Vegetables Should Avoid In Fridge: ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ನಾವು ನಮ್ಮ ಜೀವನದಲ್ಲಿ ಬದಲಾಗುವುದು ತುಂಬಾ ಅಗತ್ಯ. ಮೊದಲೆಲ್ಲಾ ನಿತ್ಯ ಮಾರುಕಟ್ಟೆಗೆ ಹೋಗಿ ತಾಜಾ ತರಕಾರಿಗಳನ್ನು ತರುತ್ತಿದ್ದರು. ಆದರೆ, ಈ ವೇಗದ ಜೀವನಶೈಲಿಯಿಂದಾಗಿ ನಿತ್ಯ ಹೋಗಿ ತರಕಾರಿ ತರುವಷ್ಟು ಯಾರಿಗೂ ಸಮಯವಿರುವುದಿಲ್ಲ. ಹಾಗಾಗಿ, ವಾರಪೂರ್ತಿ ಬೇಕಾಗುವಷ್ಟು ತರಕಾರಿಗಳನ್ನು ಒಟ್ಟಿಗೆ ತಂದು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಆದರೆ, ಕೆಲವು ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು.
ಹೌದು, ಆರೋಗ್ಯ ತಜ್ಞರ ಪ್ರಕಾರ, ಕೆಲವು ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟು ತಿನ್ನುವುದನ್ನು ತಪ್ಪಿಸಬೇಕು. ಇಲ್ಲವೇ, ಇದು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಅಂತಹ ತರಕಾರಿಗಳು ಯಾವುವು? ಎಂದು ತಿಳಿಯೋಣ...
ಈ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ:-
ಕುಂಬಳಕಾಯಿ:
ವಿಟಮಿನ್ ಸಿ ಮತ್ತು ಫೈಬರ್ ನಲ್ಲಿ ಸಮೃದ್ಧವಾಗಿರುವ ಕುಂಬಳಕಾಯಿಯಲ್ಲಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿರುವ ಬೀಟಾ ಕ್ಯಾರೋಟಿನ್ ಕೂಡ ಕಂಡು ಬರುತ್ತದೆ. ಫ್ರಿಡ್ಜ್ ಇಲ್ಲದೆಯೇ ಈ ತರಕಾರಿಯನ್ನು ತಿಂಗಳವರೆಗೆ ಹಾಗೆಯೇ ಸಂಗ್ರಹಿಸಬಹುದು. ಆದರೆ, ಇದನ್ನು ನೀವು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಟ್ಟರೆ ಅದರ ರುಚಿ ಕೆಡಬಹುದು. ಮಾತ್ರವಲ್ಲ ತರಕಾರಿ ಬೇಗ ಹಾಳಾಗಬಹುದು.
ಇದನ್ನೂ ಓದಿ- ಹೃದಯ ಬಡಿತ ಇದ್ದಕ್ಕಿದ್ದಂತೆ ಹೆಚ್ಚುತ್ತದೆಯೇ? ಇದನ್ನು ಖಂಡಿತಾ ನಿರ್ಲಕ್ಷಿಸಬೇಡಿ..!
ಸೋರೆಕಾಯಿ:
ಸೋರೆಕಾಯಿಯನ್ನು ಕೂಡ ಫ್ರಿಡ್ಜ್‌ನಲ್ಲಿ ಇಡಬಾರದು. ಅದರಲ್ಲೂ ಕತ್ತರಿಸಿದ ಸೋರೆಕಾಯಿಯನ್ನು ಫ್ರಿಡ್ಜ್‌ನಲ್ಲಿ ಶೇಖರಿಸಿಡುವುದರಿಂದ ಅದರಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಫ್ರಿಡ್ಜ್‌ನಲ್ಲಿಟ್ಟ ಸೋರೆಕಾಯಿ ಸೇವನೆಯು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇದನ್ನೂ ಓದಿ- ಈ ವಿಷಯಗಳನ್ನು ನಿರ್ಲಕ್ಷಿಸಬೇಡಿ, ನಿಮ್ಮ ಸಂಗಾತಿಯು ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಸಾಧ್ಯತೆಯಿದೆ
ಆಲೂಗಡ್ಡೆ:
ಆಲೂಗಡ್ಡೆಯನ್ನು ದೀರ್ಘ ಸಮಯದವರೆಗೆ ಹೊರಗೆ ಸಂಗ್ರಹಿಸಿಡಬಹುದು. ಆದರೆ, ಅಪ್ಪಿತಪ್ಪಿಯೂ ಸಹ ಕಚ್ಚಾ ಆಲೂಗಡ್ಡೆಯನ್ನು ಎಂದಿಗೂ ರೆಫ್ರಿಜರೇಟರ್‌ನಲ್ಲಿ ಇಡಲೇಬಾರದು. ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಇದು ಬೇಗನೆ ಮೊಳಕೆಯೋದೆಯುತ್ತದೆ. ಮಾತ್ರವಲ್ಲ ಇದು ಬೇಗ ಕೊಳೆಯಬಹುದು. ಇದನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ ಎನ್ನಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.