ಮೆಟ್ಟಿಲು ಹತ್ತಿದ ಕೂಡಲೇ ಏರುಸಿರು ಬರುತ್ತದೆಯೇ? ಈ ರೋಗದ ಲಕ್ಷಣಗಳಾಗಿರಬಹುದು!

Causes of breathlessness while climbing stairs:ಕೆಲವರು ಕೆಲವೇ ಕೆಲವು ಮೆಟ್ಟಿಲುಗಳನ್ನು ಹತ್ತಿದರೂ ಸುಸ್ತಾಗುತ್ತಾರೆ. ಉಸಿರಾಟದ ತೊಂದರೆ ಎದುರಿಸುತ್ತಾರೆ. ಕೆಲವರು ಈ ಸಮಸ್ಯೆಯನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಆದರೆ ಇದು ಪ್ರಮುಖ ಕಾಯಿಲೆಯ ಸಂಕೇತವೂ ಆಗಿರಬಹುದು. 

Written by - Ranjitha R K | Last Updated : Nov 17, 2023, 04:46 PM IST
  • ಇತ್ತೀಚಿನ ದಿನಗಳಲ್ಲಿ ಜನರು ಫಿಟ್ನೆಸ್ ಗೆ ಬಹಳ ಮಹತ್ವ ನೀಡುತ್ತಾರೆ.
  • ಇತ್ತೀಚಿನ ದಿನಗಳಲ್ಲಿ ಜನರು ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುತ್ತಾರೆ.
  • ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆ ಯಾಕೆ ಕಾಣಿಸುತ್ತದೆ
ಮೆಟ್ಟಿಲು ಹತ್ತಿದ ಕೂಡಲೇ ಏರುಸಿರು ಬರುತ್ತದೆಯೇ? ಈ ರೋಗದ ಲಕ್ಷಣಗಳಾಗಿರಬಹುದು!  title=

Causes of breathlessness while climbing stairs:ಇತ್ತೀಚಿನ ದಿನಗಳಲ್ಲಿ ಜನರು ಫಿಟ್ನೆಸ್ ಗೆ ಬಹಳ ಮಹತ್ವ ನೀಡುತ್ತಾರೆ. ಆದರೂ ಜನರು ಚಿಕ್ಕ ವಯಸ್ಸಿನಲ್ಲೇ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರು ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುತ್ತಾರೆ. ಇನ್ನು ಕೆಲವರು ಕೆಲವೇ ಕೆಲವು ಮೆಟ್ಟಿಲುಗಳನ್ನು ಹತ್ತಿದರೂ ಸುಸ್ತಾಗುತ್ತಾರೆ. ಉಸಿರಾಟದ ತೊಂದರೆ ಎದುರಿಸುತ್ತಾರೆ. ಕೆಲವರು ಈ ಸಮಸ್ಯೆಯನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಆದರೆ ಇದು ಪ್ರಮುಖ ಕಾಯಿಲೆಯ ಸಂಕೇತವೂ ಆಗಿರಬಹುದು. 

ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆ ಯಾಕೆ ಕಾಣಿಸುತ್ತದೆ : 
ಹೃದ್ರೋಗ : 

ಕೆಲವೇ ಮೆಟ್ಟಿಲುಗಳನ್ನು ಹತ್ತಿದ ಕೂಡಲೇ ಉಸಿರಾಟದ ತೊಂದರೆ ಎದುರಾದರೆ, ಅದು ಹೃದ್ರೋಗದ ಸಂಕೇತವಾಗಿರುತ್ತದೆ. ಆದ್ದರಿಂದ, ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಅದನ್ನು ಲಘುವಾಗಿ ಪರಿಣಮಿಸಬಾರದು. 

ಇದನ್ನೂ ಓದಿ : ಹೃದಯ ಬಡಿತ ಇದ್ದಕ್ಕಿದ್ದಂತೆ ಹೆಚ್ಚುತ್ತದೆಯೇ? ಇದನ್ನು ಖಂಡಿತಾ ನಿರ್ಲಕ್ಷಿಸಬೇಡಿ..!

ಅಸ್ತಮಾ ಸಮಸ್ಯೆ : 
ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಉಂಟಾದರೆ ಅದು ಅಸ್ತಮಾದ ಲಕ್ಷಣವಾಗಿರಬಹುದು. ಏಕೆಂದರೆ ಅಸ್ತಮಾದಿಂದ ಶ್ವಾಸಕೋಶದ ಸ್ಥಿತಿ ಹದಗೆಡುತ್ತದೆ. ಇದರಿಂದಾಗಿ ಉಸಿರಾಟಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು  ಉಂಟಾಗುತ್ತವೆ. 

ಸ್ಥೂಲಕಾಯತೆ : 
ಸ್ಥೂಲಕಾಯತೆಯಿಂದಲೂ ಈ ಸಮಸ್ಯೆ ಎದುರಾಗುತ್ತದೆ. ಹೆಚ್ಚುವರಿ ದೇಹದ ತೂಕದಿಂದಾಗಿ, ಉಸಿರಾಟದ ತೊಂದರೆಯೂ ಪ್ರಾರಂಭವಾಗುತ್ತದೆ. ಸ್ಥೂಲಕಾಯತೆಯಿಂದಾಗಿ ದೇಹದಲ್ಲಿ ಇತರ ಸಮಸ್ಯೆಗಳು ಉಂಟಾಗುತ್ತವೆ. 

ಇದನ್ನೂ ಓದಿ : ನಿಂಬೆ ರಸವನ್ನು ಈ ಸಮಯದಲ್ಲಿ ಹೀಗೆ ಕುಡಿದರೆ ತೂಕ ಇಳಿಕೆ ಬಲು ಸುಲಭ

COPD:
ಅತಿಯಾಗಿ ಧೂಮಪಾನ ಮಾಡುವ ಜನರು ಶ್ವಾಸಕೋಶದ ಕಾಯಿಲೆಯ ಸಮಸ್ಯೆಯನ್ನು ಹೊಂದಿರುತ್ತಾರೆ. ಇದರಿಂದಾಗಿ ಉಸಿರಾಟದ ತೊಂದರೆ ಪ್ರಾರಂಭವಾಗುತ್ತದೆ. ಏಕೆಂದರೆ ದೀರ್ಘಕಾಲದವರೆಗೆ ಧೂಮಪಾನ ಮಾಡುವುದರಿಂದ ಶ್ವಾಸಕೋಶ ಹಾನಿಯಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News