ತಂದೆಯನ್ನು ಹತ್ಯೆಗೈದು ಮನೆಯೊಳಗೆ ಶವ ಹೂತಿಟ್ಟ ಮಗ: ಕಾರಣವೇನು ಗೊತ್ತಾ?

ಕಳೆದ 2 ದಿನಗಳಿಂದ ತನ್ನ ತಂದೆ ಕಾಣುತ್ತಿಲ್ಲವೆಂದು ದಿನೇಶ್ ಮತ್ತು ಪಪ್ಪು ಪ್ರಕಾಶ್‌ಗೆ ಕರೆ ಮಾಡಿದ್ದಾರೆ. ಪ್ರಕಾಶ್ ತನ್ನ ತಾಯಿಯೊಂದಿಗೆ ಗ್ರಾಮಕ್ಕೆ ಬಂದು ಚುನ್ನಿಲಾಲ್‌ ಬಳಿ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ಆರಂಭದಲ್ಲಿ ಚುನ್ನಿಲಾಲ್ ತನಗೇನೂ ಗೊತ್ತಿಲ್ಲವೆಂದು ವಾದಿಸಿದ್ದಾನೆ. ನಂತರ ತಾನೇ ತಂದೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

Written by - Puttaraj K Alur | Last Updated : Mar 24, 2024, 10:35 AM IST
  • ರಾಜಸ್ಥಾನದಲ್ಲಿ 60 ವರ್ಷದ ತಂದೆಯನ್ನೇ ಕೊಂದ ಮಗ
  • ಕೊಲೆ ಬಳಿಕ ಮನೆಯಲ್ಲೇ ಮೃತದೇಹ ಹೂತ್ತಿಟ್ಟಿದ್ದ ಪುತ್ರ
  • ಆರೋಪಿಯನ್ನು ಬಂಧಿಸಿದ ಡುಂಗರ್‌ಪುರ ಪೊಲೀಸರು
ತಂದೆಯನ್ನು ಹತ್ಯೆಗೈದು ಮನೆಯೊಳಗೆ ಶವ ಹೂತಿಟ್ಟ ಮಗ: ಕಾರಣವೇನು ಗೊತ್ತಾ? title=
ತಂದೆಯನ್ನೇ ಕೊಂದ ಮಗ!

ನವದೆಹಲಿ: 60 ವರ್ಷದ ತಂದೆಯನ್ನು ಕೊಂದ ಮಗನೊಬ್ಬ ಮೃತದೇಹವನ್ನು ಮನೆಯಲ್ಲಿ ಹೂತಿಟ್ಟಿರುವ ಘಟನೆ ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಚುನ್ನಿ ಲಾಲ್ ಎಂಬಾತ ತನ್ನ ತಂದೆ ರಾಜೇಂಗ್ ಬರಾಂಡರೊಂದಿಗೆ ಜಗಳ ಮಾಡಿಕೊಂಡಿದ್ದ. ಈ ವೇಳೆ ತಲೆಗೆ ಹೊಡೆದ ಪರಿಣಾಮ ಆತನ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಂದೆ ಪ್ರಾಣಬಿಟ್ಟ ಬಳಿಕ ಹೌಹಾರಿದ ಚುನ್ನಿ ಲಾಲ್‌ಗೆ ಏನು ಮಾಡಬೇಕೆಂದೇ ಗೊತ್ತಿಲ್ಲ. ಹೀಗಾಗಿ ಪ್ರಕರಣ ಮರೆಮಾಚಲು ತನ್ನ ತಂದೆಯ ಶವವನ್ನು ಅವರ ಮನೆಯ ಅಂಗಳದಲ್ಲಿ ಹೂತು ಹಾಕಿದ್ದ ಅಂತಾ ಪೊಲೀಸರು ತಿಳಿಸಿದ್ದಾರೆ.

ಮೃತ ರಾಜೇಂಗ್ ಬರಾಂಡಗೆ ಪ್ರಕಾಶ್, ದಿನೇಶ್, ಪಪ್ಪು ಮತ್ತು ಚುನ್ನಿ ಲಾಲ್ ಎಂಬ ನಾಲ್ವರು ಗಂಡು ಮಕ್ಕಳಿದ್ದರು. ಪ್ರಕಾಶ್ ಮತ್ತು ಅವರ ತಾಯಿ ಅಹಮದಾಬಾದ್‌ನಲ್ಲಿ ವಾಸವಾಗಿದ್ದರೆ, ಇತರರು ಡುಂಗರ್‌ಪುರದ ಬಲ್ವಾರ ಗ್ರಾಮದಲ್ಲಿ ವಾಸವಾಗಿದ್ದರು. ರಾಜೇಂಗ್ ಅವರು ಚುನ್ನಿಲಾಲ್‌ನೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರಂತೆ.

ಇದನ್ನೂ ಓದಿ: Lok Sabha Election 2024: ರಾಜ್ಯದ ಈ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಒಂದೇ ಪಕ್ಷ ಪ್ರಾಬಲ್ಯ ಇದೆ, ಆದರೆ ಈ ಬಾರಿ!

ಕಳೆದ 2 ದಿನಗಳಿಂದ ತನ್ನ ತಂದೆ ಕಾಣುತ್ತಿಲ್ಲವೆಂದು ದಿನೇಶ್ ಮತ್ತು ಪಪ್ಪು ಪ್ರಕಾಶ್‌ಗೆ ಕರೆ ಮಾಡಿದ್ದಾರೆ. ಪ್ರಕಾಶ್ ತನ್ನ ತಾಯಿಯೊಂದಿಗೆ ಗ್ರಾಮಕ್ಕೆ ಬಂದು ಚುನ್ನಿಲಾಲ್‌ ಬಳಿ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ಆರಂಭದಲ್ಲಿ ಚುನ್ನಿಲಾಲ್ ತನಗೇನೂ ಗೊತ್ತಿಲ್ಲವೆಂದು ವಾದಿಸಿದ್ದಾನೆ. ನಂತರ ತಾನೇ ತಂದೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಪ್ರಕರಣ ಕುರಿತು ತಾಯಿ ಮತ್ತು ಇತರೆ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮನೆಯ ಆವರಣದಿಂದ ಹೊರತೆಗೆದು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ)ಅಡಿ ಪ್ರಕರಣ ದಾಖಲಿಸಲಾಗಿದ್ದು, ಚುನ್ನಿ ಲಾಲ್‌ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಮಾರ್ಚ್ 28ರವರೆಗೆ ನ್ಯಾಯಾಂಗ ಬಂಧನ: ಜೈಲಿನಲ್ಲೇ ಹೋಳಿ ಆಚರಿಸಲಿರುವ ಅರವಿಂದ್‌ ಕೇಜ್ರಿವಾಲ್!‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News