29 ಜನರಿಂದ ಬಾಲಕಿ ಅತ್ಯಾಚಾರ, ವಿಡಿಯೋ ಮಾಡಿ ಅಪ್ರಾಪ್ತೆಯ ಬ್ಲಾಕ್ ಮೇಲ್

ಮನ್‌ಪಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ , ಜನವರಿ 2021 ರಿಂದ ಸೆಪ್ಟೆಂಬರ್ 22, 2021 ರವರೆಗೆ ಒಟ್ಟು 29 ಜನರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. 

Written by - Ranjitha R K | Last Updated : Sep 23, 2021, 07:34 PM IST
  • 29 ಮಂದಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ
  • ಮಾನ್ಪಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
  • ಇದುವರೆಗೆ 26 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ
29 ಜನರಿಂದ ಬಾಲಕಿ  ಅತ್ಯಾಚಾರ, ವಿಡಿಯೋ ಮಾಡಿ ಅಪ್ರಾಪ್ತೆಯ ಬ್ಲಾಕ್ ಮೇಲ್  title=
29 ಮಂದಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ (file photo)

ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈನ (Mumbai) ಪಕ್ಕದಲ್ಲಿರುವ ಡೊಂಬಿವಲಿ ಪ್ರದೇಶದಲ್ಲಿ ಮನುಕುಲವೇ ತಲೆತಗ್ಗಿಸುವ ಘಟನೆ ನಡೆದಿದೆ. ಇಲ್ಲಿ ಬಾಲಕಿಯೊಬ್ಬಳು, 29 ಜನರ ವಿರುದ್ಧ ಅತ್ಯಾಚಾರ (gangrape) ಪ್ರಕರಣ ದಾಖಲಿಸಿದ್ದಾಳೆ. ಕಳೆದ 8 ತಿಂಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ, ಆರೋಪಿಗಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಲಕಿ ದೂರಿದ್ದಾಳೆ. 

ಬಾಲಕಿಯ ದೂರಿನ ಮೇರೆಗೆ ಪೊಲೀಸರಿಂದ ಕ್ರಮ : 
ಮನ್‌ಪಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ (FIR), ಜನವರಿ 2021 ರಿಂದ ಸೆಪ್ಟೆಂಬರ್ 22, 2021 ರವರೆಗೆ ಒಟ್ಟು 29 ಜನರು ತನ್ನ ಮೇಲೆ ಅತ್ಯಾಚಾರ (Rape) ಎಸಗಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಬಾಲಕಿಯ ದೂರಿನ ಆಧಾರದ ಮೇಲೆ,  ಪೊಲೀಸರು (Police) ಕ್ರಮ ಕೈಗೊಂಡು, 24 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಅಪ್ರಾಪ್ತರು ಸೇರಿದ್ದಾರೆ. ಆರೋಪಿಗಳು ಬೇರೆ ಬೇರೆ ಸ್ಥಳಗಳಲ್ಲಿ,  ಹುಡುಗಿಯ ಮೇಲೆ  ಅತ್ಯಾಚಾರ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

 

ಇದನ್ನೂ ಓದಿ : ಗೂಗಲ್ ಮತ್ತು ಆಪಲ್ ನಿಂದ 8 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಆಪ್ ಗಳು ಬ್ಯಾನ್, ನಿಮ್ಮ ಫೋನಿನಿಂದಲೂ ತಕ್ಷಣ ಡಿಲೀಟ್ ಮಾಡಿ

ಅತ್ಯಾಚಾರದ ವಿಡಿಯೋ ಮಾಡುವ ಮೂಲಕ ಬ್ಲಾಕ್ ಮೇಲ್ : 
ಸಂತ್ರಸ್ತೆಯ ಸ್ನೇಹಿತನಾಗಿದ್ದ ಆರೋಪಿಯು ಜನವರಿಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು,  ಘಟನೆಯ ವಿಡಿಯೋ (Video) ಚಿತ್ರೀಕರಿಸಿದ್ದಾನೆ ಎಂದು ಹೇಳಲಾಗಿದೆ. ಇದಾದ ನಂತರ ವಿಡಿಯೋ ಇತರ ಆರೋಪಿಗಳಿಗೂ ತಲುಪಿದೆ.  ಈ ವಿಡಿಯೋವನ್ನು ಮುಂದಿಟ್ಟುಕೊಂಡು, ಬಾಲಕಿಯನ್ನು ಬ್ಲ್ಯಾಕ್‌ಮೇಲ್ (Blackmail) ಮಾಡಿ, ಪದೇ ಪದೇ ಹಲ್ಲೆ ಮತ್ತು ಸಾಮೂಹಿಕ ಅತ್ಯಾಚಾರ (Gangrape) ನಡೆಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, 3 ದಿನಗಳ ಹಿಂದೆ 7 ಜನರು ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಂತರಈ ವಿಚಾರ ಬಹಿರಂಗವಾಗಿದೆ.  ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವಿಶೇಷ ತಂಡವನ್ನು ರಚಿಸಿದ್ದಾರೆ. 

ಈ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು : 
ಆರೋಪಿಗಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು POCSO ಕಾಯಿದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿ ಎಸಿಪಿ ಸೋನಾಲಿ ಡೋಲ್ ಅವರನ್ನು ನೇಮಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದತ್ತಾತ್ರೇಯ ಕರಾಳೆ ತಿಳಿಸಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ. 

ಇದನ್ನೂ ಓದಿ : ಸದ್ದಿಲ್ಲದೆ ಲಾಂಚ್ ಆಯ್ತು Redmiಯ ಈ Smartphone, 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಎಲ್ಲಾ ವೈಶಿಷ್ಟ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News