ಪ್ರತಿದಿನ ಈ ಹಣ್ಣುಗಳನ್ನು ತಿಂದರೆ ಚರ್ಮದ ಸುಕ್ಕು ಮಾಯವಾಗುತ್ತೆ!

Skin wrinkles : ಮುಖದಲ್ಲಿ ಸುಕ್ಕುಗಳು ಬಂದರೆ ಚಿಕ್ಕವಯಸ್ಸಿನಲ್ಲಿ ಮುದುಕರಂತೆ ಕಾಣುತ್ತೀರಿ. ವಯಸ್ಸಾದಂತೆ ಒಂದಿಷ್ಟು ಸುಕ್ಕುಗಳು ಬರುವುದು ಸಹಜ. ಧೂಳು ಮತ್ತು ಮಾಲಿನ್ಯವೂ ಮುಖದ ಮೇಲೆ ಸುಕ್ಕುಗಳನ್ನು ಉಂಟುಮಾಡುತ್ತದೆ.   

Written by - Chetana Devarmani | Last Updated : Nov 15, 2023, 03:59 PM IST
  • ಮುಖದ ಅಂದ ಕುಂದಿಸುವ ಸುಕ್ಕುಗಳು
  • ಚರ್ಮದ ಸುಕ್ಕುಗಳಿಗೆ ಮನೆಮದ್ದುಗಳು
  • ಸುಕ್ಕುಗಳನ್ನು ತೆಗೆದುಹಾಕುವ ಹಣ್ಣುಗಳು
ಪ್ರತಿದಿನ ಈ ಹಣ್ಣುಗಳನ್ನು ತಿಂದರೆ ಚರ್ಮದ ಸುಕ್ಕು ಮಾಯವಾಗುತ್ತೆ!  title=

Skin wrinkles : ಮುಖದಲ್ಲಿ ಸುಕ್ಕುಗಳು ಬಂದರೆ ಚಿಕ್ಕವಯಸ್ಸಿನಲ್ಲಿ ಮುದುಕರಂತೆ ಕಾಣುತ್ತೀರಿ. ವಯಸ್ಸಾದಂತೆ ಒಂದಿಷ್ಟು ಸುಕ್ಕುಗಳು ಬರುವುದು ಸಹಜ. ಧೂಳು ಮತ್ತು ಮಾಲಿನ್ಯವೂ ಮುಖದ ಮೇಲೆ ಸುಕ್ಕುಗಳನ್ನು ಉಂಟುಮಾಡುತ್ತದೆ. ನೀವು ಸಹ ಸುಕ್ಕುಗಳಿಂದ ಬಳಲುತ್ತಿದ್ದರೆ.. ನೈಸರ್ಗಿಕ ವಿಧಾನಗಳ ಮೂಲಕ ಅವುಗಳನ್ನು ತೆಗೆದುಹಾಕಬಹುದು. ನಿಮ್ಮ ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವುದು ಒಳ್ಳೆಯದು.  

ಪಪ್ಪಾಯಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಹೇರಳವಾಗಿವೆ. ಇದು ಚರ್ಮದ ಮೇಲಿನ ಸುಕ್ಕನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಪಪ್ಪಾಯಿಯು ತ್ವಚೆಯನ್ನು ಆರೋಗ್ಯಕರವಾಗಿಡುವ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ನೀವು ಮುಖದ ಸುಕ್ಕುಗಳಿಂದ ಬಳಲುತ್ತಿದ್ದರೆ, ಪ್ರತಿದಿನ ಪಪ್ಪಾಯಿಯನ್ನು ತಿನ್ನುವುದು ಪ್ರಯೋಜನಕಾರಿ.

ಇದನ್ನೂ ಓದಿ : ಚಳಿಗಾಲದಲ್ಲಿಯೂ ಗುಲಾಬಿಯಂತಹ ತ್ವಚೆ ಹೊಂದಲು ಈ ಅಡುಗೆ ವಸ್ತುವನ್ನು ಬಳಸಿ..! 

ಬೆರ್ರಿ ಹಣ್ಣುಗಳಲ್ಲಿ ಇರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ತ್ವಚೆಯನ್ನು ಆರೋಗ್ಯಕರವಾಗಿಡುವಲ್ಲಿ ಪರಿಣಾಮಕಾರಿಯಾಗಿದೆ. ಇವು ತ್ವಚೆಯನ್ನು ಆರೋಗ್ಯವಾಗಿರಿಸುವುದು ಮಾತ್ರವಲ್ಲದೆ ನಿಮ್ಮ ಕಣ್ಣುಗಳನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ.

ದಾಳಿಂಬೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ನಿಮ್ಮ ಚರ್ಮಕ್ಕೂ ಒಳ್ಳೆಯದು. ಚರ್ಮದಲ್ಲಿ ಕಾಲಜನ್ ಅನ್ನು ಹೆಚ್ಚಿಸುವ ಮೂಲಕ ಸುಕ್ಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನಿಮ್ಮ ಚರ್ಮವು ಸುಂದರ ಮತ್ತು ಯೌವನದಿಂದ ಕೂಡಿರುತ್ತದೆ.

ಕಿತ್ತಳೆ ಹಣ್ಣುಗಳು ನಿಮ್ಮ ಕೂದಲು ಮತ್ತು ಚರ್ಮ ಎರಡಕ್ಕೂ ಸಹಾಯ ಮಾಡುತ್ತವೆ. ನಿಮ್ಮ ತ್ವಚೆಯು ಸದಾ ಯೌವನವಾಗಿರಬೇಕೆಂದು ನೀವು ಬಯಸಿದರೆ.. ಹೆಚ್ಚು ಕಿತ್ತಳೆಯನ್ನು ಸೇವಿಸಿ. ಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ನಿಮ್ಮ ಚರ್ಮವನ್ನು ಕಲೆಗಳಿಂದ ಮುಕ್ತಗೊಳಿಸುತ್ತದೆ.

ಅನಾನಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ಮುಖದಲ್ಲಿ ಸುಕ್ಕುಗಳಿದ್ದರೆ.. ನೀವು ಅನಾನಸ್ ಸೇವಿಸಿದರೆ ಉತ್ತಮ. ಅನಾನಸ್ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಸುಂದರವಾಗಿಸಲು ಸಹಾಯ ಮಾಡುವ ಅನೇಕ ವಿಟಮಿನ್‌ಗಳನ್ನು ಹೊಂದಿದೆ. 

ಇದನ್ನೂ ಓದಿ : ಬಿಳಿ ಕೂದಲನ್ನು ಕಪ್ಪಾಗಿಸಬೇಕೆ? ಅರಿಶಿನದಲ್ಲಿ ಈ ಒಂದು ವಸ್ತು ಬೆರೆಸಿ ಕೂದಲಿಗೆ ಅನ್ವಯಿಸಿ ನೋಡಿ!

(ಗಮನಿಸಿ: ಇಲ್ಲಿ ಪ್ರಸ್ತುತಪಡಿಸಲಾದ ಯಾವುದೇ ಆರೋಗ್ಯ ಸಂಬಂಧಿತ ವಿಷಯವನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News