Ratan Tata: 'ಭಾರತೀಯನಾಗಿರುವುದೇ ಅದೃಷ್ಟ, ಭಾರತ ರತ್ನಕ್ಕಾಗಿ ಬೇಡ ಒತ್ತಾಯ'

ಪ್ರಶಸ್ತಿಗಾಗಿ ಲಾಬಿಗಳು ನಡೆಯುವ ಈ ಕಾಲದಲ್ಲಿ ಪ್ರಶಸ್ತಿಗಾಗಿ ಯಾವ ಒತ್ತಾಯ, ಅಭಿಯಾನವೂ ಬೇಡ

Last Updated : Feb 6, 2021, 06:33 PM IST
  • ಪ್ರಶಸ್ತಿಗಾಗಿ ಲಾಬಿಗಳು ನಡೆಯುವ ಈ ಕಾಲದಲ್ಲಿ ಪ್ರಶಸ್ತಿಗಾಗಿ ಯಾವ ಒತ್ತಾಯ, ಅಭಿಯಾನವೂ ಬೇಡ
  • ಜನರಿಂದ ಮತ್ತಷ್ಟು ಮೆಚ್ಚುಗೆಗೆ ಒಳಗಾದ ಉದ್ಯಮಿ ರತನ್​ ಟಾಟಾ
  • ಈ ಮೂಲಕ ಟಾಟಾ ಅವರಲ್ಲಿರುವ ದೇಶಭಕ್ತಿ-ರಾಷ್ಟ್ರಪ್ರೇಮ ಮತ್ತೊಮ್ಮೆ ಅನಾವರಣಗೊಂಡಿದೆ.
Ratan Tata: 'ಭಾರತೀಯನಾಗಿರುವುದೇ ಅದೃಷ್ಟ, ಭಾರತ ರತ್ನಕ್ಕಾಗಿ ಬೇಡ ಒತ್ತಾಯ' title=

ನವದೆಹಲಿ: ಪ್ರಶಸ್ತಿಗಾಗಿ ಲಾಬಿಗಳು ನಡೆಯುವ ಈ ಕಾಲದಲ್ಲಿ ಪ್ರಶಸ್ತಿಗಾಗಿ ಯಾವ ಒತ್ತಾಯ, ಅಭಿಯಾನವೂ ಬೇಡ ಎಂದು ಹೇಳುವ ಮೂಲಕ ಉದ್ಯಮಿ ರತನ್​ ಟಾಟಾ ಅವರು ಜನರಿಂದ ಮತ್ತಷ್ಟು ಮೆಚ್ಚುಗೆಗೆ ಒಳಗಾಗಿದ್ದಾರೆ. ಈ ಮೂಲಕ ಟಾಟಾ ಅವರಲ್ಲಿರುವ ದೇಶಭಕ್ತಿ-ರಾಷ್ಟ್ರಪ್ರೇಮ ಮತ್ತೊಮ್ಮೆ ಅನಾವರಣಗೊಂಡಿದೆ.

ದೇಶಭಕ್ತಿ, ರಾಷ್ಟ್ರಕ್ಕಾಗಿ ಏನೂ ಬೇಕಾದರೂ ನೆರವು ನೀಡುವೆ ಎಂದು ಹೇಳುವ ಟಾಟಾ(Ratan Tata) ಬರೀ ಮಾತಿಗೇ ಸೀಮಿತವಾಗಿಲ್ಲ. ಅದನ್ನು ಪ್ರವಾಹ ಹಾಗೂ ಕರೊನಾ ಸಂಕಷ್ಟದ ಸಂದರ್ಭದಲ್ಲಿ ಕಾರ್ಯರೂಪಕ್ಕೆ ತರುವ ಮೂಲಕ ತಮ್ಮದು ನುಡಿದಂತೆ ನಡೆ ಎಂಬುದನ್ನೂ ಸಾಬೀತು ಪಡಿಸಿದ್ದಾರೆ. ಲಾಭಕ್ಕಿಂತ ದೇಶದ ಹಿತಕ್ಕೇ ಆದ್ಯತೆ ಎಂಬ ಧ್ಯೇಯದ ಮೇಲೆಯೇ ಹಲವಾರು ಕಂಪನಿಗಳನ್ನು ಕಟ್ಟಿ ಮುನ್ನಡೆಸುತ್ತಿರುವ ಟಾಟಾ ಅವರಿಗೆ ಭಾರತ ರತ್ನ ಸಿಗಬೇಕು ಎಂಬ ಅಭಿಪ್ರಾಯ ಸಹಜವಾಗಿಯೇ ವ್ಯಕ್ತವಾಗಿದೆ.

Fact Check: 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಯೋಜನೆಯಡಿ ಪ್ರತಿಯೊಬ್ಬರ ಖಾತೆಗೆ 1 ಲಕ್ಷ ರೂ.! ನಿಜಾನಾ?

#BharatRatnaForRatanTata ಎಂಬ ಹ್ಯಾಷ್​ಟ್ಯಾಗ್​ನಡಿ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಖ್ಯಾತ ಉದ್ಯಮಿ ರತನ್ ಟಾಟಾ ಅವರನ್ನು ಭಾರತ ರತ್ನ ಪ್ರಶಸ್ತಿ(Bharat Ratna Award)ಗೆ ಪರಿಗಣಿಸಬೇಕು ಎಂಬ ಆಗ್ರಹದೊಂದಿಗೆ ಟ್ವಿಟರ್​ನಲ್ಲಿ ಅಭಿಯಾನವೂ ಆರಂಭಗೊಂಡಿದೆ. ಅದು ಟಾಟಾ ಅವರ ಗಮನಕ್ಕೂ ಬಂದಿದೆ. ಅದಕ್ಕೆ ಟ್ವಿಟರ್​ನಲ್ಲೇ ಪ್ರತಿಕ್ರಿಯಿಸಿರುವ ಟಾಟಾ, ಭಾರತ ರತ್ನ ಕೊಡಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿರುವುದರ ಬಗ್ಗೆ ಸಂತೋಷವಾದರೂ, ಅಂಥದ್ದೊಂದು ಅಭಿಯಾನವನ್ನು ನಿಲ್ಲಿಸುವಂತೆ ವಿನಯಪೂರ್ವಕವಾಗಿ ಕೋರಿಕೊಳ್ಳುತ್ತೇನೆ. ನನಗೆ ಭಾರತೀಯನಾಗಿರುವುದೇ ಅತ್ಯಂತ ದೊಡ್ಡ ಅದೃಷ್ಟ ಎಂದು ಹೇಳಿರುವ ಅವರು ಭಾರತ ರತ್ನಕ್ಕಾಗಿ ಆಗ್ರಹ ಬೇಡ ಎಂದು ಕೋರಿಕೊಂಡಿದ್ದಾರೆ. ಮಾತ್ರವಲ್ಲ, ಭಾರತದ ಪ್ರಗತಿಗಾಗಿ ಮತ್ತಷ್ಟು ಕೊಡುಗೆ ನೀಡಲು ಪ್ರಯತ್ನಿಸುತ್ತಿರುತ್ತೇನೆ ಎಂಬುದಾಗಿ ಹೇಳಿದ್ದಾರೆ.

Corona Vaccination ವಿಷಯದಲ್ಲಿ ದಾಖಲೆ ಬರೆದ ಭಾರತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News