Viral Video: ನಡುರಸ್ತೆಯಲ್ಲಿಯೇ ಕ್ಯಾಬ್ ಚಾಲಕನಿಗೆ ಥಳಿತ, ಮಹಿಳೆ ವಿರುದ್ಧ ಎಫ್ಐಆರ್..!

ನಡುರಸ್ತೆಯಲ್ಲಿಯೇ ಕ್ಯಾಬ್ ಚಾಲಕನಿಗೆ ಮಹಿಳೆಯೊಬ್ಬರು ಮನಬಂದಂತೆ ಥಳಿಸಿದ್ದಾರೆ.

Written by - Puttaraj K Alur | Last Updated : Aug 3, 2021, 01:19 PM IST
  • ಲಕ್ನೋದ ಟ್ರಾಫಿಕ್ ಸಿಗ್ನಲ್‌ನಲ್ಲಿ ಕ್ಯಾಬ್ ಚಾಲಕನಿಗೆ ಮಹಿಳೆಯಿಂದ ಹಿಗ್ಗಾಮುಗ್ಗಾ ಥಳಿತ
  • ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಚಾಲಕನಿಗೆ ಕಪಾಳಮೋಕ್ಷ ಮಾಡುವ ದೃಶ್ಯ
  • ಮಹಿಳೆ ಬಂಧನಕ್ಕೆ ಆಗ್ರಹಿಸಿ ಸೋಷಿಯಲ್ ಮೀಡಿಯಾದಲ್ಲಿ ‘#arrestlunowgirl’ ಹ್ಯಾಶ್‌ಟ್ಯಾಗ್ ಟ್ರೆಂಡ್
Viral Video: ನಡುರಸ್ತೆಯಲ್ಲಿಯೇ ಕ್ಯಾಬ್ ಚಾಲಕನಿಗೆ ಥಳಿತ, ಮಹಿಳೆ ವಿರುದ್ಧ ಎಫ್ಐಆರ್..! title=
ಕ್ಯಾಬ್ ಚಾಲಕನಿಗೆ ಮನಬಂದಂತೆ ಥಳಿಸಿದ ಮಹಿಳೆ

ಲಕ್ನೋ: ನಡು ರಸ್ತೆಯಲ್ಲಿಯೇ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಮಹಿಳೆ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್(FIR) ದಾಖಲಿಸಿದ್ದಾರೆ. ಲಕ್ನೋದ ಟ್ರಾಫಿಕ್ ಸಿಗ್ನಲ್‌ನಲ್ಲಿ ಕ್ಯಾಬ್ ಚಾಲಕನಿಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಥಳಿಸಿದ್ದರು. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಅದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಬಡಪಾಯಿ ಕ್ಯಾಬ್ ಚಾಲಕನ ಮೇಲೆ ಹಿಂದೆ-ಮುಂದೆ ನೋಡದೆ ಹಲ್ಲೆ ನಡೆಸಿರುವ ಮಹಿಳೆಯನ್ನು ಬಂಧಿಸುವಂತೆ ನೆಟಿಜನ್ ಗಳು ಆಗ್ರಹಿಸಿದ್ದರು.

ಕ್ಯಾಬ್ ಚಾಲಕನಿಗೆ ಥಳಿಸಿರುವ ಮಹಿಳೆಯನ್ನು ಬಂಧಿಸುವಂತೆ ಸೋಷಿಯಲ್ ಮೀಡಿಯಾ(Social Media)ದಲ್ಲಿ ‘#arrestlunowgirl’ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಕಪಾಳಮೋಕ್ಷ ಮಾಡಿಸಿಕೊಂಡ ಕ್ಯಾಬ್ ಡ್ರೈವರ್ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಲಕ್ನೋದ ಸೆಂಟ್ರಲ್ ಉಪ ಪೊಲೀಸ್ ಆಯುಕ್ತ(DCP) ಚಿರಂಜೀವ್ ನಾಥ್ ಸಿನ್ಹಾ ಹೇಳಿದ್ದಾರೆ.

ಇದನ್ನೂ ಓದಿ: Alert! Fake Universities ಪಟ್ಟಿ ಸೇರಿದ ಕರ್ನಾಟಕದ ಈ ವಿಶ್ವವಿದ್ಯಾಲಯ, ಎಚ್ಚರ !

‘ಮಹಿಳೆಯೊಬ್ಬಳು ಕ್ಯಾಬ್ ಚಾಲಕನಿಗೆ ಕಪಾಳಮೋಕ್ಷ ಮಾಡಿರುವ ವೈರಲ್ ವಿಡಿಯೋ(Viral Video) ಪ್ರಕರಣದಲ್ಲಿ ನಾವು ಆ ವ್ಯಕ್ತಿಯಿಂದ ದೂರು ಸ್ವೀಕರಿಸಿದ್ದೇವೆ. ದೂರುದಾರರ ಹೇಳಿಕೆ ಮತ್ತು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕೃಷ್ಣ ನಗರ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್(FIR) ದಾಖಲಿಸಲಾಗಿದೆ ಎಂದು ಡಿಸಿಪಿ ಸಿನ್ಹಾ ತಿಳಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಬಿಳಿ ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದ ಮಹಿಳೆಯೊಬ್ಬಳು ಲಕ್ನೋದ ಅವಧ್ ರಸ್ತೆಯ ಜೀಬ್ರಾ ಕ್ರಾಸಿಂಗ್‌ನಲ್ಲಿ ನಿಂತು ಕ್ಯಾಬ್ ಡ್ರೈವರ್(Cab Driver)ಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದಾಗಿದೆ. ಎಷ್ಟೇ ಬೇಡಿಕೊಂಡರೂ ಬಿಡದೆ ಆತನ ಕಾಲರ್ ಹಿಡಿದು ಎಳೆದಾಡಿ ಮನಬಂದಂತೆ ಥಳಿಸಿದ್ದಾಳೆ. ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿ ಎಂದು ಚಾಲಕ ನೆರೆದಿದ್ದ ಜನರಲ್ಲಿ ಮನವಿ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: chat ಓಪನ್ ಮಾಡದೆಯೇ ಕಳುಹಿಸಬಹುದು WhatsApp ಮೆಸೇಜ್ , ಈ ಟ್ರಿಕ್ ಬಳಸಿ

ಎಷ್ಟೇ ಹೇಳಿದರೂ ಕೆಳದ ಮಹಿಳೆ ಚಾಲಕನಿಗೆ ಪದೇ ಪದೇ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದಾಳೆ. ಬಳಿಕ ಆತನ ಮೊಬೈಲ್ ಫೋನ(Mobile Phone)ನ್ನು ನೆಲಕ್ಕೆ ಎಸೆದು ಒಡೆದು ಹಾಕಿದ್ದಾಳೆ. ಈ ಮಧ್ಯೆ ಟ್ರಾಫಿಕ್ ಪೋಲಿಸ್ ಮಧ್ಯಪ್ರವೇಶಿಸಿ ಕ್ಯಾಬ್ ಡ್ರೈವರ್‌ನಿಂದ ಮಹಿಳೆಯನ್ನು ಬೇರ್ಪಡಿಸಿ ಅವರನ್ನು ರಸ್ತೆಯ ಬದಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಮಹಿಳೆ ಮತ್ತೆ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾಳೆ. ಬಡಪಾಯಿ ಚಾಲಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಮಹಿಳೆಯನ್ನು ಕೂಡಲೇ ಬಂಧಿಸಿ ಶಿಕ್ಷೆ ನೀಡಬೇಕೆಂದು ನೆಟಿಜನ್ ಗಳು ಆಗ್ರಹಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News