ಚುನಾವಣಾ ವೈಫಲ್ಯ: ಸಿಎಂ ಸ್ಥಾನಕ್ಕೆ ಪಳನಿಸ್ವಾಮಿ ರಾಜೀನಾಮೆಗೆ ಡಿಎಂಕೆ ಆಗ್ರಹ

ಲೋಕಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಸೋಲಿಗೆ ಸಿಎಂ ಪಳನಿಸ್ವಾಮಿ ಅವರೇ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು ಎಂದು ಡಿಎಂಕೆ ನಾಯಕ ದಯಾನಿಧಿ ಮಾರನ್ ಹೇಳಿದ್ದಾರೆ. 

Last Updated : May 26, 2019, 02:20 PM IST
ಚುನಾವಣಾ ವೈಫಲ್ಯ: ಸಿಎಂ ಸ್ಥಾನಕ್ಕೆ ಪಳನಿಸ್ವಾಮಿ ರಾಜೀನಾಮೆಗೆ ಡಿಎಂಕೆ ಆಗ್ರಹ title=

ಚೆನ್ನೈ: 2019ರ ಲೋಕಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಹೀನಾಯ ಸೋಲಿನ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೆ ಎಡಪ್ಪಾಡಿ ಕೆ. ಪಳನಿಸ್ವಾಮಿ ರಾಜೀನಾಮೆಗೆ ಡಿಎಂಕೆ ಮುಖಂಡರು ಆಗ್ರಹಿಸಿದ್ದಾರೆ.

ತಮಿಳುನಾಡಿನ ಲೋಕಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಕೇವಲ ಒಂದು ಸ್ಥಾನ ಗೆದ್ದುಕೊಂಡಿದೆ.  ಮತ್ತೊಂದೆಡೆ ಡಿಎಂಕೆ ರಾಜ್ಯದಲ್ಲಿ 23 ಸ್ಥಾನಗಳ ಗೆಲುವು ಸಾಧಿಸಿದ್ದು, ಎಐಎಡಿಎಂಕೆ ಸೋಲಿಗೆ ಸಿಎಂ ಪಳನಿಸ್ವಾಮಿ ಅವರೇ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು ಎಂದು ಡಿಎಂಕೆ ನಾಯಕ ದಯಾನಿಧಿ ಮಾರನ್ ಹೇಳಿದ್ದಾರೆ. 

ಅಲ್ಲದೆ, ಎಐಎಡಿಎಂಕೆ ತನ್ನ ಏಕಾಂಗಿ ಸ್ಥಾನವನ್ನು ಗೆಲ್ಲಲು ಹಣದ ಶಕ್ತಿಯನ್ನು ಬಳಸಿಕೊಂಡಿದೆ ಎಂದು ಚೆನ್ನೈ ಸೆಂಟ್ರಲ್ ಎಂಪಿ ಆರೋಪಿಸಿದ್ದಾರೆ. ತನ್ನ ಏಕೈಕ ಸ್ಥಾನ ಗೆದ್ದಿರುವುದೂ ಸಹ ಹಣದ ಶಕ್ತಿಯಿಂದಲೇ ಎಂದು ದಯಾನಿಧಿ ಮಾರನ್ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಏಕೈಕ ಸ್ಥಾನ ಗೆದ್ದು ಹೀನಾಯ ಸೋಲು ಕಂಡರೂ ಸಹ, ವಿಧಾನಸಭೆ ಉಪ ಚುನಾವಣೆಯಲ್ಲಿ ಎಐಎಡಿಎಂಕೆ 9 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಶೇ.45.1ರಷ್ಟು ಮತಗಳನ್ನು ಪಡೆದಿದ್ದರೆ, ಎಐಎಡಿಎಂಕೆ ಶೇ.38.2 ಮತಗಳನ್ನು ಗಳಿಸಿದೆ. 

Trending News