ನವದೆಹಲಿ : ಕೆಲವೊಮ್ಮೆ ದೇಹದಲ್ಲಿರುವ ಉಪ್ಪಿನಾಂಶ, ಕೆಲವೊಂದು ಲವಣಾಂಶ ಸಣ್ಣ ಸಣ್ಣ ಹರಳಿನ (Crystel) ರೂಪದಲ್ಲಿ ಮಾರ್ಪಾಡುಗೊಂಡು ನಮ್ಮ ಕಿಡ್ನಿಯಲ್ಲಿ ಜಮೆಯಾಗುತ್ತವೆ. ಕಿಡ್ನಿ ಸ್ಟೋನ್ (Kidney Stone) ಅಂದರೆ ಇದೇ. ಇಷ್ಟೇ ಅಲ್ಲ, ಮೂತ್ರದಲ್ಲಿ ಕ್ಯಾಲ್ಸಿಯಂ (Calcium), ಅಕ್ಸಲೆಟ್ ಮತ್ತು ಯೂರಿಕ್ ಆಸಿಡ್ (Uric Acid) ಅಂಶ ಹೆಚ್ಚಾದಗಲೂ ಕಿಡ್ನಿಯಲ್ಲಿ ಸ್ಟೋನ್ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಈ ಹರಳುಗಳು ಮೂತ್ರದಲ್ಲಿ ಸರಾಗವಾಗಿ ಹೊರಗೆ ಹೋಗುತ್ತವೆ. ಗಾತ್ರದಲ್ಲಿ ದೊಡ್ಡದಿರುವ ಹರಳುಗಳು ಕಿಡ್ನಿಯಲ್ಲೇ ಉಳಿಯುತ್ತವೆ. ಕಿಡ್ನಿಯ ಕಾರ್ಯನಿರ್ವಹಣೆಗೆ ಸಮಸ್ಯೆ ತಂದೊಡ್ಡುತ್ತವೆ. ಇದರಿಂದ ಅಸಾಧ್ಯ ನೋವು ಉಂಟಾಗುತ್ತದೆ.
ಕಿಡ್ನಿಯಲ್ಲಿ ಸ್ಸೋನ್ ಆಗಿರುವ ಲಕ್ಷಣಗಳು.
1.ಪಕ್ಕೆಲುಬಿನ (Ribs) ಕೆಳಗೆ ನೋವು ಕಾಣಿಸಿಕೊಳ್ಳುತ್ತದೆ.
2.ಮೂತ್ರ (Urine) ವಿಸರ್ಜನೆ ಮಾಡುವಾಗ ತೀವ್ರ ನೋವುಂಟಾಗುತ್ತದೆ.
3.ಕೆಲವೊಮ್ಮೆ ವಾಂತಿ (vomiting) ಉಂಟಾಗುತ್ತದೆ.
ಕಿಡ್ನಿ ಸ್ಟೋನ್ (Kidney Stone) ಅನುವಂಶೀಯವೂ ಹೌದು. ನಿಮ್ಮ ಕುಟುಂಬ ಸದಸ್ಯರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ, ಅದು ಅನುವಂಶೀಯವಾಗಿ ನಿಮ್ಮಲ್ಲೂ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ನಮ್ಮ ತಪ್ಪುಗಳಿಂದಾಗಿಯೂ ನಮ್ಮಲ್ಲಿ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ : Spicy Food ತಿನ್ನುವುದರಿಂದ ಅನಾನುಕೂಲ ಮಾತ್ರವಲ್ಲ, ಕೆಲವು ಪ್ರಯೋಜನವೂ ಇದೆ
ಈ ಐದು ತಪ್ಪು ನಿಮ್ಮ ಕಿಡ್ನಿಯಲ್ಲಿ ಸ್ಟೋನ್ ಸೃಷ್ಟಿಸಬಹುದು.!
1. ಬೇಕಾದಷ್ಟು ನೀರು ಕುಡಿಯದೇ ಇರುವುದು.
ಚಳಿ (Winetr) ಇರಲಿ, ಬಿಸಿಲಿರಲಿ. ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು (Water) ಬೇಕು. ದಿನಕ್ಕೆ 2-3 ಲೀಟರ್ ನೀರು ಕುಡಿಯಲೇ ಬೇಕು. ಇಷ್ಟು ಪ್ರಮಾಣದ ನೀರು ಕುಡಿಯದೇ ಹೋದರೆ ಡಿಹೈಡ್ರೇಶನ್ (Dihydration) ಉಂಟಾಗುತ್ತದೆ. ಇದರಿಂದ ಮೂತ್ರದಲ್ಲಿ ಕ್ಯಾಲ್ಶಿಯಂ ( Calcium) ಹರಳಿನ ರೂಪದಲ್ಲಿ ಜಮೆಯಾಗುತ್ತದೆ. ಈ ಹರಳು ಕಿಡ್ನಿಯಲ್ಲಿ ಸೇರಿಕೊಳ್ಳುತ್ತವೆ. ಇದು ಕಿಡ್ನಿ ಸ್ಟೋನ್ ಗೆ ಕಾರಣವಾಗುತ್ತದೆ.
2. ಅತ್ಯಧಿಕ ಸೋಡಿಯಂ ಸೇವನೆ :
ನೀವು ಏನು ತಿನ್ನುತ್ತೀರಿ ಆ ಕಾರಣಕ್ಕೂ ಕಿಡ್ನಿಯಲ್ಲಿ ಕಲ್ಲು ಉಂಟಾಗಬಹುದು. ಬ್ರೋಕಲಿ, ನಟ್ಸ್ (Nuts), ಪಾಲಕ್ (palak) ಈ ಕೆಲವು ಆಹಾರಗಳಲ್ಲಿ ಅಕ್ಸಲೆಟ್ ಅಂಶ ಅಧಿಕವಾಗಿರುತ್ತದೆ. ಇದನ್ನು ಅಧಿಕ ಪ್ರಮಾಣದಲ್ಲಿ ತಿಂದರೆ ಅಕ್ಸಲೆಟ್ ಕ್ಯಾಲ್ಸಿಯಂ ಜೊತೆ ಅಂಟಿಕೊಂಡು ಕಿಡ್ನಿಯಲ್ಲಿ ಜಮೆಯಾಗುತ್ತದೆ. ಇದು ಸ್ಟೋನ್ ಗೆ ಕಾರಣವಾಗುತ್ತದೆ.
ಇದನ್ನೂ ಓದಿ : Chewing gum : ಅಯ್ಯೋ..! ಮಗು ಚ್ಯೂಯಿಂಗ್ ಗಮ್ ನುಂಗಿ ಬಿಡ್ತಾ..!?
3. ಬ್ಲಡ್ ಶುಗರ್ ಲೆವೆಲ್ ನಿಯಂತ್ರಣದಲ್ಲಿಡಿ.
ಟೈಪ್ 2 ಡಯಾಬಿಟಿಕ್ (Diabetes) ಕಾಯಿಲೆ ರೋಗಿಯ ಮೂತ್ರವನ್ನು ಅಸಿಡಿಕ್ ಮಾಡಿ ಬಿಡುತ್ತದೆ. ಅಂದರೆ ಮೂತ್ರದಲ್ಲಿ (Urine)ಆಮ್ಲದ ಪ್ರಮಾಣ ಆಧಿಕವಾಗುತ್ತದೆ. . ಇದರಿಂದ ಸ್ಟೋನ್ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಡಯಾಬಿಟಿಸ್ ಮೂತ್ರದ ಕಂಪೋಶಿಸನ್ ಬದಲಾಯಿಸಿ ಬಿಡುತ್ತದೆ. ಡಯಾಬಿಟಿಕ್ ರೋಗಿಗಳು ತಮ್ಮ ಬ್ಲಡ್ ಶುಗರ್ (Blood Sugar) ಲೆವೆಲ್ ನಿಯಂತ್ರಣದಲ್ಲಿಡಬೇಕು. ಇಲ್ಲದೇ ಹೋದರೆ, ಕಿಡ್ನಿ ಸ್ಟೋನ್ ಉಂಟಾಗಬಹುದು.
4. ಬೊಜ್ಜು ಬೆಳೆಸಿಕೊಳ್ಳಬೇಡಿ:
ಬೊಜ್ಜು ಪೀಡಿತ ವ್ಯಕ್ತಿಗೆ ಕಿಡ್ನಿ ಸ್ಟೋನ್ ಉಂಟಾಗುವ ಅಪಾಯ ಅತ್ಯಧಿಕವಾಗಿರುತ್ತದೆ. ವ್ಯಕ್ತಿಯ ಬಿಎಂಐ 30ಕ್ಕಿಂತ ಹೆಚ್ಚಾಗಿದ್ದರೆ ಅಂಥವರಿಗೆ ಕಿಡ್ನಿ ಸ್ಟೋನ್ ಉಂಟಾಗುವ ಅಪಾಯ ಹೆಚ್ಚಾಗಿರುತ್ತದೆ. ಬೊಜ್ಜು ನಿಯಂತ್ರಣದಲ್ಲಿಡಿ. ದೈಹಿಕ ಕಸರತ್ತು (Exercise) ಮಾಡಿ.
5. ಅತ್ಯಧಿಕ ಕ್ಯಾಲ್ಸಿಯಂ ಸೇವನೆ :
ಮೂಳೆ ಮತ್ತು ಹಲ್ಲು ಬಲಿಷ್ಠವಾಗಿಡಲು ದೇಹಕ್ಕೆ ಕ್ಯಾಲ್ಸಿಯಂ ಅತ್ಯಗತ್ಯ. ಒಂದು ವೇಳೆ ನೀವು ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದರೆ, ಅದರಿಂದಲೂ ಕಿಡ್ನಿ ಸ್ಟೋನ್ ಉಂಟಾಗಬಹುದು.
ಇದನ್ನೂ ಓದಿ : Brain Myths : ಇದು ನಮ್ಮ ಸೂಪರ್ ಹೀರೋ ಮೆದುಳಿನ ಬಗ್ಗೆ ಹೇಳಲಾದ ಮಹಾಸುಳ್ಳು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.