸರಿಸಿ ಕೇವಲ ಮೂರೇ ದಿನಗಳಲ್ಲಿ ನಿಮ್ಮ ತೂಕ ಇಳಿಸಿ

4. ಉಪ್ಪು ಕಡಿಮೆ ಮಾಡಲೇ ಬೇಕು.
ಉಪ್ಪಿನಲ್ಲಿ ಸೋಡಿಯಂ (Sodium) ಹೇರಳವಾಗಿರುತ್ತದೆ. ಇದನ್ನು ಅಧಿಕ ಪ್ರಮಾಣದಲ್ಲಿ ತಿಂದರೆ, ಅದು ಯೂರಿನ್ನಲ್ಲಿ ಕ್ಯಾಲ್ಸಿಯಂ ಸಂಗ್ರಹಕ್ಕೆ ಕಾರಣವಾಗುತ್ತದೆ.  ಚಿಪ್ಸ್, ಸಂಸ್ಕರಿತ ಆಹಾರ ಇತ್ಯಾದಿ ವಸ್ತುಗಳಲ್ಲೂ ಉಪ್ಪಿನ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ, ಉಪ್ಪು ಕಡಿಮೆ ತಿನ್ನಿ. 

5. ಕೋಲಾ ಅಥವಾ ಸಾಫ್ಟ್ ಡ್ರಿಂಕ್ಸ್ :
ಕೋಲಾದಲ್ಲಿ ಪಾಸ್ಫೇಟ್ (Phosphate) ಎಂಬ ಕೆಮಿಕಲ್ ಅಧಿಕವಾಗಿರುತ್ತದೆ. ಇದರಿಂದ ಕಿಡ್ನಿ ಸ್ಟೋನ್ ಆಗುವ ಎಲ್ಲಾ ಸಾಧ್ಯತೆಗಳಿರುತ್ತವೆ.  ತುಂಬಾ ಹೇರಳವಾಗಿ ಸಕ್ಕರೆ ಸಿರಪ್ ಬಳಸಿ ಮಾಡಲಾದ ಪ್ರೊಸೆಸ್ಡ್ ಆಹಾರಗಳಿಂದ (Processed food)ಸಾಧ್ಯವಾದಷ್ಟು ದೂರ ಇರಿ.

ಇದನ್ನೂ ಓದಿ : Health Tips :ರೋಗ ಆವರಿಸುವ ಮುನ್ನವೇ ನಮ್ಮ ದೇಹ ಈ ಎಂಟು ಸಿಗ್ನಲ್ ಹೊರಡಿಸುತ್ತೆ, ಹುಷಾರ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News