Corona Vaccination ಬಳಿಕ ನಾಪತ್ತೆಯಾದ 1800 ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರು

Corona Vaccination - ಮೊದಲ ಸುತ್ತಿನ ಕೋವಿಡ್ ವ್ಯಾಕ್ಸಿನೇಷನ್ ಪೂರ್ಣಗೊಂಡ ತಕ್ಷಣ 1800 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ನಾಪತ್ತೆಯಾಗಿದ್ದಾರೆ. 

Written by - Nitin Tabib | Last Updated : Feb 6, 2021, 12:51 PM IST
  • ವ್ಯಾಕ್ಸಿನೇಷನ್ ಬಳಿಕ 1800 ಆರೋಗ್ಯ ಕಾರ್ಯಕರ್ತರು ನಾಪತ್ತೆಯಾಗಿದ್ದಾರೆ.
  • ಉತ್ತರ ಪ್ರದೇಶದಲ್ಲಿ ನಡೆದ ವ್ಯಾಕ್ಸಿನೇಷನ್ ಅಭಿಯಾನ ಬಳಿಕ ಮಾಹಿತಿ ಬಹಿರಂಗ.
  • ಜಿಲ್ಲಾ ರೋಗನಿರೋಧಕ ಅಧಿಕಾರಿ ಡಾ.RN ಸಿಂಗ್ ಹೇಳಿದ್ದೇನು?
Corona Vaccination ಬಳಿಕ ನಾಪತ್ತೆಯಾದ 1800 ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರು title=
Corona Vaccination (File Photo)

ನವದೆಹಲಿ: Corona Vaccination - ಮೊದಲ ಸುತ್ತಿನ ಕೋವಿಡ್ ವ್ಯಾಕ್ಸಿನೇಷನ್ (Corona Vaccination) ಪೂರ್ಣಗೊಂಡ ತಕ್ಷಣ ಉತ್ತರ ಪ್ರದೇಶದಲ್ಲಿ (Uttar Pradesh) 1800 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ನಾಪತ್ತೆಯಾಗಿದ್ದಾರೆ. ಆರೋಗ್ಯ ಇಲಾಖೆಯಿಂದ 26,292 ಉದ್ಯೋಗಿಗಳ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ, ಆದರೆ ಇದುವರೆಗೆ ಕೇವಲ 24,289 ಆರೋಗ್ಯ ಕಾರ್ಯಕರ್ತರನ್ನು ಪತ್ತೆ ಮಾಡಲಾಗಿದೆ.  ಈ ಆರೋಗ್ಯ ಕಾರ್ಯಕರ್ತರ (Health Workers) ದಾಖಲೆ ಮಾಡುವಲ್ಲಿ ಏನಾದರೂ ದೋಷ ಕಂಡುಬಂದಿದೆ ಎಂಬ ಆತಂಕವೂ ಇದೀಗ ಎದುರಾಗಿದೆ.

ಇದನ್ನು ಓದಿ- Corona Vaccine ಪಡೆದ ಬಳಿಕ ಹಲವರಲ್ಲಿ ಅಡ್ಡಪರಿಣಾಮ, ಇಲ್ಲಿದೆ ಸಂಪೂರ್ಣ ವಿವರ

ಕರೋನಾ ಹೆಮ್ಮಾರಿಯನ್ನು ತಡೆಯಲು ಲಸಿಕೆಯನ್ನು (Corona Vaccine) ಮೊದಲು ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗಿದೆ. ಬಳಿಕ ಎಲ್ಲಾ ಜಿಲ್ಲೆಗಳ ಆರೋಗ್ಯ ಕಾರ್ಯಕರ್ತರ ಪಟ್ಟಿಯನ್ನು ಸರ್ಕಾರ ಕೇಳಿದೆ. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಎಲ್ಲಾ ಉದ್ಯೋಗಿಗಳು ಸೇರಿದ್ದಾರೆ. ಜಿಲ್ಲೆಯಿಂದ ಸರ್ಕಾರಕ್ಕೆ ಕಳುಹಿಸಲಾದ ಪಟ್ಟಿಯಲ್ಲಿ 26292 ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ಜಿಲ್ಲೆಗಳು ರಾಜ್ಯದ ಟಾಪ್ 5 ರಲ್ಲಿ ಸೇರಿಸಲಾಗಿದೆ. ಆದರೆ ವ್ಯಾಕ್ಸಿನೇಷನ್ ಪ್ರಾರಂಭಿಸಿದಾಗ, 1800 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ನಾಪತ್ತೆಯಾಗಿದ್ದಾರೆ. ಮೊದಲ ಹಂತದ ವ್ಯಾಕ್ಸಿನೇಷನ್ ಪೂರ್ಣಗೊಂಡಿದ್ದು, ಈವರೆಗೆ 24289 ಆರೋಗ್ಯ ಕಾರ್ಯಕರ್ತರ ದಾಖಲೆಯನ್ನು ಪರಿಶೀಲಿಸಲಾಗಿದೆ.

ಇದನ್ನು ಓದಿ- ಲಸಿಕೆ ಪಡೆದ ಬಳಿಕ Manipal Hospital ಚೇರಮನ್ ಡಾ. ಸುದರ್ಶನ್ ಬಲ್ಲಾಳ್ ಪ್ರತಿಕ್ರಿಯೆ ಏನು?

ಒಂದೇ ಹೆಸರು ಎರಡು ಬಾರಿ ಶಾಮೀಲಾಗಿರುವ ಸಾಧ್ಯತೆ ಅಲ್ಲಗಳೆಯಲಾಗಿಲ್ಲ
ಮೊದಲ ಹಂತದ ವ್ಯಾಕ್ಸಿನೇಷನ್ (Cororna Vaccination Drive) ಪೂರ್ಣಗೊಂಡ ನಂತರ ಸುಮಾರು 1800 ಆರೋಗ್ಯ ಕಾರ್ಯಕರ್ತರು ಕಡಿಮೆ ಕಂಡುಬಂದಿದ್ದಾರೆ ಎಂದು ಜಿಲ್ಲಾ ರೋಗನಿರೋಧಕ ಅಧಿಕಾರಿ ಡಾ.ಆರ್.ಎನ್. ಸಿಂಗ್ ಹೇಳಿದ್ದಾರೆ.  ಅನೇಕ ಆರೋಗ್ಯ ಕಾರ್ಯಕರ್ತರ ಹೆಸರನ್ನು ಎರಡು ಅಥವಾ ಹೆಚ್ಚಿನ ಬಾರಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.  ಅಷ್ಟೇ ಅಲ್ಲ ಎಲ್ಲಾ ಮಾನದಂಡಗಳನ್ನು ಪೂರೈಸದವರ ಹೆಸರುಗಳು ಇದರಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ- Corona Vaccination : ಹೃದಯಾಘಾತದಿಂದ ಇನ್ನೊಬ್ಬ ಆರೋಗ್ಯ ಕಾರ್ಯಕರ್ತ ಸಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News