Railway ಟಿಕೆಟ್ ಬುಕಿಂಗ್ ಸಿಸ್ಟಂನಲ್ಲಿ ಭಾರಿ ಬದಲಾವಣೆ, ಹೊಸ ನಿಯಮಗಳನ್ನು ಜಾರಿಗೊಳಿಸಿದ IRCTC

Railway Ticket Booking New rule- ದೀರ್ಘಾವಧಿಯ ನಂತರ ರೈಲ್ವೆಯಿಂದ ಟಿಕೆಟ್ ಕಾಯ್ದಿರಿಸುವವರಿಗೆ, IRCTC ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ.

Written by - Nitin Tabib | Last Updated : Feb 14, 2022, 04:08 PM IST
  • ರೈಲು ಪ್ರಯಾಣಿಕರಿಗೊಂದು ಉಪಯುಕ್ತ ಮಾಹಿತಿ.
  • ಟಿಕೆಟ್ ಬುಕಿಂಗ್ ಸಿಸ್ಟಮ್ ನಲ್ಲಿ ಬದಲಾವಣೆ ಮಾಡಿದ IRCTC.
  • ಪ್ರಯಾಣಿಕರಿಗಾಗಿ IRCTC ಜಾರಿಗೊಳಿಸಿದೆ ಹೊಸ ನಿಯಮ
Railway ಟಿಕೆಟ್ ಬುಕಿಂಗ್ ಸಿಸ್ಟಂನಲ್ಲಿ ಭಾರಿ ಬದಲಾವಣೆ, ಹೊಸ ನಿಯಮಗಳನ್ನು ಜಾರಿಗೊಳಿಸಿದ IRCTC title=
IRCTC New Rule (File Photo)

IRCTC New Rule: ದೇಶದಲ್ಲಿ ರೇಲ್ವೆ ಮೂಲಕ ದೂರದ ಪ್ರಯಾಣ ಬೆಳೆಸಲು ಇ-ಟಿಕೆಟಿಂಗ್ ನ ಎಲ್ಲಾ ವ್ಯವಸ್ಥೆಯನ್ನು IRCTC ನೋಡಿಕೊಳ್ಳುತ್ತದೆ. ಈ ಕಂಪನಿಯು ಬಳಕೆದಾರರ ಅನುಕೂಲಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವ (Ticket Reservation) ನಿಯಮಗಳನ್ನು ಬದಲಾಯಿಸುತ್ತಲೇ ಇರುತ್ತದೆ ಮತ್ತು ಇದೀಗ ಕಂಪನಿ ಮತ್ತೆ ಹಲವು ನಿಯಮಗಳನ್ನು ಬದಲಾಯಿಸಿದೆ. ಒಂದು ವೇಳೆ ನೀವೂ ಕೂಡ ದೀರ್ಘಾವಧಿಯ ಟಿಕೆಟ್ ಗಳನ್ನು ಬುಕ್ ಮಾಡುತ್ತಿದ್ದಾರೆ ಈ ನವೀಕರಣದ ಮಾಹಿತಿ ನಿಮಗೂ ತಿಳಿದಿರಬೇಕು.

ಯಾವುದು ಈ ದೊಡ್ಡ ಬದಲಾವಣೆ (Indian Railways)
 IRCTC ಯ ಹೊಸ ನಿಯಮಗಳ ಅಡಿಯಲ್ಲಿ, ಇದೀಗ ಜನರು ಟಿಕೆಟ್ ಬುಕ್ ಮಾಡುವ ಮೊದಲು ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ಪರಿಶೀಲಿಸಬೇಕಾಗುತ್ತದೆ. ಅದರ ನಂತರವೇ ನೀವು ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತದೆ. ಕೋವಿಡ್ ಸೋಂಕಿನಿಂದಾಗಿ ದೀರ್ಘಕಾಲದವರೆಗೆ ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರಿಗಾಗಿ ರೈಲ್ವೆ ಹೊಸ ನಿಯಮಗಳನ್ನು ಮಾಡಿದೆ.

ದೀರ್ಘಕಾಲದವರೆಗೆ ಟಿಕೆಟ್ ಕಾಯ್ದಿರಿಸದೆ ಇರುವವರು, ಅಂತಹ ಜನರು IRCTC ಪೋರ್ಟಲ್‌ನಿಂದ ಟಿಕೆಟ್ ಖರೀದಿಸಲು ಮೊದಲು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ಪರಿಶೀಲಿಸಬೇಕಾಗುತ್ತದೆ. ಅದರ ನಂತರವೇ ಟಿಕೆಟ್ ಸಿಗುತ್ತದೆ. ಆದರೆ, ಸಾಮಾನ್ಯ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಈ ಪ್ರಕ್ರಿಯೆಗೆ ಹೋಗಬೇಕಾಗಿಲ್ಲ.

ಇದನ್ನೂ ಓದಿ-Indian Railways: ರೈಲ್ವೆ ಪ್ರಯಾಣಿಕರೇ ಗಮನಿಸಿ! ಇಂದಿನಿಂದ ಮತ್ತೆ ಸಿಗಲಿದೆ ಈ ಸೌಲಭ್ಯ

IRCTC ಮಾತ್ರ ಟಿಕೆಟ್‌ಗಳನ್ನು ನೀಡುತ್ತದೆ
IRCTC ಭಾರತೀಯ ರೈಲ್ವೆಯ ಅಡಿಯಲ್ಲಿ ಆನ್‌ಲೈನ್‌ನಲ್ಲಿ (ಇ-ಟಿಕೆಟ್) ಟಿಕೆಟ್‌ಗಳನ್ನು ಮಾರಾಟ ಮಾಡುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಟಿಕೆಟ್‌ಗಳಿಗಾಗಿ, ಪ್ರಯಾಣಿಕರು ಈ ಪೋರ್ಟಲ್‌ನಲ್ಲಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ರಚಿಸುತ್ತಾರೆ ಮತ್ತು ನಂತರ ಆನ್‌ಲೈನ್ ಬುಕಿಂಗ್ ಅನ್ನು ಪಡೆದುಕೊಳ್ಳುತ್ತಾರೆ. ಲಾಗಿನ್ ಪಾಸ್‌ವರ್ಡ್ ರಚಿಸಲು, ನೀವು ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ಒದಗಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ಈಗ ನೀವು ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ಪರಿಶೀಲಿಸಿದ ನಂತರವೇ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಇದನ್ನೂ ಓದಿ-ಪ್ರೇಮಿಗಳ ದಿನದಂದು ಪ್ರಯಾಣಿಕರಿಗೊಂದು ಗುಡ್ ನ್ಯೂಸ್ ನೀಡಲಿದೆ ಭಾರತೀಯ ರೈಲ್ವೆ ...!

ನಿಯಮಗಳಲ್ಲಿನ ಈ ಪ್ರಮುಖ ಬದಲಾವಣೆಗೆ ಸಂಬಂಧಿಸಿದಂತೆ, ಕೋವಿಡ್‌ನ ಮೊದಲ ಮತ್ತು ಎರಡನೇ ಅಲೆಯ ನಂತರ, ಈಗ ಟಿಕೆಟ್ ಬುಕಿಂಗ್ ಕ್ರಮೇಣ ಹೆಚ್ಚುತ್ತಿದೆ ಎಂದು ರೈಲ್ವೆ ತಿಳಿಸಿದೆ. ಹೀಗಿರುವಾಗ ಎರಡ್ಮೂರು ವರ್ಷಗಳಿಂದ ಟಿಕೆಟ್ ಕಾಯ್ದಿರಿಸದ ಸಾಕಷ್ಟು ಜನರಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಷ್ಕ್ರಿಯ ಖಾತೆಗಳನ್ನು ಗುರುತಿಸಲು ಈ ಎಲ್ಲ ಜನರು ಈ ಪರಿಶೀಲನೆಯನ್ನು ಮಾಡಬೇಕಾಗಿದೆ.

ಇದನ್ನೂ ಓದಿ-ರೈಲು ಪ್ರಯಾಣಿಕರೆ ಎಚ್ಚರ ..! ಈ ನಿಯಮಗಳನ್ನು ಉಲ್ಲಂಘಿಸಿದರೆ ಅನುಭವಿಸಬೇಕಾಗುತ್ತದೆ ಜೈಲು ವಾಸ, NGT ಹೊರಡಿಸಿದೆ ಆದೇಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News