ದೇಶದಲ್ಲಿ ಸೂಪರ್ ಎಮರ್ಜೆನ್ಸಿ ಸ್ಥಿತಿ ಇದೆ - ಪ್ರಧಾನಿ ಮೋದಿ ವಿರುದ್ಧ ಮಮತಾ ವಾಗ್ದಾಳಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು, ದೇಶದಲ್ಲಿ ಸೂಪರ್ ತುರ್ತು ಪರಿಸ್ಥಿತಿ ಇದೆ ಮತ್ತು ಸಂವಿಧಾನದ ಹಕ್ಕುಗಳು ಮತ್ತು ಸ್ವಾತಂತ್ರ್ಯ ರಕ್ಷಣೆಗಾಗಿ ಎಲ್ಲರೂ ಸಿದ್ದರಾಗಿರಬೇಕು ಎಂದು ಕರೆ ನೀಡಿದ್ದಾರೆ.

Last Updated : Sep 15, 2019, 01:01 PM IST
ದೇಶದಲ್ಲಿ ಸೂಪರ್ ಎಮರ್ಜೆನ್ಸಿ ಸ್ಥಿತಿ ಇದೆ - ಪ್ರಧಾನಿ ಮೋದಿ ವಿರುದ್ಧ ಮಮತಾ ವಾಗ್ದಾಳಿ  title=
file photo

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು, ದೇಶದಲ್ಲಿ ಸೂಪರ್ ತುರ್ತು ಪರಿಸ್ಥಿತಿ ಇದೆ ಮತ್ತು ಸಂವಿಧಾನದ ಹಕ್ಕುಗಳು ಮತ್ತು ಸ್ವಾತಂತ್ರ್ಯ ರಕ್ಷಣೆಗಾಗಿ ಎಲ್ಲರೂ ಸಿದ್ದರಾಗಿರಬೇಕು ಎಂದು ಕರೆ ನೀಡಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ, ಸ್ವಾಯತ್ತ ಸಂಸ್ಥೆಗಳನ್ನು ನಾಶ ಮಾಡುವುದಲ್ಲದೆ ಪ್ರತಿರೋಧದ ಧ್ವನಿಗಳನ್ನು ಹತ್ತಿಕ್ಕುತ್ತಿದೆ ಎಂದು ಅವರು ಆರೋಪಿಸಿದರು.

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಂದು ಮಮತಾ ಬ್ಯಾನರ್ಜೀ ಟ್ವೀಟ್ ಮಾಡಿ' ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಈ ಸಂದರ್ಭದಲ್ಲಿ ದೇಶದ ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಲು ಮತ್ತೊಮ್ಮೆ ಪ್ರತಿಜ್ಞೆ ಮಾಡೋಣ.'ಸೂಪರ್ ತುರ್ತು ಪರಿಸ್ಥಿತಿಯಲ್ಲಿ ನಮ್ಮ ಸಂವಿಧಾನವು ಖಾತರಿಪಡಿಸಿದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ರಕ್ಷಿಸಲು ಸಾಧ್ಯವಾದಷ್ಟು ಕ್ರಮ ತೆಗೆದುಕೊಳ್ಳೋಣ ' ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ನಾಗರಿಕರ ಪಟ್ಟಿ ನೋಂದಣಿ ಹಾಗೂ ನೂತನ ಮೋಟಾರು ಕಾಯ್ದೆ ವಿರುದ್ಧ ಮಮತಾ ಬ್ಯಾನರ್ಜೀ ಹರಿಹಾಯ್ದಿದ್ದರು. ಅಷ್ಟೇ ಅಲ್ಲದೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ನ ಯೋಚಿತ ಮೃದುವಾದ ಇಳಿಕೆಯನ್ನು ನೋಡಲು ಇಸ್ರೋಗೆ ಪ್ರಧಾನಿ ಭೇಟಿ ನೀಡಿದ್ದಕ್ಕೆ ಅವರ ವಿರುದ್ದ ನೇರ ವಾಗ್ದಾಳಿ ನಡೆಸಿದ್ದರು.

'ಇದ್ದಕ್ಕಿದ್ದಂತೆ, ಇಂದು ನರೇಂದ್ರ ಮೋದಿ ಇಸ್ರೋ ಕಚೇರಿಗೆ ಹೋಗಿದ್ದಾರೆ...ಈಗ ಮುಂದಿನ ನಾಲ್ಕು ದಿನಗಳವರೆಗೆ ಚಂದ್ರಯಾನ ವಿಷಯವು ಪ್ರಾಬಲ್ಯವನ್ನು ಮುಂದುವರೆಸುತ್ತದೆ. ಬಿಜೆಪಿ ಎಲ್ಲವನ್ನು ದೇಶಕ್ಕೆ ಮಾಡಿದಂತೆ. ಅವರು ವಿಜ್ಞಾನವನ್ನು ಕಂಡುಹಿಡಿದಿದ್ದಾರೆ..ಎಂದು ಅವರು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಹೇಳಿದ್ದರು.

Trending News